ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ | Bengaluru Arasikere New MEMU Train Service via Tumakuru Launched Indian Railways Minister V Somanna

Karnataka

oi-Manohara M

ರಾಜಧಾನಿ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ಸಂಚರಿಸುವ ಸಾವಿರಾರು ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಭಾರತೀಯ ರೈಲ್ವೆ ಕೊನೆಗೂ ಈಡೇರಿಸಿದೆ. ಈ ಮಾರ್ಗದಲ್ಲಿ ನೂತನ ಮೆಮು ರೈಲು ಸೇವೆಯನ್ನು ಆರಂಭಿಸಲಾಗಿದ್ದು, ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ನೂತನ ಮೆಮು ರೈಲು ಯಲಹಂಕದಿಂದ ಹೊರಟು, ಯಶವಂತಪುರ ಮತ್ತು ತುಮಕೂರು ಮಾರ್ಗವಾಗಿ ಅರಸೀಕೆರೆಗೆ ತಲುಪಲಿದೆ. ಈ ಭಾಗದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ಪ್ರಯಾಣಿಸಲು ಈ ರೈಲು ಸಹಕಾರಿಯಾಗಲಿದೆ. ಈ ಭಾಗದ ಪ್ರಯಾಣಿಕರು ನೂತನ ಮೆಮು ರೈಲಿನ ಸೇವೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿ.ಸೋಮಣ್ಣ ಅವರು ಕೋರಿದ್ದಾರೆ. ರೈಲ್ವೆ ಸಂಪರ್ಕವನ್ನು ಬಲಪಡಿಸುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Bengaluru Arasikere New MEMU Train

ರೈಲು ಸಂಚಾರದ ವಿವರ

ಈ ಭಾಗದ ರೈಲ್ವೆ ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾಗಿದ್ದ ನೂತನ ಮೆಮು ರೈಲ್ವೆ ಸಂಚಾರಕ್ಕೆ ಅನುಮೋದನೆ ನೀಡಲಾಗಿದ್ದು, ಅದರ ವೇಳಾಪಟ್ಟಿ ಮತ್ತು ವಿವರಗಳು ಕೆಳಗಿನಂತಿವೆ

* ಯಲಹಂಕ-ಅರಸೀಕೆರೆ ಮೆಮು ರೈಲು (ರೈಲು ಸಂಖ್ಯೆ: 66505) ಬೆಳಿಗ್ಗೆ 6:45ಕ್ಕೆ ಯಲಹಂಕದಿಂದ ಹೊರಡುತ್ತದೆ. ಯಶವಂತಪುರ ಮತ್ತು ತುಮಕೂರು (ಬೆಳಿಗ್ಗೆ 08:58ಕ್ಕೆ) ಮೂಲಕ ಸಂಚರಿಸುತ್ತದೆ. ಬೆಳಿಗ್ಗೆ 11:00 ಗಂಟೆಗೆ ಅರಸೀಕೆರೆಯನ್ನು ತಲುಪಲಿದೆ.

* ಅರಸೀಕೆರೆ-ಯಲಹಂಕ ಮೆಮು ರೈಲು (ರೈಲು ಸಂಖ್ಯೆ: 66506) ಮಧ್ಯಾಹ್ನ 02:15ಕ್ಕೆ ಅರಸೀಕೆರೆಯಿಂದ ಹೊರಡುತ್ತದೆ. ತುಮಕೂರು (ಸಂಜೆ 04:38ಕ್ಕೆ) ಮಾರ್ಗವಾಗಿ ಸಂಚರಿಸುತ್ತದೆ. ಸಂಜೆ 07:15ಕ್ಕೆ ಯಲಹಂಕ ತಲುಪಲಿದೆ. ಈ ಮೆಮು ರೈಲು ಭಾನುವಾರದ ಹೊರತಾಗಿ ವಾರದ 6 ದಿನಗಳೂ ಸಂಚರಿಸಲಿದೆ.

ಯಾರಿಗೆಲ್ಲ ಅನುಕೂಲ?

ರೈಲ್ವೆ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರುತ್ತೇನೆ ಎಂದು ಸಚಿವ ವಿ. ಸೋಮಣ್ಣ ಅವರು ತಿಳಿಸಿದ್ದಾರೆ. ಈ ರೈಲು ಸೇವೆಯು ಸಮಾಜದ ವಿವಿಧ ವರ್ಗದ ಜನರಿಗೆ ವರದಾನವಾಗಲಿದೆ. ಪ್ರತಿದಿನ ವಿದ್ಯಾಭ್ಯಾಸ ಮತ್ತು ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಹೋಗುವವರಿಗೆ ಇದು ಕೈಗೆಟುಕುವ ದರದ ಪ್ರಯಾಣದ ಆಯ್ಕೆಯಾಗಿದೆ. ದಿನಗೂಲಿ ಕಾರ್ಮಿಕರು ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಮತ್ತು ಕೆಲಸದ ನಿಮಿತ್ತ ಸಂಚರಿಸುವ ಶ್ರಮಿಕ ವರ್ಗಕ್ಕೆ ಇದು ವಿಶ್ವಾಸಾರ್ಹ ಸಾರಿಗೆಯಾಗಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸರಕು ಸಾಗಣೆ ಮತ್ತು ಸಂಚಾರಕ್ಕೆ ಈ ಮೆಮು ರೈಲು ಸಾಕಷ್ಟು ಅನುಕೂಲ ಕಲ್ಪಿಸಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bengaluru-arasikere-new-memu-train-service-via-tumakuru-launched-indian-railways-minister-v-somanna-448549.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo