ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್‌ಕುಮಾರ್‌ | Varalaxmi Sarathkumar Sparks Debate Plan Finances Before Having Children In recent interview

Entertainment

oi-Manohara M

Varalaxmi Sarathkumar: ಕನ್ನಡದ “ಮಾಣಿಕ್ಯ” ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಜೊತೆ ನಟಿಸಿದ್ದ ಬಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ಇತ್ತೀಚೆಗೆ ತಮ್ಮ ಚೊಚ್ಚಲ ನಿರ್ದೇಶನದ “sಸರಸ್ವತಿ” ಚಿತ್ರದ ಪ್ರಚಾರದ ವೇಳೆ ಮಕ್ಕಳನ್ನು ಹೊಂದುವ ಮತ್ತು ಆರ್ಥಿಕ ಸ್ಥಿರತೆಯ ಬಗ್ಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ದಂಪತಿಗಳು ಆರ್ಥಿಕವಾಗಿ ಸದೃಢರಾದ ನಂತರವಷ್ಟೇ ಮಕ್ಕಳನ್ನು ಪಡೆಯುವ ಬಗ್ಗೆ ಯೋಚಿಸಬೇಕು” ಎಂದು ಸಲಹೆ ನೀಡಿದ್ದಾರೆ. ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದರೂ, ಜನರು ಲೈಂಗಿಕ ಶಿಕ್ಷಣ ಅಥವಾ ಕುಟುಂಬ ಯೋಜನೆಯ ಬಗ್ಗೆ ಮಾತನಾಡಲು ಇಂದಿಗೂ ಮುಜುಗರಪಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಕ್ಕಳನ್ನು ಹೆತ್ತು ಪರದಾಡುತ್ತಾರೆ

ಅನೇಕರು ಯಾವುದೇ ಮುನ್ಸೂಚನೆ ಅಥವಾ ಯೋಜನೆಯಿಲ್ಲದೆ ಮಕ್ಕಳನ್ನು ಫ್ಯಾಕ್ಟರಿಯಂತೆ ಹೆರುತ್ತಾರೆ ಮತ್ತು ನಂತರ ಆರ್ಥಿಕ ಸಂಕಷ್ಟ ಎದುರಾದಾಗ ಸಹಾಯಕ್ಕಾಗಿ ಪರದಾಡುತ್ತಾರೆ ಎಂದಿದ್ದಾರೆ. ಈ ಸಂದರ್ಶನದಲ್ಲಿ ವರಲಕ್ಷ್ಮಿ ಅವರ ಜೊತೆಗಿದ್ದ ನಟಿ ಪ್ರಿಯಾಮಣಿ ಕೂಡ ಆ ಮಾತಿಗೆ ಧ್ವನಿಗೂಡಿಸಿ, ಮಕ್ಕಳ ಪಾಲನೆಗೆ ಆರ್ಥಿಕ ಶಿಸ್ತು ಅಗತ್ಯ ಎಂದು ಬೆಂಬಲಿಸಿದ್ದಾರೆ. ನಟಿ ಲಕ್ಷ್ಮಿ ಮಂಚು ಕೂಡ ಈ ವಿಡಿಯೋಗೆ ಚಪ್ಪಾಳೆ ತಟ್ಟುವ ಎಮೋಜಿಗಳನ್ನು ಹಾಕುವ ಮೂಲಕ ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆ. ವರಲಕ್ಷ್ಮಿ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ “ಇಂದಿನ ಕಾಲದಲ್ಲಿ ಜೀವನ ನಿರ್ವಹಣೆ ಅತ್ಯಂತ ದುಬಾರಿಯಾಗಿದೆ. ಸರಿಯಾದ ಯೋಜನೆಯಿಲ್ಲದೆ ಮಕ್ಕಳನ್ನು ಪಡೆದು ನಂತರ ಅವರ ಶಿಕ್ಷಣ ಅಥವಾ ಖರ್ಚಿಗಾಗಿ ಇತರರ ಸಹಾಯ ಕೇಳುವುದು ತಪ್ಪು” ಎಂದು ನೇರವಾಗಿ ಹೇಳಿದ್ದಾರೆ.

Varalaxmi Sarathkumar

ಮಕ್ಕಳನ್ನು ಮಾಡಿಕೊಳ್ಳಿ ಎಂದು ಯಾರೂ ಒತ್ತಾಯಿಸುವುದಿಲ್ಲ, ಆದರೆ ಒಮ್ಮೆ ಮಗು ಪಡೆಯುವ ನಿರ್ಧಾರ ಮಾಡಿದ ಮೇಲೆ ಅವರ ಜವಾಬ್ದಾರಿಯನ್ನು ಹೊರಲು ನೀವು ಸಿದ್ಧರಿರಬೇಕು. ಸರಿಯಾದ ಯೋಜನೆ ಇಲ್ಲದೆ ಮಗು ಪಡೆದು ನಂತರ ಆರ್ಥಿಕ ತೊಂದರೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. ಅಲ್ಲದೆ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಮಕ್ಕಳನ್ನು ಬೆಳೆಸುವುದು ಬಹಳ ದುಬಾರಿಯಾಗಿದೆ ಎಂದು ವರಲಕ್ಷ್ಮಿ ಎಚ್ಚರಿಸಿದ್ದಾರೆ.

ನಿಮ್ಮ ಮಕ್ಕಳನ್ನು ನೀವೇ ನೋಡಿಕೊಳ್ಳಿ

“ನಾನು ಮಕ್ಕಳನ್ನು ಹೊಂದುವುದಕ್ಕೆ ವಿರೋಧಿಯಲ್ಲ, ಆದರೆ ಅವರಿಗೆ ಬೇಕಾದ ಅಗತ್ಯ ಸೌಲಭ್ಯ ಮತ್ತು ಜೀವನ ನೀಡುವ ಶಕ್ತಿ ನಿಮಗಿರಬೇಕು. ಜನರು ತಮ್ಮ ಮಕ್ಕಳ ಶಿಕ್ಷಣ ಅಥವಾ ಸಹಾಯಕ್ಕಾಗಿ ನನ್ನ ಬಳಿ ಬರುತ್ತಾರೆ, ಆ ಮಕ್ಕಳಿಗೆ ನಾನು ಜನ್ಮ ನೀಡಿದ್ದೇನೆಯೇ? ನಿಮ್ಮ ತಪ್ಪುಗಳಿಗೆ ನಾನು ಯಾಕೆ ಹೊಣೆಯಾಗಬೇಕು? ನಿಮ್ಮ ಮಕ್ಕಳನ್ನು ನೀವೇ ನೋಡಿಕೊಳ್ಳಿ” ಎಂದು ಖಾರವಾಗಿ ಹೇಳಿದ್ದಾರೆ. ದಂಪತಿಗಳು ಮದುವೆಯಾದ ತಕ್ಷಣ ಮಗು ಪಡೆಯುವ ಬದಲು, ಮತ್ತೊಬ್ಬ ವ್ಯಕ್ತಿಯನ್ನು ಸಾಕಿ ಸಲಹುವಷ್ಟು ಆರ್ಥಿಕ ಸ್ಥಿರತೆ ಬಂದ ನಂತರವೇ ಈ ಬಗ್ಗೆ ಯೋಚಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. ನಟಿಯರಾದ ಪ್ರಿಯಾಮಣಿ ಮತ್ತು ಲಕ್ಷ್ಮಿ ಮಂಚು ವರಲಕ್ಷ್ಮಿ ಅವರ ನಿಲುವನ್ನು ಬೆಂಬಲಿಸಿದ್ದಾರೆ. ಆದರೆ ಅನೇಕ ನೆಟ್ಟಿಗರು ಈ ಮಾತುಗಳನ್ನು “ಶ್ರೀಮಂತಿಕೆಯ ಅಹಂಕಾರ” ಎಂದು ಕರೆದಿದ್ದಾರೆ. ಮಕ್ಕಳನ್ನು ಪಡೆಯುವುದು ಕೇವಲ ಶ್ರೀಮಂತರ ಹಕ್ಕಲ್ಲ ಮತ್ತು ಇದನ್ನು ಕೇವಲ ಹಣದ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಕೆಲವರು ವಾದಿಸಿದ್ದಾರೆ. ಆದರೂ ಜವಾಬ್ದಾರಿಯುತ ಪೋಷಕರಾಗಲು ಆರ್ಥಿಕ ಭದ್ರತೆ ಮುಖ್ಯ ಎಂಬ ಅವರ ಮಾತನ್ನು ಅನೇಕರು “ಕಟು ಸತ್ಯ” ಎಂದು ಒಪ್ಪಿಕೊಂಡಿದ್ದಾರೆ.

ಒಂದು ವರ್ಗದ ಜನರು ವರಲಕ್ಷ್ಮಿ ಅವರ ಮಾತುಗಳು ಪ್ರಾಯೋಗಿಕವಾಗಿವೆ ಮತ್ತು ಜವಾಬ್ದಾರಿಯುತ ಪೋಷಕರಾಗಲು ಆರ್ಥಿಕ ಶಕ್ತಿ ಮುಖ್ಯ ಎಂದು ಬೆಂಬಲಿಸುತ್ತಿದ್ದಾರೆ. “ಸತ್ಯವನ್ನು ಹೇಳಿದರೆ ಸಮಾಜಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ” ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ವರಲಕ್ಷ್ಮಿ ಅವರ ಈ ಖಡಕ್ ಮಾತುಗಳು ಈಗ ಚಿತ್ರರಂಗ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದು, ಕುಟುಂಬ ಯೋಜನೆ ಮತ್ತು ಆರ್ಥಿಕ ಭದ್ರತೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/varalaxmi-sarathkumar-sparks-debate-plan-finances-before-having-children-in-recent-interview-447133.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo