ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಭುಗಿಲೆದ್ದ ಯುದ್ಧದ ಕಿಚ್ಚು: ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ಮೊಜ್ತಬಾ ಖಮೇನಿ! | Mojtaba Khamenei: Iran New Supreme Leader Warns of Strong Response to US–Israel Attacks: Know detail

International

oi-Madhusudhan KR

Mojtaba Khamenei: ಅಮೆರಿಕ ಮತ್ತು ಇಸ್ರೇಲ್‌ನ ದಾಳಿಗಳಿಗೆ ಸಂಬಂಧಿಸಿದಂತೆ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ಶತ್ರುಗಳಿಂದ ನಾವು ಪರಿಹಾರ ಪಡೆಯುತ್ತೇವೆ ಅಥವಾ ಅಷ್ಟೇ ಪ್ರಮಾಣದಲ್ಲಿ ಅವರ ಆಸ್ತಿಪಾಸ್ತಿಗಳನ್ನು ನಾಶ ಮಾಡುತ್ತೇವೆ” ಎಂದು ಅವರು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ವಿರುದ್ಧ ಆರ್ಥಿಕ ಮತ್ತು ಭದ್ರತಾ ಒತ್ತಡ ಹೇರುವ ಉದ್ದೇಶದಿಂದ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ನಿರ್ಬಂಧಿಸುವುದನ್ನು ಮುಂದುವರೆಸಲಾಗುತ್ತದೆ. ಮಧ್ಯಪ್ರಾಚ್ಯದ ನೆರೆಯ ರಾಷ್ಟ್ರಗಳ ಮೇಲಿನ ದಾಳಿಗಳನ್ನು ಇರಾನ್ ನಿಲ್ಲಿಸುವುದಿಲ್ಲ, ಅವು ಮುಂದುವರಿಯಲಿವೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Mojtaba Khamenei Iran New Supreme Leader Warns of Strong Response to US Israel Attacks Know detail

ತೀವ್ರ ಕುತೂಹಲ ಮೂಡಿಸಿದ ಮೊಜ್ತಬಾ ಖಮೇನಿ ಹೇಳಿಕೆ

ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಉಲ್ಬಣಗೊಂಡಿರುವ ಸಮಯದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಇದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

“ತಕ್ಕ ಪ್ರತ್ಯುತ್ತರ ನೀಡಲಾಗುವುದು”

“ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು,” ಎಂದು ಆಜ್ಞೆ ಮಾಡಿದ್ದಾರೆ. ಭದ್ರತೆಯ ದೃಷ್ಟಿಯಿಂದ ಮೊಜ್ತಬಾ ಖಮೇನಿ ಅವರು ನೇರವಾಗಿ ಕ್ಯಾಮರಾ ಮುಂದೆ ಬಂದಿಲ್ಲ. ಅವರ ಈ ಹೇಳಿಕೆಯನ್ನು ಸರ್ಕಾರಿ ಮಾಧ್ಯಮದ ಸುದ್ದಿ ನಿರೂಪಕರೊಬ್ಬರು ಓದಿದ್ದಾರೆ ಎಂದು ವರದಿಯಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/mojtaba-khamenei-iran-new-supreme-leader-warns-of-strong-response-to-us-israel-attacks-know-detail-446883.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo