ಭಾರತ ವಿಶ್ವಕಪ್ ಗೆದ್ದ ಬೆನ್ನಲ್ಲೇ ಶುಭ್‌ಮನ್ ಗಿಲ್ ವಿರುದ್ಧ ಸಂಜು ಸ್ಯಾಮ್ಸನ್ ಫೋಟೋ ಎಡಿಟ್ ಆರೋಪ: ಇಲ್ಲಿದೆ ಅಸಲಿ ಸತ್ಯ | Shubman Gill Trolled for ‘Removing’ Sanju Samson From T20 World Cup Photo; But Did It Really Happen?

Sports

oi-Madhusudhan KR

Shumban Gill: ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 8ರಂದು ನಡೆದ ಟಿ20 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿತು. ಈ ಮೂಲಕ ಟೀಂ ಇಂಡಿಯಾ ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಆದರೆ, ಈ ಐತಿಹಾಸಿಕ ಜಯದ ಐದು ದಿನಗಳ ನಂತರ, ಸ್ಟಾರ್ ಬ್ಯಾಟರ್ ಶುಭ್‌ಮನ್ ಗಿಲ್ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಭಾರತವು ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಂಭ್ರಮದ ನಂತರ, ಶುಭ್‌ಮನ್ ಗಿಲ್ ಅವರು ತಾವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋದಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಅವರನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿ ತೆಗೆದುಹಾಕಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಲಾಗಿತ್ತು. ಆದರೆ, ಇದು ಸತ್ಯವಲ್ಲ ಎಂದು ವರದಿಯಾಗಿದೆ.

Shubman Gill Trolled for Removing Sanju Samson From T20 World Cup Photo But Did It Really Happen

ಗಿಲ್‌ ವಿರುದ್ಧ ಫೋಟೋ ಎಡಿಟ್‌ ಮಾಡಿದ ಆರೋಪ

ವಿಶ್ವಕಪ್ ಗೆಲುವಿನ ಸಂಭ್ರಮದ ದಿನದಂದು ತಂಡದ ಆಟಗಾರರು ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದರು. ಗಿಲ್ ಅವರು ಹಂಚಿಕೊಂಡಿರುವ ಫೋಟೋ ಅಂದು ತೆಗೆದ ಹಲವು ಚಿತ್ರಗಳಲ್ಲಿ ಒಂದಾಗಿದೆ ಅಷ್ಟೇ. ಯಶಸ್ವಿ ಜೈಸ್ವಾಲ್ ಅವರು ಕೂಡ ಗಿಲ್ ಹಂಚಿಕೊಂಡಿದ್ದ ಅದೇ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದರಿಂದ, ಗಿಲ್ ಅವರು ಫೋಟೋವನ್ನು ಎಡಿಟ್ ಮಾಡಿದ್ದಾರೆ ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆರೋಪ ಮುಕ್ತನಾದ ಗಿಲ್‌

ಸಂಜು ಸ್ಯಾಮ್ಸನ್ ಅವರು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಿಜ. ಆದರೆ, ಗಿಲ್ ಅವರ ಮೇಲೆ ಮಾಡಲಾಗಿರುವ ಆರೋಪ ಮತ್ತು ಫೋಟೋ ಎಡಿಟಿಂಗ್‌ನ ಸುಳ್ಳು ಸುದ್ದಿಗಳು ಆಟಗಾರರ ನಡುವಿನ ಸಂಬಂಧವನ್ನು ಹಾಳುಮಾಡುವ ಪ್ರಯತ್ನಗಳಾಗಿವೆ. ಇದು ಕೇವಲ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾದ ಊಹಾಪೋಹ ಮತ್ತು ತಪ್ಪು ಗ್ರಹಿಕೆ ಅಷ್ಟೆ. ಗಿಲ್ ಅವರು ಯಾವುದೇ ಫೋಟೋವನ್ನು ಎಡಿಟ್ ಮಾಡಿಲ್ಲ ಎಂದು ತಿಳಿದುಬಂದಿದೆ.

ಟಿ20 ವಿಶ್ವಕಪ್‌ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದಿದ್ದ ಸಂಜು ಸ್ಯಾಮ್ಸನ್ ಅವರನ್ನು ಗಿಲ್ ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ. ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಸಂಜು ಅವರ ಫೋಟೋವನ್ನು ಎಡಿಟ್ ಮಾಡಿ ತೆಗೆದುಹಾಕಿದ್ದಾರೆ ಎನ್ನುವ ಆಕ್ರೋಶಗಳು ಭುಗಿಲೆದ್ದಿದ್ದವು. ಆದರೆ, ಇದೀಗ ಇವೆಲ್ಲವೂ ಸುಳ್ಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಮಿಂಚಿದ ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಅವರು 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದರು. ಆರಂಭದಲ್ಲಿ ತಂಡದ ಆಡುವ 11ರ ಬಳಗದಲ್ಲಿ ಖಾಯಂ ಆಟಗಾರರಾಗಿರದಿದ್ದರೂ, ಸಿಕ್ಕ ಅವಕಾಶವನ್ನು ಅವರು ಸಂಪೂರ್ಣವಾಗಿ ಬಳಸಿಕೊಂಡರು. ಐದು ಇನ್ನಿಂಗ್ಸ್‌ಗಳಲ್ಲಿ 80.25ರ ಸರಾಸರಿ ಮತ್ತು 199.37ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 321 ರನ್‌ಗಳನ್ನು ಗಳಿಸಿದರು. ವೆ

ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 97*, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 89 ಮತ್ತು ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 89 ರನ್ ಸಿಡಿಸಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಯನ್ನು ಸಹ ಪಡೆದುಕೊಂಡರು. ಈ ಅದ್ಭುತ ಯಶಸ್ಸಿನ ಬೆನ್ನಲ್ಲೇ, ಶುಭ್‌ಮನ್ ಗಿಲ್ ಅವರ ಪೋಸ್ಟ್‌ ಕುರಿತಾದ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದು, ಇದೀಗ ಅದಕ್ಕೆ ಸ್ಪಷ್ಟನೆ ಕೂಡ ಸಿಕ್ಕಿದೆ. ಈ ಮೂಲಕ ವಿವಾದಕ್ಕೆ ನಾಂದಿ ಆಡಿದಂತಾಗಿದೆ.
ಒಟ್ಟಾರೆಯಾಗಿ, 2026ರ ಟಿ20 ವಿಶ್ವಕಪ್ ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನದ ಒಂದು ಸುಂದರ ತಿರುವು ನೀಡಿದ ಟೂರ್ನಿಯಾಗಿದೆ. ಆದರೆ, ತಂಡದ ಆಯ್ಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಇಂತಹ ಸಣ್ಣ ವಿಚಾರಗಳು ಆಗಾಗ ವಿವಾದಗಳಿಗೆ ಕಾರಣವಾಗುತ್ತಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/shubman-gill-trolled-for-removing-sanju-samson-from-t20-world-cup-photo-but-did-it-really-happen-446971.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo