ಪ್ಯಾಲೆಸ್ತೀನಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಮಧ್ಯಪ್ರಾಚ್ಯ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ: ಹರೀಶ್ ಗಂಗಾಧರ್ ಬರಹ | Middle East Crisis: No Lasting Peace Without a Permanent Solution to the Palestinian Issue, Writes Harish Gangadhar

International

oi-Hitesh Y

Middle East Crisis: ಪ್ಯಾಲೆಸ್ತೀನಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಮಧ್ಯಪ್ರಾಚ್ಯ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ: ಬರಹಗಾರ ಹರೀಶ್ ಗಂಗಾಧರ್ ಅವರ ಬರಹ ಇಲ್ಲಿದೆ.

ಪ್ಯಾಲೆಸ್ತೀನಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಮಧ್ಯಪ್ರಾಚ್ಯ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ. ನಿತ್ಯ ನಿರಂತರ ಯುದ್ಧದಲ್ಲಿದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಈ ಬಾರಿ ಯುದ್ಧದ ಬಿಸಿ ನಮಗೂ ಮುಟ್ಟಿದೆಯಷ್ಟೇ. ಇರಾನ್ ನಾಯಕತ್ವ, ಹೆಜ್ಬುಲ್ಲಾ, ಹಮಾಸ್, ಹೌತಿಗಳ ಉಪಟಳಕ್ಕೆ ಕೊನೆಯಾಡಲು ಹೊರಟಿರುವ ಇಸ್ರೇಲ್ ಮತ್ತು ಅಮೆರಿಕಗಳಿಗೆ ಈ ವ್ಯಾಕ್ಯೂಮ್ ಅನ್ನು ತುಂಬುವ ಜನರಾದರು ಯಾರು ಎಂಬ ಅಂದಾಜು ಕೂಡ ಇದ್ದಂತಿಲ್ಲ.

Middle East Crisis

ಇಸ್ರೇಲ್ ನಡೆಸಿರುವ ಮಾರಣಹೋಮ ಖಂಡನೀಯ ಆದರೆ ಹೆಜ್ಬುಲ್ಲಾ ಲೆಬೆನಾನ್ನನು ಆವರಿಸಿಕೊಂಡ ರೀತಿ, ಅದರ ಡ್ರಗ್ ಕಾರ್ಟೆಲ್ ಅಧ್ಯಕ್ಷ ರಫೀಕ್ ಹರಿರಿ ಹತ್ಯೆ, ಬೇರೂತ್ ನಗರವನ್ನು ಹಾಳು ಗೆಡವಿದ್ದು, ಸಿರಿಯಾ ಯುದ್ಧದಲ್ಲಿ ಅದರ ಪಡೆಗಳು ಎಸೆಗಿದ ಕ್ರೌರ್ಯ, ಬೇರೂತ್ ಬಂದರಿನಲ್ಲಿ ಮಾಡಿಸಿದ ಅಮೋನಿಯಂ ನೈಟ್ರೇಟ್ ಮಹಾ ಸ್ಫೋಟ, ಅಸಂಖ್ಯಾತ ಆತ್ಮಾಹುತಿ ದಾಳಿಗಳು, ಈ ಹಿಂಸಾ ಪ್ರವೃತ್ತಿಯನ್ನು ಪ್ರಶ್ನಿಸಿದವರ ಕಗ್ಗೊಲೆ ಮತ್ತು ಈ ಯುದ್ಧಕ್ಕೆ ನಾಂದಿ ಹಾಡಿದ ಅಕ್ಟೋಬರ್ 7, 2023ರ ಹಮಾಸ್ ದಾಳಿ ಎಲ್ಲವೂ ಖಂಡನೀಯ.

ಅಧಿಕಾರ, ಅಸ್ತಿತ್ವ, ಹತೋಟಿ,ಹಣ, ಮತ್ತದೇ ಹೆಸರಲ್ಲಿ ನಡೆಯುತ್ತಿರುವ ಈ ಯುದ್ಧದಲ್ಲಿ ಏನು ಅರಿಯದ ಹಲವು ಪೀಳಿಗೆಯ ಮಕ್ಕಳ ಬಾಳನ್ನೇ ಮುಟುಕುಗೊಳಿಸಿದೆವು, ರಕ್ತಸಿಕ್ತ ಮಾಡಿಬಿಟ್ಟೆವು. I just wanted to say that taking sides isn’t easy in this war ಅಂತ… all are at fault.
ಈ ಯುದ್ಧ ಮತ್ತೊಂದು ಮಿಥ್ ಅನ್ನು ಹೊಡೆದು ಹಾಕಿದೆ.

ಕಾಲ ಬರಲಿ ಮುಸ್ಲಿಮರು ಎಲ್ಲ ಒಂದಾಗಿ ಬಿಡುತ್ತಾರೆ ಎಂಬ ಮಿಥ್ ಅದು. ಈ ಮಿಥ್ ನಮ್ಮ ಜನರ ಬಾಯಲ್ಲೇ ಆಗಾಗ್ಗೆ ಬಂದು ಹೋಗುತ್ತದೆ. ನೇಶನ್ ಸ್ಟೇಟ್ಸ್ ಸೃಷ್ಟಿಯಾದ ಮೇಲೆ ಎಲ್ಲಾ ದೇಶಗಳೂ ಒಂಟಿಯೇ. ಅನುಕೂಲ ಲಾಭಕ್ಕೆ, ಬಹುರಾಷ್ಟ್ರೀಯ ಕಂಪನಿಗಳ ವ್ಯವಹಾರಕ್ಕೆ ಒಪ್ಪಂದಗಳು ನಡೆಯುತ್ತವೆಯಷ್ಟೆ.

ಉಗ್ರ ರಾಷ್ಟ್ರವಾದ ಅವರವರ ಸಂಸ್ಕೃತಿ, ಮತ, ಭಾಷೆ, ಪರಂಪರೆ, ಪ್ರಾಂತ್ಯದ ಕುರಿತು ಉತ್ಕಟ ಅಭಿಮಾನವನ್ನೇನೋ ಮೂಡಿಸುತ್ತದೆ ಆದರೆ ಮಾನವೀಯತೆಯನ್ನು ಮರೆಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮದು ಮನುಷ್ಯ ಕುಲ ಎಂಬ ಭಾವನೆಯನ್ನು ಅಳಿಸಿಬಿಡುತ್ತದೆ. ಗಾಜಾ ಪಟ್ಟಿಯ ನರಮೇಧದ ಕುರಿತು ಎಲ್ಲಾ ಮುಸ್ಲಿಂ ರಾಷ್ಟ್ರಗಳು ತಳೆದ ಮೌನ ಅಥವಾ ಸಾಂಕೇತಿಕ ಖಂಡನೆ ಒಂದು ವಿಷಯ ಸ್ಪಷ್ಟಪಡಿಸಿತ್ತು ಅದೇನಂದರೆ ಯಾವ ಮುಸ್ಲಿಂ ರಾಷ್ಟ್ರವು ಇರಾನ್ ಪರವಾಗಿ ನಿಲ್ಲುವುದಿಲ್ಲ ಎಂಬುದನ್ನು.

1950-60ರ ದಶಕದಲ್ಲಿ ಜಾತ್ಯತೀತ, ಸಮಾಜವಾದಿ ಅಖಂಡ ಅರಬ್ ಕಟ್ಟುವ ಗುರಿ ಕಂಡಿದ್ದ ಅಬ್ದುಲ್ ನಾಸೇರ್, ಇಡೀ ಇರಾನ್ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಿದ ಮೊಹಮ್ಮದ್ ಮೊಸದೇಘ್, ಟರ್ಕಿಯನ್ನು ಜಾತ್ಯಾತೀತ ಮತ್ತು ಆಧುನಿಕ ಮಾಡ ಹೊರಟ ಮುಸ್ತಫಾ ಕೆಮಾಲ್, ಗ್ರೀಕರು, ಕ್ರಿಶ್ಚಿಯನ್ನರು, ಸುನ್ನಿಗಳು, ಶಿಯಾಗಳು, ಅರ್ಮೇನಿಯನ್ನರು, ಕಾರ್ಡ್ಸ್, ಮರೋನೈಟರು ಒಟ್ಟಾಗಿ ಸೌಹಾರ್ದಯುತವಾಗಿ ಕುಳಿತು ಅಧಿಕಾರ ಹಂಚಿಕೊಂಡು ಬಾಳಿದ ಲೆಬೆನಾನ್ ಎಲ್ಲವೂ ಇತ್ತು ಎಂದು ಇಂದು ನಂಬಲಾಗದು.

ಉಗ್ರ ರಾಷ್ಟ್ರವಾದದ ಕುದುರೆಯನ್ನೇರಿ make the nation great again ಎಂಬ ಡಂಗೂರ ಬಡಿಯುತ್ತಾ ಅಧಿಕಾರಕ್ಕೆ ಬಂದ ಎಲ್ಲಾ ಜಾಗತಿಕ ನಾಯಕರು ಏನೇನು ಮಾಡುತ್ತಾರೋ ಕಾದು ನೋಡಬೇಕಷ್ಟೆ… we are helpless.

ಹರೀಶ್ ಗಂಗಾಧರ್, ಬರಹಗಾರ

Disclaimer: This content was automatically imported from a third-party source via RSS feed. The original source is: https://kannada.oneindia.com/news/international/middle-east-crisis-no-lasting-peace-without-a-permanent-solution-to-the-palestinian-issue-writes-h-448551.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo