ಮಧ್ಯಪ್ರಾಚ್ಯ ಕೊತ ಕೊತ, ಯುದ್ಧದ ತೀವ್ರತೆಗೆ ಬೀಳುತ್ತಿಲ್ಲ ಬ್ರೇಕ್ | Operation Roaring Lion | Operation Roaring Lion Against Iran And Here Is The Details About Present Situation Of Middle East

International

-Malathesha M

ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ತೀವ್ರ ತಿಕ್ಕಾಟ ಈಗಲೂ ನಿಂತಿಲ್ಲ, ಇಬ್ಬರ ಮಧ್ಯೆ ದೊಡ್ಡ ಮಟ್ಟದಲ್ಲಿ ಪರಸ್ಪರ ದಾಳಿ ಹಾಗೂ ಪ್ರತಿದಾಳಿ ಮುಂದುವರಿದಿದೆ. ಹೀಗಾಗಿ ಮಧ್ಯಪ್ರಾಚ್ಯವು ಕೊತ ಕೊತ ಕುದಿಯುತ್ತಿದ್ದು, ಈ ಯುದ್ಧದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ ಈಗಾಗಲೇ 1,500 ದಾಟಿದೆ. ಹಾಗೇ ಇದೇ ವಾರಾಂತ್ಯದ ಒಳಗಾಗಿ ಸಾವಿನ ಸಂಖ್ಯೆ 2,000 ಮುಟ್ಟಿದರೂ ಅಚ್ಚರಿ ಇಲ್ಲ, ಹೀಗಿದ್ದಾಗ ಜಗತ್ತಿನ ಪ್ರತಿಯೊಂದು ದೇಶವೂ ಮಧ್ಯಪ್ರಾಚ್ಯ ಯುದ್ಧ ನಿಲ್ಲಲಿ ಎಂದು ಬಯಸುತ್ತಿವೆ. ಇದಕ್ಕಾಗಿಯೇ ಶಾಂತಿ ಮಾತುಕತೆಗೆ ಎಷ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದರೂ ಅದು ವರ್ಕೌಟ್ ಆಗುತ್ತಿಲ್ಲ. ಬದಲಾಗಿ ಈ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುತ್ತಿದೆ.

ಫೆಬ್ರವರಿ 28 ಶನಿವಾರ ಇಸ್ರೇಲ್ ಸೇನೆ ಇರಾನ್ ವಿರುದ್ಧ ಮುಗಿಬಿದ್ದು ಅಟ್ಯಾಕ್ ಶುರು ಮಾಡಿದ ನಂತರ ಈ ಯುದ್ಧ ಶುರುವಾಗಿತ್ತು. ಹಾಗೇ ಯುದ್ಧ ಆರಂಭವಾದ ಮೊದಲ ದಿನವೇ ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿಸಿತ್ತು ಇಸ್ರೇಲ್. ಒಂದು ಕಡೆ ಅಮೆರಿಕ ತನ್ನ ಸೇನೆಯನ್ನ ಇರಾನ್ ಸಮುದ್ರದಲ್ಲಿ ನಿಯೋಜನೆ ಮಾಡಿ ಕಾಯುತ್ತಿದ್ದರೆ, ಇನ್ನೊಂದು ಕಡೆ ಇಸ್ರೇಲ್ ತನ್ನ ಕ್ಷಿಪಣಿಗಳು & ಯುದ್ಧ ವಿಮಾನ ಬಳಸಿ ದಾಳಿ ಶುರು ಮಾಡಿತ್ತು. ಹೀಗೆ ತನ್ನ ದೇಶದ ನಾಯಕನ ಕಥೆ ಮುಗಿಸಿದ ಕಾರಣಕ್ಕಾಗಿ, ಇರಾನ್ ಸೇನೆ ತನ್ನ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ತೆಗೆದುಕೊಂಡು ಬಂದು ಬಡಿದಾಡುತ್ತಿದೆ. ಈ ಹಿನ್ನೆಲೆ ಹಿಂಸಾಚಾರ ಜೋರಾಗಿದ್ದು, ಸಾವಿರಾರು ಜನರು ಜೀವ ಬಿಟ್ಟಿದ್ದಾರೆ. ಮತ್ತೊಂದು ಕಡೆ ಪರಮಾಣು ದಾಳಿ ಭಯ ಕೂಡ ಇದೀಗ ಆವರಿಸಿದ್ದು, ಅಮೆರಿಕ ಹಾಗೂ ಇಸ್ರೇಲ್ ಕೂಡ ಇರಾನ್ ಮೇಲೆ ಈಗ ಹಗಲು ರಾತ್ರಿ ಕಣ್ಣಿಟ್ಟು ದಾಳಿ ಮುಂದುವರಿಸಿವೆ.

Operation Roaring Lion

ಇರಾನ್ ಪ್ರಮುಖ ನೆಲೆಗಳ ಮೇಲೆ ದಾಳಿ

ಅಮೆರಿಕ & ಇಸ್ರೇಲ್ ಒಟ್ಟಾಗಿ ಈಗ ಇರಾನ್ ದೇಶದ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಿ, ದೊಡ್ಡ ಮಟ್ಟದ ಎಚ್ಚರಿಕೆ ನೀಡಿವೆ. ಆದರೂ ಇರಾನ್ ಮಾತ್ರ ತನ್ನ ದಾಳಿ ನಿಲ್ಲಿಸದೆ ಯುದ್ಧ ಮುಂದುವರಿಸುವ ಮುನ್ಸೂಚನೆ ನೀಡಿದೆ. ಇರಾನ್ ರಾಜಧಾನಿ ತೆಹ್ರಾನ್ ಈಗಾಗಲೇ ಅಮೆರಿಕ & ಇಸ್ರೇಲ್ ದಾಳಿ ಹಿನ್ನೆಲೆ ತತ್ತರಿಸಿ ಹೋಗಿದ್ದು, ಸಾಮಾನ್ಯ ಜನರು ಬದುಕುವುದೇ ಕಷ್ಟಕರ ಎಂಬಂತಾಗಿದೆ. ಇನ್ನುಳಿದಂತೆ ಅತ್ತ ಸಾಮಾನ್ಯ ಜನರು ಆದಷ್ಟು ಬೇಗ ಇರಾನ್ ತೊರೆದು ಬೇರೆ ದೇಶಗಳಿಗೆ ಪಲಾಯನ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿದ್ದರೂ ಅದ್ಯಾವುದೂ ಕೈಗೂಡದೆ, ಜೀವ ಭಯದಲ್ಲೇ ಈಗ ಜೀವನ ಕಳೆಯಬೇಕಾಗಿ ಬಂದಿದೆ.

ಯುದ್ಧ ನಿಲ್ಲುವುದು ಯಾವಾಗ?

ಪರಮಾಣು ಶಾಂತಿ ಒಪ್ಪಂದದ ವಿಚಾರವಾಗಿ ಶುರುವಾಗಿದ್ದ ಇರಾನ್ & ಅಮೆರಿಕ ನಡುವಿನ ಕಿರಿಕ್ ಈಗ ಭೀಕರ ಯುದ್ಧವಾಗಿ ಪರಿಣಮಿಸಿದ್ದು, ಸಾವಿರಾರು ಜನರನ್ನು ಕೆಲವೇ ದಿನಗಳಲ್ಲಿ ಬಲಿ ಪಡೆದಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡುತ್ತಿರುವ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಇನ್ನೂ ಹಲವು ದಿನಗಳ ಕಾಲ ಯುದ್ಧ ನಿಲ್ಲವುದಿಲ್ಲ ಎನ್ನಲಾಗಿದ್ದು, ಯುದ್ಧ ನಿಲ್ಲಿಸುವ ಪ್ರಯತ್ನಗಳು ವಿಫಲವಾಗುತ್ತಿವೆ. ಇರಾನ್ ಮತ್ತು ಅಮೆರಿಕ ಯುದ್ಧದ ವಿಚಾರದಲ್ಲಿ ಎಲ್ಲಾ ಕಡೆಯೂ ಸಾಲು ಸಾಲು ಚರ್ಚೆಗಳು ಈಗ ನಡೆಯುತ್ತಾ ಇವೆ. ಈ ಯುದ್ಧವನ್ನು ಬೆಂಬಲಿಸುವ ದೇಶಗಳ ಜೊತೆಗೆ, ಯುದ್ಧ ಬೇಡವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ದೇಶಗಳು ಕೂಡ ಹೆಚ್ಚಾಗಿವೆ. ಅದರಲ್ಲೂ ಅಮೆರಿಕ ನಂಬಿರುವ & ಅಮೆರಿಕದ ಜೊತೆಗೆ ಶತಮಾನಗಳಿಂದ ಸ್ನೇಹ ಉಳಿಸಿಕೊಂಡು ಬಂದಿರುವ ಯುರೋಪ್ ದೇಶಗಳಲ್ಲೇ ಇದೀಗ ಭಿನ್ನರಾಗ ಶುರುವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/operation-roaring-lion-against-iran-and-here-is-the-details-about-present-situation-of-middle-east-011-446159.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo