ದೇಶದಲ್ಲಿ ನಿಜಕ್ಕೂ ಎಲ್‌ಪಿಜಿ ಕೊರತೆ ಇದೆಯೇ, ಗಾಬರಿ ಬೇಡ: ಕೃಷ್ಣ ಭಟ್ ಬರಹ | LPG Shortage in India: Krishna Bhat Explains Domestic vs Industrial Use Confusion Behind Panic Buying

Karnataka

oi-Shiddalingesh S

ಬೆಂಗಳೂರು: ದೇಶದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ ಎಂಬ ಸುದ್ದಿಗಳು ಇತ್ತೀಚೆಗೆ ಜನರಲ್ಲಿ ಆತಂಕ ಮೂಡಿಸುತ್ತಿದೆ. ಆದರೆ ಈ ಆತಂಕದ ಹಿಂದೆ ನಿಜವಾದ ಕೊರತೆಗಿಂತ ಹೆಚ್ಚು ಗೊಂದಲ ಮತ್ತು ತಪ್ಪಾಗಿ ಅರ್ಥೈಸಿಕೊಂಡಿರುವುದು ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಶೇಷವಾಗಿ ಈ ಡೊಮೆಸ್ಟಿಕ್ ಮತ್ತು ಇಂಡಸ್ಟ್ರಿಯಲ್ ಬಳಕೆ ನಡುವಿನ ವ್ಯತ್ಯಾಸವನ್ನು ತಪ್ಪಾಗಿ ಅರ್ಥಮಾಡಿಕೊಳ್ಳವುದರಿಂದ ಎಲ್‌ಪಿಜಿ ಕೊರತೆ ಎಂದು ಊಹಾಪೋಹಳು ಹರಡಿದ್ದು, ಇದರಿಂದ ಜನರು ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಎಲ್‌ಪಿಜಿ ಸಿಲೆಂಡರ್‌ಗಳನ್ನು ಬುಕ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಕುರಿತು ಲೇಖಕ ಕೃಷ್ಣ ಭಟ್ ಅವರ ಬರಹ ಇಲ್ಲಿದೆ.

ಈ “ಎಲ್‌ಪಿಜಿ ಕೊರತೆ” ಎಂಬ ಸುದ್ದಿಯನ್ನು ಹಬ್ಬಿಸುವುದಕ್ಕೆ ಮೂಲ ಕಾರಣ ಡೊಮೆಸ್ಟಿಕ್ ಎಂಬ ಪದವನ್ನು ದುರ್ಬಳಕೆ ಮಾಡಿದ್ದು! ನಮ್ಮ ಎಲ್‌ಪಿಜಿಯನ್ನು ಎರಡು ವಿಧಾನದಲ್ಲಿ ಬಳಕೆ ಮಾಡಲಾಗುತ್ತದೆ. ಒಂದನೆಯದು ನಮಗೆಲ್ಲ ಗೊತ್ತಿರುವ ಹಾಗೆ ಅಡುಗೆ ಮಾಡುವುದಕ್ಕೆ. ಅದು ಮನೆಯಿಂದ ಹೋಟೆಲ್‌ವರೆಗೆ ಎಲ್ಲ ಕಡೆ ಅಡುಗೆ ಮಾಡುವುದು. ಇದನ್ನು ಡೊಮೆಸ್ಟಿಕ್ ಬಳಕೆ ಎಂದು ಈ ಉದ್ಯಮದ ಭಾಷೆಯಲ್ಲಿ ಕರೆಯಲಾಗುತ್ತದೆ.

LPG Shortage in India

ಇನ್ನೊಂದು ಈ ಎಲ್‌ಪಿಜಿಗೆ ಮೂಲವಾದ ಪ್ರೊಪೇನ್ ಮತ್ತು ಬುಟೇನ್ ಅನ್ನು ಒಡೆದು, ಎಥಿಲೀನ್ ಹಾಗೂ ಪ್ರೊಪಿಲೀನ್ ಆಗಿ ಪರಿವರ್ತಿಸಿ ಅವುಗಳನ್ನು ಪ್ಲಾಸ್ಟಿಕ್ಸ್, ಸಿಂಥೆಟಿಕ್ ರಬ್ಬರ್ ಹಾಗೂ ಸಾಲ್ವೆಂಟ್‌ ಇತ್ಯಾದಿ ಉತ್ಪನ್ನಗಳನ್ನಾಗಿ ತಯಾರಿಕೆ ಮಾಡಲಾಗುತ್ತದೆ. ಇದು ಇಂಡಸ್ಟ್ರಿಯಲ್‌ ಬಳಕೆ.

ಮೊನ್ನೆ ಕೇಂದ್ರ ಸರ್ಕಾರ ಒಂದು ಸುತ್ತೋಲೆ ಹೊರಡಿಸಿ, ಈ ಡೊಮೆಸ್ಟಿಕ್ ಬಳಕೆಗೆ ಮಾತ್ರ ಪ್ರೊಪೇನ್ ಮತ್ತು ಬುಟೇನ್ ಸ್ಟ್ರೀಮ್‌ಗಳನ್ನು ಬಳಸಬೇಕು. ಇಂಡಸ್ಟ್ರಿಯಲ್ ಬಳಕೆಗೆ ಇದನ್ನು ಕೊಡಬಾರದು ಎಂದು ಈ ರಿಫೈನರಿಗಳಿಗೆ ಸೂಚನೆ ನೀಡಿತು.

ಇಲ್ಲಿನ ಡೊಮೆಸ್ಟಿಕ್ ಎಂಬ ಪದ ಭಾರಿ ಗೊಂದಲಕ್ಕೆ ದೂಡಿತು. ಡೊಮೆಸ್ಟಿಕ್ ಎಂದರೆ ಎಲ್‌ಪಿಜಿ ಡಿಸ್ಟ್ರಿಬ್ಯೂಶನ್ ಲೆವೆಲ್‌ನಲ್ಲಿ ಬೇರೆಯದೇ ಅರ್ಥ! ಡೊಮೆಸ್ಟಿಕ್ ಮತ್ತು ಕಮರ್ಷಿಯಲ್‌ ಎಂದರೆ ಎಲ್‌ಪಿಜಿ ಡಿಸ್ಟ್ರಿಬ್ಯೂಶನ್‌ನಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ ಮನೆಗೆ ಬಳಸದ ಎಲ್ಲ ಎಲ್‌ಪಿಜಿಯನ್ನು ಕಮರ್ಷಿಯಲ್ ಎಂದು ಕರೆಯಲಾಗುತ್ತದೆ. ಇದನ್ನೇ ಬೇರೆ ಅರ್ಥದಲ್ಲಿ ತಿಳಿದುಕೊಂಡು ಕಮರ್ಷಿಯಲ್ ಡಿಸ್ಟ್ರಿಬ್ಯೂಷನ್‌ಗೆ ಇನ್ನು ಎಲ್‌ಪಿಜಿ ಕೊಡುವುದಿಲ್ಲ ಎಂದು ಜನರು ವಿಪರೀತ ಪ್ರಮಾಣದಲ್ಲಿ ಎಲ್‌ಪಿಜಿ ಖರೀದಿ ಮಾಡುವುದಕ್ಕೆ ಮುಗಿಬಿದ್ದರು.

ಇದೇ ಕಾರಣಕ್ಕೆ ವಿಪರೀತ ಖರೀದಿಯೂ ನಡೆಯುತ್ತಿದೆ. ಇದನ್ನು ತಡೆಯುವುದಕ್ಕೆ ಸರ್ಕಾರ ಸಿಲಿಂಡರ್‌ ಬುಕಿಂಗ್ ಸಮಯಕ್ಕೂ ಮಿತಿ ಹೇರಿದೆ. ಅದಾಗಲೇ ಇದೇ ಊಹಾಪೋಹವನ್ನು ಬಳಸಿಕೊಂಡು ಬ್ಲ್ಯಾಕ್‌ ಮಾರ್ಕೆಟ್ ಕೂಡ ಶುರುವಾಗಿದೆ. ಅದರಲ್ಲಿ ದುಡ್ಡು ಮಾಡುವ ದಂಧೆಯೂ ಶುರುವಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಈ ಎಲ್‌ಪಿಜಿ ಕೊರತೆ ಎಂಬ ಊಹಾಪೋಹ ಶುರುವಾಗಿದ್ದು ಅತಿ ಹೆಚ್ಚು ಭ್ರಷ್ಟ ಆಡಳಿತ ಇರುವ ರಾಜ್ಯಗಳಲ್ಲಿ ಎಂಬುದನ್ನು ಗಮನಿಸಿ. ಸಮಸ್ಯೆ ಆಗುವುದಾದರೆ ಎಲ್ಲ ರಾಜ್ಯಗಳಲ್ಲೂ ಸಮಾನ ಪ್ರಮಾಣದಲ್ಲಿ ಆಗಬೇಕಿತ್ತಲ್ಲ. ಆದರೆ, ಹಾಗೆ ಆಗಿಲ್ಲ. ಕೆಲವೇ ರಾಜ್ಯಗಳಲ್ಲಿ ಮಾತ್ರ ಸಮಸ್ಯೆ ಶುರುವಾಗಿದೆ. ಬೇರೆ ರಾಜ್ಯಗಳಲ್ಲಿ ಈಗಲೂ ಸಿಲಿಂಡರ್ ಸಾಮಾನ್ಯದ ಹಾಗೆ ಸಿಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ವಿಪರೀತ ಬುಕಿಂಗ್ ಮಾಡುತ್ತಿದ್ದಂತೆಯೇ ಕೇಂದ್ರ ಸರ್ಕಾರ ಅದನ್ನು ತಡೆಯುವುದಕ್ಕೆ ಬುಕಿಂಗ್ ಸಮಯಕ್ಕೆ ಮಿತಿ ಹೇರಿತು. ಹೀಗೆ ವಿಪರೀತ ಬುಕಿಂಗ್ ಮಾಡುವುದರಿಂದ ಕೃತಕ ಅಭಾವ ಸೃಷ್ಟಿಯಾಗಿ, ಅದರಿಂದ ಬೆಲೆ ಏರಿಕೆಯಾದರೆ ಅವರಿಗೆ ಲಾಭ.

ನಮ್ಮ ದೇಶದಲ್ಲಿ 20 ಕ್ಕೂ ಹೆಚ್ಚು ದಿನಗಳಿಗಾಗುವಷ್ಟು ಎಲ್‌ಪಿಜಿ ಇದೆ. ಇಡೀ ದೇಶದಲ್ಲಿ 31.3 ಮಿಲಿಯನ್ ಟನ್ ಎಲ್‌ಪಿಜಿ ಬಳಕೆಯಾಗುತ್ತದೆ. ಈ ಪೈಕಿ 12.8 ಮಿಲಿಯನ್ ಟನ್ ಎಲ್‌ಪಿಜಿಯನ್ನು ನಮ್ಮ ದೇಶದಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಆಮದು ಮಾಡಿಕೊಂಡ ಕಚ್ಚಾ ತೈಲದಿಂದ ಈ ಎಲ್‌ಪಿಜಿ ಉತ್ಪಾದನೆಯಾಗುತ್ತದೆ. ಅಂದರೆ, 40% ಉತ್ಪಾದನೆ ನಮ್ಮಲ್ಲೇ ಆಗುತ್ತಿದೆ. ಇನ್ನುಳಿದ 60% ವಿದೇಶದಿಂದ ನೇರವಾಗಿ ಎಲ್‌ಪಿಜಿಯನ್ನೇ ಆಮದು ಮಾಡಿಕೊಳ್ಳುತ್ತೇವೆ.

ಇನ್ನು, ಇದೇ ಪ್ರೊಪೇನ್ ಮತ್ತು ಬುಟೇನ್‌ ಬಳಸಿಕೊಂಡು ಪ್ಲಾಸ್ಟಿಕ್ ಹಾಗೂ ಇತರ ಉತ್ಪನ್ನಗಳನ್ನು ಮಾಡುವುದರ ಬದಲಿಗೆ ಎಲ್‌ಪಿಜಿ ತಯಾರಿಸಿದರೆ, ಅದರಿಂದ ಮತ್ತೊಂದು 5-6 ಮಿಲಿಯನ್ ಟನ್ ಉತ್ಪಾದನೆಯಾಗುತ್ತದೆ. ಉಳಿದವನ್ನು ನಾವು ಆಮದು ಮಾಡಿಕೊಳ್ಳಲೇಬೇಕು. ಈ ಪೈಕಿ ಬಹುತೇಕ 80%+ ಗಲ್ಫ್ ದೇಶಗಳಿಂದ ಬರುತ್ತಿತ್ತು, ಈಗ ಅದು ನಿಂತುಹೋಗಿದೆ ಎಂಬುದು ಆತಂಕದ ಸಂಗತಿಯಾದರೂ ನಮಗೆ ಬೇಕಿರುವ ಸುಮಾರು 14-15 ಮಿಲಿಯನ್ ಟನ್‌ ಎಲ್‌ಪಿಜಿಯನ್ನು ಬೇರೆ ದೇಶಗಳಿಂದ ತರುವುದಕ್ಕೆ ಸರ್ಕಾರ ಏನಾದರೂ ಕೆಲಸ ಮಾಡಿಯೇ ಮಾಡುತ್ತದೆ. ಅಮೆರಿಕ, ನಾರ್ವೆ ಅಥವಾ ಅಲ್ಜೀರಿಯಾ ಕಡೆಯಿಂದ ಸ್ವಲ್ಪ ಹೆಚ್ಚು ಖರ್ಚಿನ ಬಾಬತ್ತಾದರೂ ತರುವ ವ್ಯವಸ್ಥೆಯನ್ನೋ ಮಾಡಿಯೇ ಮಾಡುತ್ತದೆ.

ನಾವು ಈಗ ಗಾಬರಿ ಬಿದ್ದು ಓಡಿ ಹೋಗಿ ಕ್ಯೂನಲ್ಲಿ ನಿಂತು ಖರೀದಿ ಮಾಡಿ, ಎಲ್ಲರನ್ನೂ ಸಮಸ್ಯೆಗೆ ದೂಡಬೇಕಿಲ್ಲ. ನೆನಪಿರಲಿ, 2014 ಕ್ಕೂ ಮೊದಲು ಯಾವ ಯುದ್ಧ ಇಲ್ಲದಿದ್ದಾಗಲೂ, ಎಲ್ಲವೂ ಸರಿ ಇದ್ದಾಗಲೂ, ಒಂದು ಸಿಲಿಂಡರ್ ಬುಕ್ ಮಾಡಿದರೆ ಅದು ಬರುವುದಕ್ಕೆ 15 ದಿನಗಳವರೆಗೆ ಬೇಕಾಗುತ್ತಿತ್ತು. ನಿಮಗೆ ಸಿಲಿಂಡರ್‌ ಏಜೆನ್ಸಿಯವರ ಜೊತೆಗೆ ಪರಿಚಯ ಇದ್ದರೆ ಮಾತ್ರ ಮರುದಿನವೇ ಸಿಲಿಂಡರ್ ಸಿಗುತ್ತಿತ್ತು. ಆಗ ನಾವು ಯಾರೂ ಹೋಗಿ ಗಲಾಟೆ ಮಾಡಲಿಲ್ಲ. ಏಜೆನ್ಸಿ ಎದುರು ಹೋಗಿ ಕ್ಯೂ ಹಚ್ಚಲಿಲ್ಲ, ಈ ವಿಷಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸುದ್ದಿಯೂ ಆಗಲಿಲ್ಲ. ಆದರೆ, ಈಗ ಈ ಸಂದಿಗ್ಧ ಸನ್ನಿವೇಶದಲ್ಲಿ ಎಲ್ಲ ಇದ್ದೂ ಗಾಬರಿ ಬೀಳುತ್ತಿದ್ದೇವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/lpg-shortage-in-india-krishna-bhat-explains-domestic-vs-industrial-use-confusion-behind-panic-buying-446567.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo