ಬಾಂಗ್ಲಾದೇಶ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಬದಲು ಸ್ಪೀಕರ್ ಭಾಗಿ | Bangladesh Election | Bangladesh Election Results And Speaker Om Birla Will Attend The Oath Ceremony Of Bangladesh New PM

International

-Malathesha M

ಭಾರತ ಮತ್ತು ಬಾಂಗ್ಲಾದೇಶ ನಡುವೆ ಎಲ್ಲಾ ಸರಿಯಾಗುವ ಮುನ್ಸೂಚನೆ ಸಿಗುತ್ತಿದೆ, ಎರಡೂ ದೇಶ ಕಿತ್ತಾಡಿಕೊಂಡು ಇನ್ನೇನು ಸಂಬಂಧ ಹಾಳು ಮಾಡಿಕೊಳ್ಳುತ್ತಿವೆ ಎನ್ನುವಾಗಲೇ ವಾತಾವರಣ ದಿಢೀರ್ ಬದಲಾಗಿದೆ. ಬಾಂಗ್ಲಾದೇಶದ ಮತದಾರರು ಪಾಕಿಸ್ತಾನ ಹಾಗೂ ಇತರ ದೇಶಗಳ ಕುತಂತ್ರಕ್ಕೆ ತಕ್ಕನಾಗಿ ಉತ್ತರ ಕೊಟ್ಟಿದ್ದು, ಭಾರತದ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ವ್ಯಕ್ತಿಯನ್ನೇ ಬಾಂಗ್ಲಾ ನೂತನ ಪ್ರಧಾನಿ ಪಟ್ಟಕ್ಕೆ ಆಯ್ಕೆ ಮಾಡಿದ್ದಾರೆ.

ಪಾಪಿ ಪಾಕಿಸ್ತಾನ ಬೆಂಬಲಿತ ಜಮಾತ್-ಎ-ಇಸ್ಲಾಮಿ ಪಕ್ಷ ಹೀನಾಯವಾಗಿ ಸೋಲು ಕಂಡಿದ್ದು, ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ ಈಗ ಭರ್ಜರಿ ಬಹುಮತ ಸಿಕ್ಕಿದೆ. ಹೀಗಿದ್ದಾಗಲೇ ಬಾಂಗ್ಲಾ ನೂತನ ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾರತದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವಂತೆ, ಬಾಂಗ್ಲಾದೇಶ ಮನವಿ ಮಾಡಿ ಆಹ್ವಾನ ಪತ್ರಿಕೆ ನೀಡಿತ್ತು. ಆದರೆ ಕಾರಣಾಂತರಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬದಲಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ತಾರಿಕ್ ರಹ್ಮಾನ್ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ.

Bangladesh Election

ಶಾಂತಿಯಿಂದ ಬಾಳಲು ಬಾಂಗ್ಲಾ ಹೆಜ್ಜೆ

ಹೊಸ ಹಾದಿಯಲ್ಲಿ ಶಾಂತಿಯಿಂದ ಬಾಳಲು ಇದೀಗ ಬಾಂಗ್ಲಾದೇಶ ಹೆಜ್ಜೆ ಇಡುತ್ತಿದೆ ಎನ್ನಬಹುದು. ಫೆಬ್ರವರಿ 17ಕ್ಕೆ ಪ್ರಮಾಣ ವಚನ ಸ್ವೀಕಾರಕ್ಕಾಗಿ, ಬಹುದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದೆ ಬಾಂಗ್ಲಾದೇಶ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪೂರ್ಣ ಬಹುಮತ ಪಡೆದು 212 ಸ್ಥಾನ ಗೆದ್ದಿದೆ. ಈ ಮೂಲಕ 300 ಸ್ಥಾನಗಳ ಬಲವನ್ನು ಹೊಂದಿರುವ ಬಾಂಗ್ಲಾದೇಶ ಸಂಸತ್‌ನಲ್ಲಿ ಭಾರತದ ಜೊತೆಯಲ್ಲಿ ಉತ್ತಮ ಸಂಬಂಧವನ್ನ ಹೊಂದಿರುವ ವ್ಯಕ್ತಿ, ಎಂದರೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ತಾರಿಕ್ ರಹ್ಮಾನ್ ಪ್ರಧಾನಿ ಆಗುತ್ತಿದ್ದಾರೆ. ಇಂತಹ ಸಮಯದಲ್ಲಿ ತಾರಿಕ್ ರಹ್ಮಾನ್ ಬಾಂಗ್ಲಾ ನೂತನ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ತೆರಳುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಪಾಕಿಸ್ತಾನಕ್ಕೆ ಮತ್ತೊಮ್ಮೆ ದೊಡ್ಡ ಸೋಲು

ಬಿಎನ್‌ಪಿ ಪಕ್ಷದ ತಾರಿಕ್ ರಹ್ಮಾನ್‌ಗೆ ಪ್ರಧಾನಿ ಪಟ್ಟ ಫಿಕ್ಸ್ ಆಗಿದ್ದು, ಭಾರತದ ಜೊತೆ ಚನ್ನಾಗಿದ್ದಾರೆ. ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಒಂದಾಗಿರುವ ಭಾರತಕ್ಕೆ ಈಗ ಬಾಂಗ್ಲಾದೇಶದ ಸ್ನೇಹ ಅನಿವಾರ್ಯ ಅಲ್ಲ, ಆದರೆ ಭವಿಷ್ಯದ ದೃಷ್ಟಿಯಿಂದ ಎರಡೂ ದೇಶಗಳು ಒಟ್ಟಿಗೆ ಸಾಗಬೇಕಿದೆ. ಇಂತಹ ಸಮಯ ಹಾಗೂ ಸಂದರ್ಭವನ್ನು ಕೇಂದ್ರದ ಎನ್‌ಡಿಎ ಸರ್ಕಾರ ಅಳೆದು & ತೂಗಿ ಲೆಕ್ಕಾಚಾರ ಹಾಕುತ್ತಾ ಇದೆ. ಈ ಕಾರಣಕ್ಕೆ ಬಾಂಗ್ಲಾ ಜೊತೆಗೆ ಮತ್ತೊಮ್ಮೆ ಮಾತುಕತೆ ಆರಂಭವಾಗುವ ನಿರೀಕ್ಷೆಗಳು ಇವೆ.

ಹೀಗಿದ್ದಾಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪೂರ್ಣ ಬಹುಮತ ಪಡೆದು, ಬಾಂಗ್ಲಾದಲ್ಲಿ ಸರ್ಕಾರ ರಚಿಸುವ ಸುದ್ದಿ ಸಿಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ಬಿಎನ್‌ಪಿ ಪಕ್ಷದ ನಾಯಕನಿಗೆ ಕರೆ ಮಾಡಿ ಶುಭ ಕೋರಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತದ ಎದುರಲ್ಲಿ ದೊಡ್ಡ ಸೋಲು ಬಾಂಗ್ಲಾ ನೆಲದಲ್ಲಿ ಎದುರಾಗಿದ್ದು, ಪಾಕಿಸ್ತಾನ ಮಾಡಿದ್ದ ಕುತಂತ್ರ ಮತ್ತೊಮ್ಮೆ ಅದೇ ದೇಶಕ್ಕೆ ದೊಡ್ಡ ಮುಳುವಾಗಿ ಪರಿಣಮಿಸಿದೆ. ಭಾರತಕ್ಕೆ ಇದೀಗ ಬಾಂಗ್ಲಾದೇಶ ರೆಡ್‌ಕಾರ್ಪೆಟ್ ಹಾಕಿ ಸ್ವಾಗತ ಕೋರಲು ಸಜ್ಜಾಗಿದೆ. ಮತ್ತೊಂದು ಕಡೆ ಆರ್ಥಿಕವಾಗಿ ಬಾಂಗ್ಲಾದೇಶ ಗಟ್ಟಿಯಾಗಲು ಈಗ ಭಾರತದ ಸಹಾಯ ಬೇಕೆ ಬೇಕು. ಮತ್ತೊಂದು ಕಡೆ ವಿದ್ಯುತ್ ವಿಚಾರದಲ್ಲಿ ಕೂಡ ಬಾಂಗ್ಲಾಗೆ ಭಾರತ ಇರದೇ ಇದ್ದರೆ ಸಾಕಷ್ಟು ಸಮಸ್ಯೆ ಆಗಲಿದ್ದು, ಈ ಎಲ್ಲಾ ಕಾರಣಗಳಿಗೆ ಭಾರತದ ಜೊತೆಗೆ ಬಾಂಗ್ಲಾ ಸಂಧಾನ ಗ್ಯಾರಂಟಿ ಆಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/bangladesh-election-results-and-speaker-om-birla-will-attend-the-oath-ceremony-of-bangladesh-new-pm-011-443855.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo