
Sports
oi-Madhusudhan KR
India Vs Pakistan Match: ಭಾರತ ಹಾಗೂ ಪಾಕಿಸ್ತಾನದ ನಡವೆ ಟಿ20 ವಿಶ್ವಕಪ್ 2026 ಗುಂಪು ಹಂತದ ಹೈವೋಲ್ಟೇಜ್ ಪಂದ್ಯ ಭಾನುವಾರ ಕೊಲೊಂಬಿಯಾದಲ್ಲಿ ನಡೆಯಲಿದೆ. ಇದಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ಆಟಗಾರರೊಂದಿಗೆ ಭಾರತ ತಂಡ ಹ್ಯಾಂಡ್ ಶೇಕ್ ಮಾಡಲಿದೆಯೇ ಎನ್ನುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಹಾಗಾದ್ರೆ, ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ 2026 ಹೈವೋಲ್ಟೇಜ್ ಪಂದ್ಯದಲ್ಲಿ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಹಾಗೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸುಳಿವು ನೀಡಿದ್ದಾರೆ.

ಹ್ಯಾಂಡ್ ಶೇಕ್ ನೀಡುವ ಬಗ್ಗೆ ಸೂರ್ಯ ಹೇಳಿದ್ದೇನು?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ಈ ಇಬ್ಬರು ಆಟಗಾರರ ಆಯ್ಕೆ ಬಗ್ಗೆ ಸ್ಪಷ್ಟ ಸೂಚನೆ ನೀಡಿದರು. ಆದರೂ, ಪಾಕಿಸ್ತಾನ ಆಟಗಾರರೊಂದಿಗೆ ಭಾರತ ತಂಡ ಕೈಕುಲುಕುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಹಿಂದಿನ ಏಷ್ಯಾಕಪ್ ಪಂದ್ಯದ ವೇಳೆಯೂ ಸಹ ಪಾಕಿಸ್ತಾನ ತಂಡದ ಆಟಗಾರರಿಗೆ ಭಾರತದ ಆಟಗಾರರು ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದಕ್ಕೆ ಕಾರಣ ಕೆಲ ಪಾಕ್ ಆಟಗಾರರೇ ಪಂದ್ಯದ ವೇಳೆ ತೋರಿದ ದುರ್ವರ್ತನೆ ಅಂದ್ರೆ ತಪ್ಪಾಗಲಾರದು.
ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಉತ್ತಮ ದಾಖಲೆಗಳಿಲ್ಲ
ಮತ್ತೊಂದೆಡೆ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಮಾತನಾಡಿ, ಬಹಿಷ್ಕಾರದ ಬಳಿಕ ನಡೆಯುತ್ತಿರುವ ಈ ಪಂದ್ಯವನ್ನು ಉತ್ತಮ ರೀತಿಯಲ್ಲಿ ಆಡಬೇಕು. ಹಿಂದಿನ ಪಂದ್ಯದಲ್ಲಿ ಭಾರತ ಕ್ರೀಡಾ ಮನೋಭಾವದಿಂದ ಆಡಲಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ ಜೊತೆಗೆ, ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಉತ್ತಮ ದಾಖಲೆಗಳು ಇಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು. ಅಲ್ಲದೆ, ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರ ಫಾರ್ಮ್ ಬಗ್ಗೆ ತಮಗೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನೂ ಹಿಂದಿನ ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಆಟಗಾರರು ಕೈಕುಲುಕಿ ಕ್ರೀಡಾ ಸೌಹಾರ್ದತೆಯನ್ನು ಪ್ರದರ್ಶಿಸಿದ ಉದಾಹರಣೆಗಳಿವೆ. ಕೆಲ ಸಂದರ್ಭಗಳಲ್ಲಿ ಭದ್ರತಾ ಅಥವಾ ಆಡಳಿತಾತ್ಮಕ ಕಾರಣಗಳಿಂದಾಗಿ ಅಂತಹ ದೃಶ್ಯಗಳು ಕಾಣಿಸದಿದ್ದರೂ, ಆಟಗಾರರು ಪರಸ್ಪರ ಗೌರವ ಹೊಂದಿದ್ದಾರೆ ಎಂಬುದನ್ನು ಹಲವು ಬಾರಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಭಾನುವಾರದ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ನಡೆಯುತ್ತದೆಯೇ ಇಲ್ಲವೋ ಎಂಬುದಕ್ಕಿಂತಲೂ, ಪಂದ್ಯವು ಶಾಂತಿಯುತವಾಗಿ, ಕ್ರೀಡಾಸ್ಫೂರ್ತಿಯೊಂದಿಗೆ ನಡೆಯುವುದು ಮುಖ್ಯ. ಅಭಿಮಾನಿಗಳೂ ಕೂಡ ಉತ್ಸಾಹದ ಜೊತೆಗೆ ಕ್ರೀಡಾ ಮೌಲ್ಯಗಳನ್ನು ಗೌರವಿಸುವ ಮನೋಭಾವವನ್ನು ತೋರಿಸಬೇಕಾಗಿದೆ.
ವಾಟಾಳ್ ನಾಗರಾಜ್: ಇಂಡಿಯಾ-ಪಾಕಿಸ್ತಾನ ನಡುವೆ ನಡೆಯುವ ಪಂದ್ಯದಲ್ಲಿ ಯಾರೂ ಸಹ ದೇಶ, ಧರ್ಮವನ್ನು ತರಬಾರದು. ಯಾರೇ ಗೆದ್ರು ಸಂತೋಷಪಡಬೇಕು. ಆದರೆ, ಭಾರತ ಗೆಲ್ಲಬೇಕು ಅಂತಾ ನಾವು ಪ್ರೀತಿಯಿಂದ ಹೇಳುತ್ತೇವೆ. ಗೆದ್ದರೆ ನಿಜವಾಗಲೂ ಬಹಳ ಸಂತೋಷವಾಗುತ್ತದೆ. ಪಾಕಿಸ್ತಾನದವರು ಆಡುತ್ತಾರೆಂದು ದ್ವೇಷ ಮಾಡುವುದು ಸರಿಯಲ್ಲ. ಭಾರತ ಗೆಲ್ಲಬೇಕು, ಪ್ರೀತಿಯಿಂದ ಸ್ವಗತಿಸುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/suryakumar-yadav-remains-silent-on-handshake-question-ahead-of-india-vs-pak-t20-world-cup-2026-clash-443755.html. xn--babytilbehr-pgb.com does not claim ownership of this content. All rights remain with the original publisher.
