
Karnataka
oi-Shankrappa Parangi
ಬೆಂಗಳೂರು: ಗುಡ್‌ಫ್ರೈಡೆ, ವಾರಾಂತ್ಯ ಹಾಗೂ ಬೇಸಿಗೆ ಪ್ರಯುಕ್ತ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಹೆಚ್ಚಿರಲಿದ್ದು, ನೈಋತ್ಯ ರೈಲ್ವೆಯು ಕರ್ನಾಟಕದ ಬೆಂಗಳೂರಿನ ಯಶವಂತಪುರ, ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ವಿಶೇಷ ರೈಲುಗಳ ಸಂಚಾರ ಆರಂಭಿಸುತ್ತಿದೆ. ಈ ರೈಲುಗಳು ವಿಶೇಷ ಟ್ರಿಪ್‌ಗಳ ಸೇವೆ ನೀಡಲಿವೆ. ಆಯಾ ಜಿಲ್ಲೆ, ರಾಜ್ಯಗಳ ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬಹುದು.
ವಾರಾಂತ್ಯ ಕಾರಣಕ್ಕಾಗಿ ಬೆಂಗಳೂರಿನ ಯಶವಂತಪುರ-ಕೊಲ್ಲಂ ಮಾರ್ಗ ಮಧ್ಯ ಎರಡು ಬದಿ ದಿಕ್ಕಿನಲ್ಲಿ ತಲಾ ಒಂದು ಟ್ರಿಪ್ ಹಾಗೂ ಬೇಸಿಗೆ ಪ್ರಯುಕ್ತ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ರಾಮೇಶ್ವರಂವರೆಗೆ ಉಭಯ ದಿಕ್ಕುಗಳಲ್ಲಿ ಮೇ 31ರವರೆಗೆ ಪ್ರತಿವಾರ ಒಂದು ಟ್ರಿಪ್ ವಿಶೇಷ ರೈಲು ಸಂಚರಿಸಲಿವೆ.

ಯಶವಂತಪುರ-ಕಣ್ಣೂರು ರೈಲು ಸಂಚಾರ ವೇಳಾಪಟ್ಟಿ, ದಿನಾಂಕ
ಮಂಗಳೂರು ಜಂಕ್ಷನ್ ಮಾರ್ಗವಾಗಿ ಕೇರಳದ ಕರಾವಳಿ ನಗರಿ ಕಣ್ಣೂರು ರೈಲು (06551) ಏಪ್ರಿಲ್ 2ರ ಗುರುವಾರ ಬೆಳಗ್ಗೆ 11.50ಕ್ಕೆ ಯಶವಂತಪುರದಿಂದ ಹೊರಡುತ್ತದೆ. ಮರುದಿನ ಏಪ್ರಿಲ್ 3ರ ಶುಕ್ರವಾರ ಮುಂಜಾನೆ 3 ಗಂಟೆಗೆ ಕಣ್ಣೂರು ತಲುಪಲಿದೆ. ಮರಳಿ ಅದೇ ದಿಕ್ಕಿನಲ್ಲಿ ಕಣ್ಣೂರು-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (06552) ಏಪ್ರಿಲ್ 3ರ ಶುಕ್ರವಾರ ಬೆಳಗ್ಗೆ 8.45ಕ್ಕೆ ಕಣ್ಣೂರಿನಿಂದ ಹೊರಟು ಅದೇ ದಿನ ರಾತ್ರಿ 9.30ಕ್ಕೆ ಯಶವಂತಪುರಕ್ಕೆ ಬಂದು ಸೇರುತ್ತದೆ.
ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟವಾಳ, ಮಂಗಳೂರು ಜಂಕ್ಷನ್, ಕಾಸರಗೋಡು, ಕಾಂಜನಗಾಡ್ ಮತ್ತು ಪಯ್ಯನ್ನೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. 2 ಎಸಿ ಟು-ಟಯರ್, 6 ಎಸಿ ಸ್ತ್ರೀ-ಟಯರ್, 7 ಸ್ವೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಸೇರಿ ಒಟ್ಟು 21 ಬೋಗಿಗಳನ್ನು ಹೊಂದಿರಲಿದೆ.
ಹುಬ್ಬಳ್ಳಿ-ರಾಮೇಶ್ವರ ಸಾಪ್ತಾಹಿಕ ರೈಲಿನ ವೇಳಾಪಟ್ಟಿ
ಬೇಸಿಗೆ ಪ್ರಯುಕ್ತ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಬಿಟ್ಟಿರುವ ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು (07355) ಏಪ್ರಿಲ್ 05 ರಿಂದ ಮೇ 31 ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 06:50ಕ್ಕೆ ಹುಬ್ಬಳ್ಳಿಯಿಂದ ಹೊರಟು ಸೋಮವಾರ ಬೆಳಗ್ಗೆ 05:20ಕ್ಕೆ ರಾಮೇಶ್ವರ ತಲುಪದೆ.
ಮರಳಿ ಅದೇ ದಿನಕ್ಕಿನಲ್ಲಿ ರಾಮೇಶ್ವರಂ-ಹುಬ್ಬಳ್ಳಿ ರೈಲು (07356) ಏಪ್ರಿಲ್ 06 ರಿಂದ ಜೂನ್ 01 ರವರೆಗೆ ಪ್ರತಿ ಸೋಮವಾರ ರಾತ್ರಿ 08:00ಕ್ಕೆ ರಾಮೇಶ್ವರಂನಿಂದ ಹೊರಡುತ್ತದೆ. ಮಂಗಳವಾರ ಸಂಜೆ 07:40 ಗಂಟೆಗೆ ಹುಬ್ಬಳ್ಳಿ ತಲುಪುತ್ತದೆ.
ನಿಲುಗಡೆ ನಿಲ್ದಾಣಗಳು ಯಾವುವು?
ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಟಕಣೆಯಲ್ಲಿ ಮಾಹಿತಿ ನೀಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/swr-to-run-summer-special-trains-from-hubballi-rameshwaram-yeshwanthpur-to-kannur-timings-449079.html. xn--babytilbehr-pgb.com does not claim ownership of this content. All rights remain with the original publisher.
