
Karnataka
oi-Shankrappa Parangi
ಮಂಗಳೂರು: ಕರ್ನಾಟಕ ಕರಾವಳಿಗೆ ಬೆಂಗಳೂರು ಭಾಗದಿಂದ ರೈಲು ಸೇವೆ ಸುಧಾರಿಸುವಲ್ಲಿ ರೈಲ್ವೆ ಇಲಾಖೆ ಮುಂದಾಗಿದ್ದರ ಬೆನ್ನಲ್ಲೆ ತಡರಾತ್ರಿ ವಿಮಾನಯಾನ ಸಂಚಾರವು ಲಭಿಸುತ್ತಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವವರಿಗೆ, ಇಲ್ಲವೇ ವಿದೇಶಕ್ಕೆ ತೆರಳುವ ಕರಾವಳಿ ಮಂದಿಗೆ ಬಂಪರ್ ಗುಡ್ ನ್ಯೂಸ್ ಸಿಕ್ಕಿದೆ. ಶೀಘ್ರವೇ ಬೆಂಗಳೂರು-ಮಂಗಳೂರು ಮಧ್ಯೆ ತಡರಾತ್ರಿಯು ನಿತ್ಯ ವಿಮಾನ ಸೇವೆ ಆರಂಭವಾಗಲಿದೆ.
ಹೌದು, ಇದೇ ತಿಂಗಳು ಮಾರ್ಚ್ 6 ರಿಂದ ಬೆಂಗಳೂರು-ಮಂಗಳೂರು ಮಧ್ಯೆ ಏರ್ ಇಂಡಿಯಾ ಎಕ್ಸ್ಪ್ರೆಸ್ ತಡರಾತ್ರಿ ದೈನಂದಿನ ವಿಮಾನ ಸಂಚಾರ ಆರಂಭಿಸುವುದಾಗಿ ಘೋಷಿಸಿದೆ. ವಿಶೇಷ ಸಂದರ್ಭಗಳಲ್ಲಿ ಅಲ್ಲದೆ ನಿತ್ಯವು ಎರಡು ನಗರಗಳ ಮಧ್ಯೆ ಸಂಪರ್ಕ ಸಾಧಿಸುವ ವಿಮಾನವಾಗಿದೆ. ಈ ಮೂಲಕ ಏರ್ ಇಂಡಿಯಾ ವೈಮಾನಿಕ ಸಂಸ್ಥೆ ಕರಾವಳಿ ಮಂದಿಗೆ ಸಿಹಿ ಸುದ್ದಿ ನೀಡಿದೆ.

ವಿಮಾನ ಸೇವೆಯ ವೇಳಾಪಟ್ಟಿ
ಏರ್ ಇಂಡಿಯಾ ವಿಮಾನವಾದ ಐಎಕ್ಸ್ 5971 ಬೆಂಗಳೂರಿನಿಂದ ರಾತ್ರಿ 9:25ಕ್ಕೆ ಹೊರಟು ರಾತ್ರಿ 10:40ಕ್ಕೆ ಮಂಗಳೂರಿಗೆ ಏರ್ಪೋರ್ಟ್ ತಲುಪುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಐಎಕ್ಸ್ 5972 ವಿಮಾನವು ಮಂಗಳೂರಿನಿಂದ ರಾತ್ರಿ 11:10ಗಂಟೆಗೆ ಹೊರಟು ರಾತ್ರಿ 12:20ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಸೇರುತ್ತದೆ.
ಸೇವೆ ವಿಸ್ತರಣೆ ಸಾಧ್ಯತೆ
ಈ ವಿಮಾನ ಸಂಚಾರ ಸೇವೆಯು ಮಾರ್ಚ್ 28ರವರೆಗೆ ಇರಲಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ಸಂಸ್ಥೆಯು ಹೊಸ ಲೇಟ್ ನೈಟ್ ಫ್ಲೈಟ್ ಸೇವೆ ಆರಂಭದಿಂದಾಗಿ ಸಾಕಷ್ಟು ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ತುರ್ತು ಸಂದರ್ಭದಲ್ಲಿ, ಹಠಾತ್ ಹೊರಡುವ ಪ್ಲಾನ್ ಮಾಡುವವರಿಗೆ ಬಹಳ ಅನುಕೂಲವಾಗಲಿದೆ. ಸದ್ಯ ಈ ಸೇವೆ ದಿನನಿತ್ಯ ಕಾರ್ಯಚರಿಸುತ್ತದೆ ಎಂಬ ಮಾಹಿತಿ ಇದೆ. ಮಾರ್ಚ್ ನಂತರ ಸೇವೆ ಮುಂದುವರಿಸುವ ನಿರೀಕ್ಷೆ ಇದೆ.
ಟಿಕೆಟ್ ಬುಕ್ ಬುಕ್ಕಿಂಗ್ ಮಾಹಿತಿ
ಬೆಂಗಳೂರು -ಮಂಗಳೂರು ವಿಮಾನ ಸೇವೆ ಪಡೆಯಲಿಚ್ಛಿಸುವವರು ಟಿಕೆಟ್ ಬುಕ್ ಮಾಡಬೇಕೆಂದರೆ, ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕೃತ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾಡಬಹುದಾಗಿದೆ. ಮುಂಚಿತವಾಗಿ ಬುಕ್ ಮಾಡಿದರೆ ಟಿಕೆಟ್ ದರ ಕಡಿಮೆ ಆಗಬಹುದು. ಆವತ್ತೆ ಆ ದಿನದ ಪ್ರಯಾಣ ದುಬಾರಿ ಆಗಲಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/mangaluru-to-bengaluru-eveready-air-india-express-flight-service-begins-from-march-10-schedule-446303.html. xn--babytilbehr-pgb.com does not claim ownership of this content. All rights remain with the original publisher.
