
Karnataka
oi-Shiddalingesh S
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲಿದೆ. ಈ ವೇಳೆ ಜನರು ತಂಪಾದ ಗಾಳಿಗಾಗಿ ಎಸಿ ಮೊರೆ ಹೋಗುತ್ತಿದ್ದಾರೆ. ಆದರೆ, ನಗರ ಪ್ರದೇಶದ ಸಣ್ಣ ಮನೆಗಳು ಅಥವಾ ಸಣ್ಣ ಅಪಾರ್ಟ್ಮೆಂಟಗಳಲ್ಲಿ ವಾಸಿಸುವವರಿಗೆ ಸ್ಪ್ಲಿಟ್ ಎಸಿ ಮನೆಗೆ ಅಳವಡಿಸುವುದು ದೊಡ್ಡ ತಲೆನೋವಿನ ಕೆಲಸ. ಇಂತಹ ಸಂದರ್ಭಗಳಲ್ಲಿ ಪೋರ್ಟಬಲ್ ಎಸಿ ಒಂದು ವರದಾನವಾಗಿದೆ.
ಈ ಪೋರ್ಟಬಲ್ ಎಸಿ ಯಾವುದೆ ರೀತಿಯ ಪರ್ಮನೆಂಟ್ ಇನ್ಸ್ಟಾಲೇಶನ್ ಕಿರಿಕಿರಿ ಇಲ್ಲದೆ, ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೊಂಡೊಯ್ಯಬಹುದಾಗಿದೆ. ಈ ಪೋರ್ಟಬಲ್ ಎಸಿ ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲಕರ ಮತ್ತು ಇವರ ನೆಚ್ಚಿನ ಆಯ್ಕೆ ಕೂಡ ಆಗಿದೆ. ಹಾಗದರೆ ಬನ್ನಿ 30,000 ರೂಪಾಯಿ ಬಜೆಟ್ನಲ್ಲಿ ದೊರೆಯುವ ಟಾಪ್ 5 ಪೋರ್ಟಬಲ್ ಎಸಿಗಳ ಮಾಹಿತಿಯನ್ನು ತಿಳಿಯೋಣ.

1.ಬ್ಲೂ ಸ್ಟಾರ್ ಎಸಿ (Blur Star) BS-CPAC12DA:
ವಿಶ್ವಾಸರ್ಹತೆಗೆ ಹೆಸರಾದ ಬ್ಲೂ ಸ್ಟಾರ್ ಕಂಪನಿಯು 1 ಟನ್ ಸಾಮರ್ಥ್ಯದ ಎಸಿ ಒಂದು ಬೆಡ್ರೂಮ್ ಅಂದರೆ 100 ರಿಂದ 120 ಚದುರ ಅಡಿ ಕೊಠಡಿಗೆ ಇದು ಹೇಳಿಮಾಡಿಸಿದಂತೆ ಇದೆ.
ವಿಶೇಷತೆ, ಬೆಲೆಗಳ ವಿವರ
* ವೈಶಿಷ್ಟ್ಯ: ಬ್ಯಾಕ್ಟೀರಿಯಾ ಪಿಲ್ಟರ್ ಮತ್ತು ರೋಟರಿ ಕಂಪ್ರೆಸರ್
* ಮಾರುಕಟ್ಟೆ ಬೆಲೆ: ಸುಮಾರು 26,000 ದಿಂದ 28,000 ರೂಪಾಯಿರವರೆಗೆ.
* ಇದರಲ್ಲಿರುವ ಸ್ಲೀಪ್ ಮೋಡ್ ರಾತ್ರಿ ವೇಳೆ ಮಲಗುವ ಕೋಣೆಯ ವಾತಾವರಣವನ್ನು ತಂಪಾಗಿರಿಸುತ್ತದೆ. ಇದರಿಂದ ಸೆಕೆ ಇಲ್ಲದಂತೆ ನೆಮ್ಮದಿಯಾಗಿ ನಿದ್ದೆ ಮಾಡಬಹುದು.
2.ಕ್ರೂಸ್ (Cruise) 1 ಟನ್ ಪೋರ್ಟಬಲ್ ಎಸಿ
ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್ ನೀಡುವ ಬ್ರ್ಯಾಂಡ್ ಇದು. ಈ ಎಸಿ ಕೇವಲ ಕೂಲಿಂಗ್ ಮಾತ್ರವಲ್ಲದೆ ಫ್ಯಾನ್ ಮತ್ತು ಡಿಹ್ಯೂಮಿಡಿಫೈಯರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದರಿಂದ ಬೇಸಿಗೆಯಲ್ಲಿ ಮಾತ್ರವಲ್ಲದೆ, ತೇವಾಂಶ (Humidity) ಹೆಚ್ಚಿರುವ ಸಮಯದಲ್ಲೂ ಉಪಯೋಗವಾಗುತ್ತದೆ.
* ವೈಶಿಷ್ಟ್ಯ: ಕಾಪರ್ ಕಂಡೆನ್ಸರ್, ಡಿಜಿಟಲ್ ಟಚ್ ಪ್ಯಾನೆಲ್.
* ಮಾರುಕಟ್ಟೆ ಬೆಲೆ: ಅಂದಾಜು 30,000 ರೂಪಾಯಿ
* ಪ್ಲಸ್ ಪಾಯಿಂಟ್: ಕ್ಯಾಸ್ಟರ್ ವೀಲ್ಸ್ ಇರುವುದರಿಂದ ಮನೆಯೊಳಗೆ ಎಲ್ಲಿಗೆ ಬೇಕಾದರೂ ಸುಲಭವಾಗಿ ತಳ್ಳಿಕೊಂಡು ಹೋಗಬಹುದು.
3.ಲಾಯ್ಡ್ (Lloyd) 1 Ton Portable AC
ಹ್ಯಾವೆಲ್ಸ್ ಇಂಡಿಯಾ ಸಮೂಹದ ಲಾಯ್ಡ್ ಎಸಿಗಳು ಉತ್ತಮ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿ. ಸಣ್ಣ ಬೆಡ್ರೂಮ್ ಅಥವಾ ಸ್ಟಡಿ ರೂಮ್ಗಳಿಗೆ ಇದು ಉತ್ತಮ ಆಯ್ಕೆ ಆಗಿದೆ.
* ವೈಶಿಷ್ಟ್ಯ: ಆಟೋ ಸ್ವಿಂಗ್ ಏರ್ಫ್ಲೋ ಮತ್ತು ಸ್ಲೀಪ್ ಮೋಡ್.
* ಮಾರುಕಟ್ಟೆ ಬೆಲೆ: ಅಂದಾಜು 25,000-28,000 ರೂಪಾಯಿ
* ಪ್ಲಸ್ ಪಾಯಿಂಟ್: ಕಾಪರ್ ಕಂಡೆನ್ಸರ್ ಇರುವುದರಿಂದ ಉತ್ತಮ ಕೂಲಿಂಗ್ ನೀಡುವುದರ ಜೊತೆಗೆ ದೀರ್ಘಕಾಲ ಬಾಳಿಕೆ ಬರುತ್ತದೆ.
4 ಹೈಯರ್ (Haier) HPC12XCR
ಕಾಂಪ್ಯಾಕ್ಟ್ ವಿನ್ಯಾಸ ಬಯಸುವವರಿಗೆ ಹೈಯರ್ ಉತ್ತಮ ಆಯ್ಕೆ ಆಗಿದೆ. ಇದು 0.8 ಟನ್ ಸಾಮರ್ಥ್ಯ ಹೊಂದಿದ್ದು, ಕಚೇರಿಯ ಕ್ಯಾಬಿನ್ಗಳಿಗೆ ಅಥವಾ ಸಣ್ಣ ರೊಮ್ಗಳಿಗೆ ಸೊಕ್ತ.
* ವೈಶಿಷ್ಟ್ಯ: ಡಿಹ್ಯೂಮಿಡಿಫೈಯರ್ ಮೋಡ್ ಮತ್ತು ಕಡಿಮೆ ವಿದ್ಯುತ್ ಬಳಕೆ.
* ಪ್ಲಸ್ ಪಾಯಿಂಟ್: ಬಳಸಲು ಸುಲಭ ಮತ್ತು ಕನಿಷ್ಠ ನಿರ್ವಹಣೆ.
5. ಮಿನಿ ಪೋರ್ಟಬಲ್ ಕಂಪ್ರೆಸರ್ ಎಸಿ (Mini Portable AC)
ಅತ್ಯಂತ ಕಡಿಮೆ ಬಜೆಟ್ ಅಂದರೆ 15,000 ರೂ. ರಿಂದ 25,000 ರೂ. ಒಳಗೆ ಎಸಿ ಬೇಕು ಎನ್ನುವವರಿಗೆ ಈ ಪೋರ್ಟಬಲ್ ಕಂಪ್ರೆಸರ್ ಎಸಿ ಸೂಕ್ತವಾಗಿದೆ.
* ಸಾಮರ್ಥ್ಯ: 0.5 ರಿಂದ 0.8 ಟನ್.
* ಮಾರುಕಟ್ಟೆ ಬೆಲೆ: 15,000 – 25,000 ರೂಪಾಯಿ
* ಪ್ಲಸ್ ಪಾಯಿಂಟ್: ವೈಯಕ್ತಿಕ ಬಳಕೆಗೆ ಮತ್ತು ಬ್ಯಾಚುಲರ್ ರೂಮ್ಗಳಿಗೆ ಇದು ಸೊಕ್ತ.
ಪೋರ್ಟಬಲ್ ಎಸಿ ಬಳಸಬೇಕೆಂದರೆ, ನಿಮ್ಮ ಕೊಠಡಿಯ ಗಾತ್ರ ಮತ್ತು ಬಿಸಿ ಗಾಳಿಯನ್ನು ಹೊರಹಾಕಲು ಕಿಟಕಿ ಇದ್ದರೆ ಒಳ್ಳೆಯದು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/top-5-portable-air-conditioners-under-30-000-smart-cooling-solution-for-summer-heat-in-small-rooms-447281.html. xn--babytilbehr-pgb.com does not claim ownership of this content. All rights remain with the original publisher.
