ಧರ್ಮಸ್ಥಳ ಪ್ರಕರಣ: ಕೋರ್ಟ್ ಆದೇಶ ಉಲ್ಲಂಘಿಸಿದ ಯೂಟ್ಯೂಬರ್ ಬಂಧನ | Youtuber Santosh Arrested by Bantwal police for Contempt of Court over the Dharmasthala case

Karnataka

oi-Shankrappa Parangi

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ನ್ಯಾಯಾಲಯ ನೀಡಿದ್ದ ಆದೇಶ ಉಲ್ಲಂಘಿಸಿದ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನ ಸಂತೋಷ್ ಅವರನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ. ಕೋರ್ಟ್ ನಿರ್ದೇಶನದನ್ವಯ ವಾರೆಂಟ್ ಜಾರಿ ಮಾಡಿ ಬಂಧಿಸಲಾಗಿದ್ದು, ಒಟ್ಟು 30 ದಿನ ಸಂತೋಷ್ ಪೊಲೀಸ್ ವಶದಲ್ಲಿರಲಿದ್ದಾರೆ.

ದಕ್ಷಿಣ ಕನ್ನಡದ ಧರ್ಮಸ್ಥಳ ಪ್ರಕರಣವು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಸೂಕ್ತ ತನಿಖೆ ನಡೆದು, ಕೆಲವು ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಸಾಬೀತಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಎಸ್‌ಐಟಿ ಕೋರ್ಟ್‌ಗೆ ವರದಿ ಸಹ ಸಲ್ಲಿಸಿತ್ತು. ಮತ್ತೊಂದೆಡೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮತ್ತವರ ಕುಟುಂಬ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡದಂತೆ ಕೋರ್ಟ್‌ನಿಂದ ವರ್ಷಗಳ ಹಿಂದೆಯೇ ಆದೇಶ (ಇಂಜೆಕ್ಷನ್) ನೀಡಲಾಗಿತ್ತು.

Dharmasthala case youtuber arrest

ಸಂತೋಷ್ ವಿರುದ್ಧ ಮಾನಹಾನಿ ಪ್ರಕರಣ ದಾಖಲು

ಕೋರ್ಟ್ ಆದೇಶ ನೀಡಿದರೂ ಸಹಿತ ಆದೇಶ ಉಲ್ಲಂಘಿಸಿದ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನ ಸಂತೋಷ್ ಅವರನ್ನು ಬಂಧಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನ್ಯಾಯವಾದಿ ರಾಜಶೇಖರ್‌ ಹಿಲಿಯಾರು ಅವರು ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದೇಶ ಉಲ್ಲಂಘಿಸಿದ ಯೂಟ್ಯೂಬ್ ಚಾನಲ್‌ನ ಸಂತೋಷ್ ಅವರ ಬಂಧನಕ್ಕೆ ವಾರೆಂಟ್ ಜಾರಿಗೆ ಕೋರಿದ್ದರು. ಅರ್ಜಿದಾರರು ಮಾನಹಾನಿ ಪ್ರಕರಣವನ್ನು ದಾಖಲಿಸಿ ಪ್ರತಿವಾದಿಯ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವಂತೆ ಅವರು ಮನವಿ ಮಾಡಿದ್ದರು.

ನ್ಯಾಯಾಲವು ‘2023ರ ಸೆಪ್ಟೆಂಬರ್ 13ರಂದು ನೀಡಲಾದ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿನೆ ಮಾಡಿದ ಆರೋಪದ ಮೇಲೆ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ವಿರುದ್ಧ ಬೆಂಗಳೂರು ಪ್ರಿನ್ಸಿಪಲ್ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಬಂಧನಕ್ಕೆ ವಾರೆಂಟ್‌ ಜಾರಿ ಮಾಡಿದೆ.

ನ್ಯಾಯಾಲಯ ಮಂಗಳೂರು ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯದ ಅಧಿಕಾರಿಗಳಿಗೆ ಅಗತ್ಯ ಸಹಾಯ ಒದಗಿಸುವಂತೆ ನಿರ್ದೇಶಿಸಿತು. ಇನ್ನೂ ಬಂಟ್ವಾಳ ಪೊಲೀಸ್ ಠಾಣೆ ಮತ್ತು ಕಡಬ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಪ್ರತಿವಾದಿಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚನೆ ನೀಡಿತು. ನ್ಯಾಯಾಂಗ ನಿಂದನೆಗಾಗಿ ಪ್ರತಿವಾದಿಗೆ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಬಂಧನ ವಾರಂಟ್ ಜಾರಿ ಮಾಡುತ್ತಿದ್ದಂತೆ ಸಂಚಾರಿ ಸ್ಟುಡಿಯೋನ ಸಂತೋಷ್‌ ರನ್ನು ಪೋಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಅರ್ಜಿದಾರರು ಸುಳ್ಳು ಸುದ್ದಿ, ಮಾನಹಾನಿ ವಿಷಯಗಳಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ತಡೆ ಆದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2023ರ ಸೆಪ್ಟೆಂಬರ್ 13ರಂದು ನ್ಯಾಯಾಲಯವು ತಾತ್ಕಾಲಿಕ ತಡೆ ಆದೇಶ ನೀಡಿತ್ತು. ಪ್ರತಿವಾದಿ ಅಥವಾ ಯಾರಾದರೂ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸ್ಥೆ, ಕುಟುಂಬ ಸದಸ್ಯರು ಅಥವಾ ದೇವಸ್ಥಾನದ ವಿರುದ್ಧ ಸುಳ್ಳು ಆರೋಪ ಮಾಡಬಾರದು, ಮಾನಹಾನಿ ವಿಡಿಯೋಗಳನ್ನು ಪ್ರಕಟಿಸಬಾರದು ಅಥವಾ ಹರಡಬಾರದು ಎಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಲಾಗಿತ್ತು. ಹೀಗಿದ್ದರೂ ಈ ಸಂತೋಷ್ ಯೂಟ್ಯೂಬ್‌ನಲ್ಲಿ ಒಂದಷ್ಟು ವಿಷಯಗಳನ್ನು ಪ್ರಕಟಿಸುತ್ತಲೇ ಇದ್ದ. ಹೀಗಾಗಿ ಅರ್ಜಿದಾರರು ಮಾನ ಹಾನಿ ಪ್ರಕರಣ ದಾಖಲಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/youtuber-santosh-arrested-by-bantwal-police-for-contempt-of-court-over-the-dharmasthala-case-444215.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo