
India
oi-Shankrappa Parangi
ಭಾರತೀಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ಮತ್ತಷ್ಟು ಸುರಕ್ಷತೆ, ಸಿಗ್ನಲಿಂಗ್ ಮತ್ತು ಸಂವಹನ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿದೆ. ಈ ಸಂಬಂಧ ಬರೋಬ್ಬರಿ 1,364.45 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಸೋಮವಾರ ಅನುಮೋದನೆ ನೀಡಲಾಗಿದೆ. ಮಂಜೂರಾದ ಕಾಮಗಾರಿಗಳಲ್ಲಿ ಲೋಕೋಮೋಟಿವ್ ಗಳಲ್ಲಿ ಕವಚ್ ಒದಗಿಸುವುದು, ಆಪ್ಟಿಕಲ್ ಫೈಬರ್ ಕೇಬಲ್ ನೆಟ್ವರ್ಕ್ ವಿಸ್ತರಣೆ ಮತ್ತು ವಿವಿಧ ರೈಲ್ವೆ ವಲಯಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಗಳೊಂದಿಗೆ ಪ್ಯಾನಲ್ ಇಂಟರ್ಲಾಕಿಂಗ್ ಅನ್ನು ಬದಲಾಯಿಸುವ ಯೋಜನೆಗಳು ಸೇರಿವೆ. ಈ ಎಲ್ಲ ಸುಧಾರಣೆಗಳು ಉತ್ತರ ರೈಲ್ವೆ, ಉತ್ತರ ಮಧ್ಯೆ ರೈಲ್ವೆ ಹಾಗೂ ದಕ್ಷಿಣ ಮಧ್ಯೆ ರೈಲ್ವೆ ವ್ಯಾಪ್ತಿಯಲ್ಲಿ ಜಾರಿಯಾಗಲಿವೆ.
ರೈಲ್ವೆ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ರೈಲ್ವೆಯ ಈ ಒಟ್ಟು ಯೋಜನೆಗಳಲ್ಲಿ 400.86 ಕೋಟಿ ಮೌಲ್ಯದ ವಿಶ್ವಾಸಾರ್ಹ ಸಿಗ್ನಲಿಂಗ್ ವ್ಯವಸ್ಥೆ ಉತ್ತೇಜಿಸಲಾಗುತ್ತಿದೆ. ಉತ್ತರ ರೈಲ್ವೆಯಲ್ಲಿ 3,200ಕ್ಕೂ ಅಧಿಕ ಕಿಲೋಮೀಟರ್ ಗಳಲ್ಲಿ ಆಪ್ಟಿಕಲ್ ಫೈಬರ್ ಸಂವಹನ ವ್ಯವಸ್ಥೆ ನವೀಕರಿಸಲಾಗುತ್ತಿದೆ. ಉತ್ತರ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು ಮೂರು ಕಾಮಗಾರಿಗಳು ನಡೆಯಲಿವೆ. ಅವು ಪಿಎಚ್-33 ಅಡಿಯಲ್ಲಿ 4,871 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತದೆ.

ಒಟ್ಟು 176.76 ಕೋಟಿ ರೂಪಾಯಿ ವೆಚ್ಚದಲ್ಲಿ ಕವಚ ಸುರಕ್ಷತಾ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಮುಂದಾಗಿದೆ. ಅದಕ್ಕಾಗಿ ಉತ್ತರ ಮಧ್ಯ ರೈಲ್ವೆಯಲ್ಲಿ 2,196 ರೂಟ್ ಕಿಲೋಮೀಟರ್ ಗಳಿಗಿಂತ ಹೆಚ್ಚು 2×48 ಫೈಬರ್ ಒ.ಎಫ್.ಸಿ. ನೆಟ್ವರ್ಕ್ ವ್ಯವಸ್ಥೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ದಕ್ಷಿಣ ಮಧ್ಯ ರೈಲ್ವೆಯಲ್ಲಿ ಒಟ್ಟು ₹578.02 ಕೋಟಿ ವೆಚ್ಚದಲ್ಲಿ ಪ್ಯಾನಲ್ ಇಂಟರ್ಲಾಕಿಂಗ್ ಅನ್ನು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಗಳೊಂದಿಗೆ ಬದಲಾಯಿಸಲು ಎರಡು ಐಟಂ ಕಾಮಗಾರಿಗಳನ್ನು ಮಂಜೂರು ಮಾಡಿದೆ. ಈ ಕಾಮಗಾರಿಗಳು “ಕವಚ್/ಎಬಿಎಸ್/ಸಿಟಿಸಿ ಮಂಜೂರಾಗಿರುವ ಎಚ್ಡಿಎನ್/ಎಚ್ಯುಎನ್ ಮಾರ್ಗಗಳಲ್ಲಿನ ಬ್ಯಾಲೆನ್ಸ್ ಸ್ಟೇಷನ್ ಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಒದಗಿಸುವಿಕೆ (ಸಮಗ್ರ ಕೆಲಸ 2024-25)” ಎಂಬ ಶೀರ್ಷಿಕೆಯಡಿಯಲ್ಲಿ ಬರುತ್ತವೆ, ಇದನ್ನು ಪಿಎಚ್-33 ಅಡಿಯಲ್ಲಿ 15,164 ಕೋಟಿ ರೂ. ವೆಚ್ಚದಲ್ಲಿ ಅನುಮೋದಿಸಲಾಗಿದೆ.
ಎಲೆಕ್ಟ್ರಾನಿಕ್- ಪ್ಯಾನಲ್ ಇಂಟರ್ಲಾಕಿಂಗ್ ಕಾಮಗಾರಿ
ಅದೇ ರೀತಿ ದಕ್ಷಿಣ ಮಧ್ಯ ರೈಲ್ವೆಗೆ 1,857 ಕೋಟಿ ರೂ. ಉಪ ಹಂಚಿಕೆ ಮಾಡಲಾಗಿದೆ. ಅದರಡಿ ಎರಡು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ, ಗುಂಟಕಲ್ ವಿಭಾಗದ ಎಚ್.ಡಿ.ಎನ್/ಎಚ್.ಯು.ಎನ್. ಮಾರ್ಗಗಳಲ್ಲಿನ 35 ನಿಲ್ದಾಣಗಳಲ್ಲಿ 426.82 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ನೊಂದಿಗೆ ಪ್ಯಾನಲ್ ಇಂಟರ್ಲಾಕಿಂಗ್ ಅನ್ನು ಬದಲಾಯಿಸಲಾಗುತ್ತದೆ. ನಾಂದೇಡ್ ವಿಭಾಗದ ಎಚ್.ಡಿ.ಎನ್/ಎಚ್.ಯು.ಎನ್. ಮಾರ್ಗಗಳಲ್ಲಿನ 14 ನಿಲ್ದಾಣಗಳಲ್ಲಿ 151.20 ಕೋಟಿ ರೂ. ಹಣದಲ್ಲಿ ಅಂಥದ್ದೆ ಬದಲಾವಣೆ ಮಾಡಲು ರೈಲ್ವೆ ಅಧಿಕಾರಿಗಳು ಯೋಜಿಸಿದ್ದಾರೆ.
232 ಲೋಕೋಮೋಟಿವ್ ಗಳಲ್ಲಿ ಕವಚ ಅಳವಡಿಕೆ
ಭಾರತೀಯ ರೈಲ್ವೆಯು ದಕ್ಷಿಣ ರೈಲ್ವೆಯಲ್ಲಿ 232 ಲೋಕೋಮೋಟಿವ್ ಗಳಿಗೆ ಬರೋಬ್ಬರಿ 208.81 ಕೋಟಿ ವೆಚ್ಚದಲ್ಲಿ ಆನ್-ಬೋರ್ಡ್ ಕವಚ್ 4.0 ಉಪಕರಣಗಳನ್ನು ಅಳವಡಿಸಲಾಗುತ್ತದೆ. ಈ ಪ್ರಸ್ತಾವನೆಯು “ಭಾರತೀಯ ರೈಲ್ವೆಯ ಬಾಕಿ ಮಾರ್ಗಗಳಲ್ಲಿ (2024-25) ದೀರ್ಘಾವಧಿಯ ದೃಷ್ಟಿಯಲ್ಲಿಟ್ಟುಕೊಂಡು ಕವಚ ತಾಂತ್ರಿಕ ವ್ಯವಸ್ಥೆ ಅಳವಡಿಸಲಾಗುವುದು. ಇದೆಲ್ಲವು ಪಿಎಚ್-33 ಅಡಿಯಲ್ಲಿ ₹27,693 ಕೋಟಿ ಒಟ್ಟಾರೆ ವೆಚ್ಚದಲ್ಲಿ ಹಂತ ಹಂತವಾಗಿ ಅಳವಡಿಕೆ ಮಾಡಲು ಪ್ಲಾನ್ ಹಾಕಿಕೊಳ್ಳಲಾಗಿದೆ.
-

Railway Board: ಗಂಟೆಗೆ 220 ಕಿಮೀ ಸಂಚರಿಸಬಲ್ಲ ದೇಶಿ ಸೆಮಿ-ಹೈಸ್ಪೀಡ್ ರೈಲುಗಳ ತಯಾರಿಕೆಗೆ ಗ್ರೀನ್ ಸಿಗ್ನಲ್
-

ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ!
-

Summer Special Trains: ಮೈಸೂರಿನಿಂದ ವಿಶೇಷ ರೈಲು ಸೇವೆ; ಹುಬ್ಬಳ್ಳಿ, ಬೆಂಗಳೂರಿನ ರೈಲು ಸೇವೆ ವಿಸ್ತರಣೆ
-

First Rail: ದಶಕ ಪೂರೈಸಿದ ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲು; ಅದರ ಸಂಚಾರ ವೇಗ, ಮಾರ್ಗದ ವಿವರ
-

Amrit Bharat Express 3.0: ಹೊಸ ವಿನ್ಯಾಸ, ಎಸಿ ಕೋಚ್ ಸಹಿತ ಅಮೃತ್ ಭಾರತ್ ರೈಲು ಸೇವೆ
-

Bengaluru Metro: ನೇರಳೆ- ಹಸಿರು ಮಾರ್ಗದ ಸಂಚಾರ ದಟ್ಟಣೆಗೆ ಮುಕ್ತಿ, ಹೊಸ ರೈಲುಗಳಿಗೆ ಬೋರ್ಡ್ ಅನುಮತಿ
-

High Speed Rail: ಬೆಂಗಳೂರು ಸೇರಿ 3 ಹೈಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ 2027ಕ್ಕೆ ಪೂರ್ಣ, ವಿವರ
-

Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ
-

ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ
-

“ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು”: ಸಿಎಸ್ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ?
-

2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
-

Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral
-

Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ
-

Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್
-

Gold and Silver Rate Today April 5: ಚಿನ್ನ – ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/rail-safety-transformation-indian-railways-sanctions-1-364-cr-for-kavach-4-0-and-digital-signaling-449703.html. xn--babytilbehr-pgb.com does not claim ownership of this content. All rights remain with the original publisher.
