ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ | Kerala Spice World: History, Nature and the Story Behind India’s Famous Spice Garden Tourism Guide

India

oi-Shiddalingesh S

ಕೇರಳ ಕೇವಲ ಬಿಸಿಲಿನ ತಾಪಮಾನ ಇರುವ ಪ್ರದೇಶ ಅಷ್ಟೆ ಅಲ್ಲಾ ಇದನ್ನು ದೇವರ ಸ್ವಂತ ನಾಡು ಮತ್ತು ಪ್ರವಾಸಿ ತಾಣ ಎಂದು ಕರೆಯುತ್ತಾರೆ. ಇದು ಭಾರತದ ಮಸಾಲೆ ಉದ್ಯಾನವನ ಎಂದು ಕರೆಯಲ್ಪಡುವ ಈ ಹಚ್ಚ ಹಸಿರುನಿಂದ ಕೂಡಿರುವ ರಾಜ್ಯವು ಶತಮಾನಗಳಿಂದ ವ್ಯಾಪಾರಿಗಳನ್ನು ಮತ್ತು ಆಹಾರಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

ಪಶ್ಚಿಮ ಘಟ್ಟಗಳ ಮಂಜಿನ ಬೆಟ್ಟಗಳಿಂದ ಹಿಡಿದು ಕರಾವಳಿ ಪ್ರದೇಶಗಳವರೆಗೆ ಕೇರಳವು ಮೆಣಸು, ಏಲಕ್ಕಿ, ದಾಲ್ಚಿನ್ನಿ, ಲವಂಗ, ಜಾಯಿಕಾಯಿ, ಅರಿಶಿನ ಮತ್ತು ಶುಂಠಿ ಸೇರಿದಂತೆ ವಿಶ್ವಪ್ರಸಿದ್ಧ ಮಸಾಲೆಗಳನ್ನು ಉತ್ಪಾದಿಸುತ್ತದೆ. ಇವುಗಳೇ ಈ ರಾಜ್ಯದ ಆರ್ಥಿಕತೆಯ ಜೊತೆಗೆ ಅದರ ಸಂಸ್ಕೃತಿಯ ಪ್ರಮುಖ ಅಂಶಗಳಾಗಿವೆ.

Kerala Spice World

ಮಸಾಲೆ ಬೆಳೆಗೆ ಸೂಕ್ತ

ಕೇರಳದ ಭೌಗೋಳಿಕ ಪರಿಸ್ಥಿತಿಯು ಮಸಾಲೆ ಪದಾರ್ಥಗಳ ಕೃಷಿಗೆ ಅತ್ಯಂತ ಅನುಕೂಲಕರವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ದಟ್ಟ ನೆರಳು, ಉತ್ತಮ ಮಣ್ಣು ಮತ್ತು ಭಾರೀ ಮಳೆ ಆಗುವುದರಿಂದ ಇದು ಕೃಷಿಗೆ ತುಂಬಾ ಅನೂಕೂಲಕರವಾಗಿದೆ. ಕರಾವಳಿ ಪ್ರದೇಶಗಳ ಮಳೆಗಾಲದ ಹವಾಮಾನ ವರ್ಷಪೂರ್ತಿ ಬೆಳೆಗೆ ನೆರವಾಗುತ್ತದೆ. ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳು ಕೇರಳದ ಅತ್ಯಂತ ಸುಂದರವಾದ ಪ್ರದೇಶಗಳು ಮತ್ತು ಮಸಾಲೆ ತೋಟಗಳಿಗೆ ವಿಶೇಷವಾಗಿ ಪ್ರಸಿದ್ಧವಾಗಿವೆ.

ಮಸಾಲೆ ವ್ಯಾಪಾರದ ಕೇಂದ್ರ

ಕೇರಳದ ಮಸಾಲೆಗಳು ಇತಿಹಾಸದಲ್ಲಿ ಅಪಾರ ಮೌಲ್ಯ ಹೊಂದಿದ್ದು ಅರಬ್ ವ್ಯಾಪಾರಿಗಳು ಕಪ್ಪು ಚಿನ್ನ ಎಂದೇ ಕರೆಯಲ್ಪಟ್ಟ ಕರಿಮೆಣಸಿಗಾಗಿ ಈ ಪ್ರದೇಶಕ್ಕೆ ಬರುತ್ತಿದ್ದರು. ನಂತರ ಚೀನಿ ವ್ಯಾಪಾರಿಗಳು ಮತ್ತು 1498ರಲ್ಲಿ ವಾಸ್ಕೋ ಡ ಗಾಮಾ ಆಗಮನದೊಂದಿಗೆ ಯುರೋಪಿಯನ್ ವ್ಯಾಪಾರಿಗಳು ಕೇರಳದತ್ತ ಮುಖ ಮಾಡಿದರು. ಇದರಿಂದ ಮಸಾಲೆ ವ್ಯಾಪಾರದಲ್ಲಿ ಕೇರಳ ಜಾಗತಿಕ ಕೇಂದ್ರವಾಯಿತು.

ದೈನಂದಿನ ಜೀವನದಲ್ಲಿ ಮಸಾಲೆಗಳ ಮಹತ್ವ

ಕೇರಳದಲ್ಲಿ ಮಸಾಲೆಗಳು ಕೇವಲ ರಫ್ತು ಉತ್ಪನ್ನಗಳಲ್ಲ ಅವು ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆಹಾರದಲ್ಲಿ ರುಚಿ ಹೆಚ್ಚಿಸುವುದರ ಜೊತೆಗೆ ಆಯುರ್ವೇದದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಿಶಿನ, ಶುಂಠಿ, ಲವಂಗ ಮತ್ತು ಜಾಯಿಕಾಯಿ ಮನೆಮದ್ದುಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಕೇರಳದ ಮಸಾಲೆ ಉದ್ಯಾನ ಎಂಬ ಹೆಸರಿನ ಹಿಂದೆ ಕೇವಲ ಕೃಷಿಯಲ್ಲ, ಶತಮಾನಗಳ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಒಳಗೊಂಡಿದೆ. ಪ್ರವಾಸಿಗರಿಗೆ ಇದು ಕೇವಲ ಪ್ರವಾಸವಲ್ಲ ತೋಟಗಳಲ್ಲಿ ನಡೆಯುತ್ತಾ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಬಹುದು ಮತ್ತು ತಾಜಾ ಮಸಾಲೆಗಳನ್ನು ಖರೀದಿಸಬಹುದು. ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಕೇರಳದ ಮಸಾಲೆ ತೋಟಗಳಿಗೆ ಭೇಟಿ ನೀಡಲು ಉತ್ತಮ ಸಮಯ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/kerala-spice-world-history-nature-and-the-story-behind-india-s-famous-spice-garden-tourism-guide-448419.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo