ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ | Ethanol Blending Magic Over Petrol: Modi’s Master Plan That Helped India in Crisis, Writes Krishna Bhatt

India

oi-Hitesh Y

Ethanol: ದೇಶವು ಸಂಕಷ್ಟದ ಸಮಯದಲ್ಲಿ ಇರುವಾಗ ಎಥೆನಾಲ್ ಹೇಗೆ ಸಹಕಾರಿ ಆಗಿದೆ ಎನ್ನುವ ಬಗ್ಗೆ ಬರಹಗಾರ ಕೃಷ್ಣ ಭಟ್ ಅವರ ಬರಹ ಇಲ್ಲಿದೆ.

ಸ್ವಲ್ಪ ದಿನದ ಹಿಂದೆ ಎಥೆನಾಲ್ ಬ್ಲೆಂಡಿಂಗ್ ವಿಷಯದಲ್ಲಿ ಮೋದಿ ಸರ್ಕಾರವನ್ನು ಬಹಳ ಜನರು ಹಿಗ್ಗಾ ಮುಗ್ಗಾ ಬೈದಿದ್ದರು. ಜನರನ್ನೇನು ಮೂರ್ಖರು ಅಂದ್ಕೊಂಡಿದ್ದಾರಾ ಅಂತ ಬೈದಿದ್ದೇ ಬೈದಿದ್ದು. ಈಗ ಅದೇ ಜನರು ಅಥವಾ ಅಂಥದ್ದೇ ಮನಸ್ಥಿತಿಯ ಬೇರೆ ಜನರು ಭಾರತ ಮೋದಿ ಕಾಲದಲ್ಲಿ ಆಮದು ತೈಲದ ಮೇಲೆ ವಿಪರೀತ ಡಿಪೆಂಡೆಂಟ್ ಆಗಿದೆ ಅಂತ ಬೈತಾ ಇದ್ದಾರೆ. ತೈಲದಲ್ಲಿ ಶೇ.20 ರಷ್ಟು ಎಥೆನಾಲ್ ಸೇರಿಸಿದಾಗ ನಮ್ಮ ತೈಲ ಬೇಡಿಕೆ ಶೇ.20ರಷ್ಟು ಕಡಿಮೆ ಆಗಿದ್ದರ ಪರಿಣಾಮ ನಮಗೆ ಈಗ ಅನುಭವಕ್ಕೆ ಬರ್ತಾ ಇದೆ.

Ethanol

ಹಾರ್ಮುಜ್ ಜಲಸಂಧಿಯ ಆಚೆ ತೈಲ ತುಂಬಿಕೊಂಡು ನಿಂತಿರುವ ಒಂದೊಂದು ಹಡಗನ್ನೂ ಈಚೆ ತರೋದಕ್ಕೆ ಸರ್ಕಾರ ಮಾಡುತ್ತಿರುವ ವ್ಯಾಯಾಮ ಇಲ್ಲಿ ತೆಂಗಿನೆಣ್ಣೆ ತಿಕ್ಕಿಸಿಕೊಳ್ಳುತ್ತ ಪಟ್ಟಾಂಗ ಹೊಡೆಯುವವರಿಗೆ ಹೇಗೆ ಗೊತ್ತಾಗಬೇಕು ಹೇಳಿ. ಆವತ್ತು ನೋಟ್ ಬ್ಯಾನ್ ಮಾಡಿದಾಗ ಬೈದುಕೊಂಡವರು, ನೋಟು ಎಕ್ಸ್‌ಚೇಂಜ್ ಮಾಡಿಸಿಕೊಳ್ಳುವುದಕ್ಕೆ ಬ್ಯಾಂಕಿನವರೆಗೆ ನಡೆಯುವಂತಾದ್ದಕ್ಕೆ, ಎಟಿಎಂ ಎದುರು ಕ್ಯೂ ನಿಲ್ಲಬೇಕಾದ್ದಕ್ಕೆ ಬೈದುಕೊಂಡಿದ್ದ ಜನರೇ ಮೊನ್ನೆ ದುರಂಧರ್ 2 ಸಿನಿಮಾಗೆ 500 ರೂ. ಟಿಕೆಟ್ ತೆತ್ತು ಕೂತು ನೋಡುತ್ತಾ, “ಭಾಯಿಯೋ ಬೆಹನೋಂ… ಆಜ್ ರಾತ್ ಆಠ್ ಬಜೇ ಸೇ…” ಅಂತ ಮೋದಿ ಮಾತು ಶುರು ಮಾಡುತ್ತಿದ್ದ ಹಾಗೆ ಚಪ್ಪಾಳೆ ತಟ್ಟಿ ಬಂದಿರುತ್ತಾರೆ. ಅವತ್ತು ಯುಪಿಐ ಬಂದಾಗ, “10 ರೂ. ಚಾ ಕುಡಿಯಕ್ಕೆ ಹೋದರೆ ಯುಪಿಐಯಲ್ಲಿ ದುಡ್ಡು ಕೊಡಕ್ಕೆ ಆಗತ್ತಾ? ಇದೆಲ್ಲ ಸಾಧ್ಯವೇ ಇಲ್ಲ” ಅಂದಿದ್ದ ಜನರೇ ಈಗ ಯುಪಿಐಗೆ ಒಗ್ಗಿಕೊಂಡಿದ್ದಾರೆ.

ಮೋದಿ ಸರ್ಕಾರವನ್ನು ಬೈಯುವುದಕ್ಕೆ ಬೇಕಾದಷ್ಟು ದೂರದೃಷ್ಟಿ ಇಲ್ಲದ ಯೋಜನೆಗಳು ಸಿಗುತ್ತವೆ. ಈಗ ಉಜ್ವಲ ಯೋಜನೆಯನ್ನೇ ಗಮನಿಸಿ. ಹಳ್ಳಿಗೂ ಎಲ್‌ಪಿಜಿ ತಲುಪಿಸುವ ಉತ್ಸಾಹವನ್ನೇ ಸರ್ಕಾರ ಕಡಿಮೆ ದರದಲ್ಲಿ ಗೋಬರ್ ಗ್ಯಾಸ್ ಒದಗಿಸುವುದಕ್ಕೆ ಪ್ರಯತ್ನಿಸಿದ್ದರೆ ಎಲ್‌ಪಿಜಿ ಹಾಗೂ ರಸಗೊಬ್ಬರದ ಮೇಲಿನ ಜನರ ಅವಲಂಬನೆ ಒಂದು ಸ್ವಲ್ಪವಾದರೂ ಕಡಿಮೆ ಆಗ್ತಿತ್ತು. ಆದರೆ ಚರಂಡಿ ಗ್ಯಾಸ್ ಅಂತ ಕಾಂಗ್ರೆಸ್‌ನವರು ಆಡಿಕೊಂಡಾಗ ಜನರು ಕೀಳರಿಮೆಗೆ ಬಿದ್ದರು. ನಗರದ ಟನ್‌ಗಟ್ಟಲೆ ಕಸ ಅಲ್ಲೆಲ್ಲೋ ಬಿದ್ದು ಹೊರಳಾಡುತ್ತಿದ್ದರೆ ನೋಡಿಕೊಂಡು ಸುಮ್ಮನಿದ್ದೇವೆ. ಅದರಿಂದ ಮಿಥೇನ್ ಉತ್ಪಾದನೆ ಮಾಡಿದರೆ ನಮ್ಮ ಇಂಧನದ ಅವಲಂಬನೆ ಎಷ್ಟು ಕಡಿಮೆ ಆದೀತು ಎಂದು ಯೋಚನೆಯನ್ನೂ ಮಾಡುವುದಿಲ್ಲ.

ಸರ್ಕಾರವನ್ನು ಬೈಯುವಾಗ ಸರ್ಕಾರದ ನೀತಿಯನ್ನು ಟೀಕಿಸುವಾಗ ನಮಗೆ ಆ ಯೋಜನೆಯ ದೂರದೃಷ್ಟಿಯ ಬಗ್ಗೆ ಅರಿವಿರಬೇಕು. ಎಲ್ಲ ಯೋಜನೆಗಳೂ ತಕ್ಷಣ ಪರಿಹಾರ ನೀಡುವುದಿಲ್ಲ. ಕೆಲವು ಬಾರಿ, ನೀಡಿದ ಪರಿಹಾರ ನಮಗೆ ಅರಿವಿಗೂ ಬರದೇ ಇರಬಹುದು. ಆದರೆ ಸರ್ಕಾರ ಇರಬೇಕಾದ್ದೇ ಹಾಗೆ.

ಕೃಷ್ಣ ಭಟ್, ಬರಹಗಾರ

Disclaimer: This content was automatically imported from a third-party source via RSS feed. The original source is: https://kannada.oneindia.com/news/india/ethanol-blending-magic-over-petrol-modi-s-master-plan-that-helped-india-in-crisis-writes-krishna-b-448503.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo