ಬೆಳಗಾವಿ: ಖಾಸಗಿ ಸಗಟು ಹೂವಿನ ಮಾರುಕಟ್ಟೆ ಪ್ರಾರಂಭಕ್ಕೆ ಸಂಸದ ಜಗದೀಶ್ ಶೆಟ್ಟರ್ ವಿರೋಧ | Belagavi MP Jagadish Shettar Opposes Opening of Private Wholesale Flower Market, Writes to Defence Minister

Karnataka

-Hitesh Y

ಬೆಳಗಾವಿ: ಇಲ್ಲಿನ ಖಾಸಗಿ ಸಗಟು ಹೂವಿನ ಮಾರುಕಟ್ಟೆ ಪ್ರಾರಂಭಕ್ಕೆ ಸಂಸದ ಜಗದೀಶ್ ಶೆಟ್ಟರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಪತ್ರ ಬರೆದಿದ್ದಾರೆ. ಬೆಳಗಾವಿ ದಂಡು ಮಂಡಳಿ ಭರತೇಶ ಶಿಕ್ಷಣ ಸಂಸ್ಥೆಯ ಹತ್ತಿರ ಹೊಂದಿದ ಪ್ರದೇಶದಲ್ಲಿ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಖಾಸಗಿ ಸಗಟು ಹೂವಿನ ಮಾರುಕಟ್ಟೆಯ ಪ್ರಾರಂಭಕ್ಕೆ ಹಂಚಿಕೆ ಮಾಡಿರುವ ವಿಚಾರವನ್ನು ಖಂಡಿಸಿ, ಈ ವಿಷಯವನ್ನು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಪತ್ರದ ಮೂಲಕ ಗಮನಕ್ಕೆ ತರಲಾಗಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ ಅವರು ಹೇಳಿದ್ದಾರೆ.

ಹೂವಿನ ಸಗಟು ಮರುಕಟ್ಟೆ ಪ್ರಾರಂಭಕ್ಕೆ ದಂಡು ಮಂಡಳಿ ಪೂರ್ವದಲ್ಲಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅದರಂತೆ ಈಗಾಗಲೆ ಬೆಳಗಾವಿ ಅಶೋಕನಗರದಲ್ಲಿ ಹೂವಿನ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿರುವಾಗ ಎರಡನೇ ಸಗಟು ಹೂವಿನ ಮಾರುಕಟ್ಟೆ ಪ್ರಾರಂಭಕ್ಕೆ ದಂಡು ಮಂಡಳಿ ಒಪ್ಪಿಗೆ ನೀಡಿರುವುದು ಕಾನುನುಬದ್ಧವಲ್ಲದ ನಿರ್ಧಾರ.

Belagavi MP Jagadish Shettar Opposes Opening of Private Wholesale Flower Market Writes to Defence Minister

ಈ ಕುರಿತು ಕಾರ್ಯದರ್ಶಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಬೆಳಗಾವಿ ಅವರು ಸಹ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದ ಮುಖೇನ ತಿಳಿಸಿ, ಕೂಡಲೇ ಕಾನೂನು ಬದ್ಧವಲ್ಲದ ಈ ನೂತನ ಪ್ರದೇಶದಲ್ಲಿ ನಡೆಸಲಾಗುತ್ತಿರುವ ಹೂವಿನ ವ್ಯಾಪಾರ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದು ದುಖಃದ ಸಂಗತಿ.

ಅಲ್ಲದೆ ದಂಡು ಮಂಡಳಿ ನಡೆಸುವ ಮಾಸಿಕ ಸಭೆಗೆ ಬೆಳಗಾವಿ ಲೋಕಸಭಾ ಸದಸ್ಯರು ವಿಶೇಷ ಅಹ್ವಾನಿತರು ಆದರೆ ಇಂತಹ ಮಹತ್ವದ ನಿರ್ಧಾರ ಕೈಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನನ್ನು ಸಭೆಗೆ ಅಹ್ವಾನಿಸಲಾಗಿಲ್ಲ ಎಂದು ಜಗದೀಶ್ ಶೆಟ್ಟರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೇಲಾಗಿ ದಂಡು ಮಂಡಳಿ ಪ್ರದೇಶ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಇದಾಗ್ಯೂ ಸಹ ಇಂತಹ ಮಹತ್ವವಾದ ವಿಷಯವನ್ನು ಗಮನಕ್ಕೆ ತರದೆ ನಿರ್ಧಾರ ತೆಗೆದುಕೊಂಡಿರುವುದು ಅಥವಾ ಸಭೆಯಲ್ಲಿ ಠರಾವು ಪಾಸ್ ಮಾಡಿರುವುದು ತುಂಬಾ ವಿಷಾದದ ಸಂಗತಿ ಎಂದು ಪತ್ರದಲ್ಲಿ ತಿಳಿಸಿ, ಈ ಕೂಡಲೆ ಕಾನೂನು ಬದ್ಧವಲ್ಲದ ಸಗಟು ಹೂವಿನ ಮರುಕಟ್ಟೆಯಲ್ಲಿನ ವ್ಯಾಪಾರವನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಕೇಂದ್ರ ರಕ್ಷಣಾ ಸಚಿವರಿಗೆ ಹಾಗೂ ಇದರೊಂದಿಗೆ ದಂಡು ಮಂಡಳಿ ರಕ್ಷಣಾ ಎಸ್ಟೇಟ್ ಅಧಿಕಾರಿ, ಪುಣೆ ಇವರಿಗೂ ಸಹ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಸ್ತಾಪಿತ ವಿಷಯವಾಗಿ ಸುದೀರ್ಘವಾಗಿ ಚರ್ಚಿಸಲು ಸಭೆಯೊಂದನ್ನು ಆಯೋಜಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ದಂಡು ಮಂಡಳಿ, ಬೆಳಗಾವಿ ಇವರಿಗೆ ಪತ್ರದ ಮುಖೇನ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Belagavi ಸುದೀರ್ಘ ಪತ್ರ

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಖಾಸಗಿ ಸಗಟು ಹೂವಿನ ಮಾರುಕಟ್ಟೆಯ ಪ್ರಾರಂಭಕ್ಕೆ ಹಂಚಿಕೆ ಮಾಡಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭೆಯ ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಪತ್ರ ಬರೆದಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/belagavi-mp-jagadish-shettar-opposes-opening-of-private-wholesale-flower-market-writes-to-defence-m-011-443475.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo