ನಟರ ಮನೆಗೆ ಕಾಂಡೋಮ್ ಹೇಳಿಕೆ; ಪಬ್ಲಿಸಿಟಿ ಹುಚ್ಚು, ಮಾಡಿದ್ದಕ್ಕೆ ಅನುಭವಿಸ್ತಾರೆ ಎಂದ ಉಮಾಪತಿ ಶ್ರೀನಿವಾಸ್‌ | Condom Remark Row Sandalwood Producer Umapathi Srinivas Slams Chakravarthy Chandrachud Publicity

Entertainment

oi-Manohara M

ನಟರ ಮನೆಗೆ ಕೆಲ ನಿರ್ಮಾಪಕರು ಕಾಂಡೋಮ್ ತೆಗೆದುಕೊಂಡು ಹೋಗುತ್ತಾರೆ ಎಂಬ ಹಿರಿಯ ಪತ್ರಕರ್ತ, ಸಿನಿಮಾ ನಿರ್ದೇಶಕ ಹಾಗೂ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್‌ ಅವರ ಹೇಳಿಕೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಕೆಲ ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜವಾಬ್ದಾರಿಯಿಂದ ಮಾತನಾಡಬೇಕು

ವಿಡಿಯೋವೊಂದರಲ್ಲಿ ಮಾತಿನ ಭರದಲ್ಲಿ ಚಂದ್ರಚೂಡ್‌ ಈ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಉಮಾಪತಿ ಶ್ರೀನಿವಾಸ್‌ ಗೌಡ, “ಇಲ್ಲಿ ಹೊಗಳುವ ಅಧಿಕಾರವೂ ಇದೆ, ತೆಗಳುವ ಅಧಿಕಾರವೂ ಇದೆ. ಆದರೆ ಜವಾಬ್ದಾರಿಯಿಂದ ಮಾತನಾಡಬೇಕು. ಅವರು ಜವಾಬ್ದಾರಿಯುತ ಪತ್ರಕರ್ತರಾಗಿರುವ ಕಾರಣ ಇನ್ನಷ್ಟು ಎಚ್ಚರಿಕೆ ಅಗತ್ಯವಿತ್ತು” ಎಂದು ಹೇಳಿದ್ದಾರೆ.

Condom Remark

“ಅವರು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ. ಅವರು ಮಾಡಿದ್ದಕ್ಕೆ ಅವರೇ ಅನುಭವಿಸುತ್ತಾರೆ. ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡಿದರೆ, ಪ್ರತಿಕ್ರಿಯೆ ಕೊಟ್ಟರೆ ಅವರನ್ನೇ ದೊಡ್ಡವರನ್ನಾಗಿ ಮಾಡಿದಂತಾಗುತ್ತದೆ. ಕೆಲವರಿಗೆ ಪಬ್ಲಿಸಿಟಿ ಹುಚ್ಚು ಇರುತ್ತದೆ. ಈಗ ಕಂಟೆಂಟ್‌ಗಿಂತ ಕಾಮೆಂಟ್‌ಗಳನ್ನೇ ಹೆಚ್ಚು ನೋಡುತ್ತಾರೆ” ಎಂದು ಉಮಾಪತಿ ಟೀಕಿಸಿದರು.

ನಿರ್ಮಾಪಕರು ಯಾರಿಗೂ ಕೈಚಾಚಲ್ಲ

ಸಮಾಜದ ಗಮನ ಸೆಳೆಯಲು ಅಸಹ್ಯವಾಗಿ ಮಾತನಾಡುವ ಪ್ರವೃತ್ತಿ ಕೆಲವರಲ್ಲಿ ಹೆಚ್ಚಾಗಿದೆ ಎಂದು ಹೇಳಿದ ಅವರು, “ಈಗ ಕೆಲವರ ಉದ್ದೇಶ ಸರಿಯಾಗಿರಲ್ಲ, ಅಸಹ್ಯವಾಗಿ ಚೆನ್ನಾಗಿರೋದು, ಸಮಾಜದ ಗಮನ ಸೆಳೆಯುವ ಒಂದಷ್ಟು ಜನ ಹುಟ್ಟಿಕೊಂಡಿದ್ದಾರೆ. ಅದಕ್ಕೆ ಏನೂ ಮಾಡೋಕಾಗಲ್ಲ. ಅವರ ಮಾತುಗಳಿಂದ ನಾವು ಸಣ್ಣವರಾಗುವುದಿಲ್ಲ. ನಿರ್ಮಾಪಕರ ಕೈ ಒಂದು ಸಿನಿಮಾ ಗೆದ್ದರೂ, ಸೋತರೂ ಒಂದೇ ರೀತಿ ಇರುತ್ತದೆ. ನಾವು ಯಾರಿಗೂ ಕೈಚಾಚುವವರಲ್ಲ” ಎಂದು ಸ್ಪಷ್ಟಪಡಿಸಿದರು.

ಇನ್ನು ಚಂದ್ರಚೂಡ್‌ ಅವರನ್ನು ಪತ್ರಕರ್ತರೆಂದು ಗುರುತಿಸುವ ಕುರಿತು ಮಾತನಾಡಿದ ಉಮಾಪತಿ, “ಪತ್ರಕರ್ತರಿಗೆ ಒಂದು ಪೆನ್ನಿನಿಂದಲೇ ಇಡೀ ದೇಶವನ್ನು ಕಂಟ್ರೋಲ್ ಮಾಡುವ ಶಕ್ತಿ ಇದೆ. ಹಾಗಾಗಿ ಅವರು ತಮ್ಮ ವೃತ್ತಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದು ನನ್ನ ಆಶಯ” ಎಂದು ಹೇಳಿದರು.

ಕ್ಷಮೆ ಕೇಳಿದ ಚಂದ್ರಚೂಡ್‌

ಕಾಂಡೋಮ್ ವಿವಾದದ ಬಗ್ಗೆ ಚಂದ್ರಚೂಡ್‌ ಸ್ಪಷ್ಟನೆ ನೀಡಿದ್ದು, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಅದು ಯಾವುದೇ ರೀತಿಯಲ್ಲೂ ಕನ್ನಡ ನಿರ್ಮಾಪಕರ ವಿರುದ್ಧ ಅಥವಾ ಕನ್ನಡ ಚಿತ್ರರಂಗದ ವಿರುದ್ಧ ಅಲ್ಲ. ನಾನು ಮಾತನಾಡಿರುವುದು ತಮಿಳು ಸಿನಿಮಾ ಕ್ಷೇತ್ರದ ವಾತಾವರಣ, ಅಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ಅದರ ಪರಿಣಾಮಗಳ ಕುರಿತು. ಕನ್ನಡ ನಿರ್ಮಾಪಕರ ಬಗ್ಗೆ ಅಥವಾ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿಲ್ಲ. ‘ಕಮೋಡ್ ಟು ಕಾಂಡೋಮ್’ ಎಂಬುದು ಕೇವಲ ಒಂದು ಉಪಮೆ ಮಾತ್ರ. ಅದು ಯಾವುದೇ ನಿರ್ಮಾಪಕರ ವಿರುದ್ಧದ ಆರೋಪವಲ್ಲ” ಎಂದು ಚಂದ್ರಚೂಡ್‌ ಸ್ಪಷ್ಟಪಡಿಸಿದ್ದಾರೆ.

ನಾನು ಮಾತನಾಡಿರುವ ವಿಡಿಯೋದ ಒಂದು ಭಾಗವನ್ನು ಮಾತ್ರ ಕತ್ತರಿಸಿ ಹಂಚಿದ ಪರಿಣಾಮ ಈ ಗೊಂದಲ ಉಂಟಾಗಿದೆ. ಯಾವುದೇ ನಿರ್ಮಾಪಕರು ಇದರಿಂದ ನೋವಿಗೊಳಗಾಗುವ ಅಗತ್ಯವಿಲ್ಲ. ನಾನು ಮೂಲತಃ ನಿರ್ಮಾಪಕರ ಪರವಾಗಿಯೇ ಮಾತಾಡಿದ್ದೇನೆ. ನನ್ನ ಉಪಮೆ ಅಥವಾ ಪದಗಳಿಂದ ನಿಮಗೆ ನೋವಾಗಿದ್ದರೆ, ನಾನು ಎಲ್ಲರಲ್ಲೂ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/condom-remark-row-sandalwood-producer-umapathi-srinivas-slams-chakravarthy-chandrachud-publicity-442477.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo