
International
-Malathesha M
ಉಕ್ರೇನ್ ಸುಮ್ಮನೆ ಇರದೆ ಇರುವೆ ಬಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ, ಕಳೆದ 4 ವರ್ಷಗಳಿಂದ ರಷ್ಯಾ ಜೊತೆಗೆ ಬಡಿದಾಡುತ್ತಿರುವ ಉಕ್ರೇನ್ ಈಗ ಮತ್ತೊಂದು ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದೆ. ಆ ಕಡೆ ರಷ್ಯಾ ಕೈಯಿಂದ ಸರಿಯಾಗಿ ಏಟು ತಿಂದರೂ ಬುದ್ಧಿ ಕಲಿಯದ ಉಕ್ರೇನ್ ಅಧ್ಯಕ್ಷ, ನೇರವಾಗಿ ಹಾವು ಇರುವ ಹುತ್ತಕ್ಕೆ ಕೈಹಾಕಿದ ರೀತಿ ಕಾಣುತ್ತಿದೆ. ಅಂದಹಾಗೆ ಇರಾನ್ ಮತ್ತು ಅಮೆರಿಕ ಮಧ್ಯೆ ಘೋರ ಯುದ್ಧ ನಡೆಯುವ ಸಮಯದಲ್ಲಿ ಉಕ್ರೇನ್ ಕೂಡ ಎಂಟ್ರಿ ಕೊಟ್ಟಿದೆ. ಪಾಶ್ಚಿಮಾತ್ಯ ದೇಶಗಳ ಪರ ಬ್ಯಾಟಿಂಗ್ ಮಾಡಲು ಬಂದಿರುವ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ, ನಾವು ಮಧ್ಯಪ್ರಾಚ್ಯ ದೇಶಗಳಿಗೆ ಇರಾನ್ ದಾಳಿ ಎದುರಿಸಲು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಈ ಘಟನೆ ನಂತರ ಇರಾನ್ ಕೂಡ ರೊಚ್ಚಿಗೆದ್ದು ಏನು ಹೇಳಿದೆ ಗೊತ್ತಾ? ಬನ್ನಿ ತಿಳಿಯೋಣ.
ಅಂದಹಾಗೆ ಇರಾನ್ & ಅಮೆರಿಕ ಬಡಿದಾಡುತ್ತಿದ್ದು, ಇಸ್ರೇಲ್ ಕೂಡ ಅಮೆರಿಕ ಪರ ನಿಂತಿದೆ. ಹಾಗೇ ಈ ಯುದ್ಧದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಒಂಟಿಯಾಗುತ್ತಿರುವ ಸಮಯದಲ್ಲೇ ಉಕ್ರೇನ್ನ ಅಧ್ಯಕ್ಷ ಮಹತ್ವದ ಹೇಳಿಕೆ ನೀಡಿರುವುದು ಗಮನ ಸೆಳೆದಿದೆ. ಅಮೆರಿಕದ ಸೇನಾ ನೆಲೆಗಳು ಇರುವ ಕತಾರ್ & ಕುವೈತ್ ಸೇರಿದಂತೆ ಯುಎಇ ಹಾಗೂ ಸೌದಿ ಅರೇಬಿಯಾ ಸುತ್ತಮುತ್ತಲ ಪ್ರದೇಶಗಳ ಮೇಲೆ ಇರಾನ್ ಪದೇ ಪದೇ ದಾಳಿ ಮಾಡುತ್ತಿದೆ. ಇಂತಹ ಸಮಯದಲ್ಲೇ ಉಕ್ರೇನ್ ಕೊಟ್ಟಿರುವ ಒಂದು ಆಫರ್ ಭಾರಿ ತಲ್ಲಣ ಎಬ್ಬಿಸಿದೆ.

ಹಣಕ್ಕಾಗಿ ಹಾತೊರೆಯುತ್ತಿರುವ ಉಕ್ರೇನ್ ಸೇನೆ
ಇರಾನ್ ಕಡೆಯಿಂದ ಕ್ಷಿಪಣಿಗಳ ಜೊತೆಗೆ ಡ್ರೋನ್ ದಾಳಿ ಕೂಡ ಜೋರಾಗಿದ್ದು, ಹೀಗೆ ದಾಳಿ ನಡೆಯುವ ಸಮಯದಲ್ಲೇ ಉಕ್ರೇನ್ ಒಂದು ಆಫರ್ ಕೊಟ್ಟಿದೆ. ಅದು ಏನು ಅಂದ್ರೆ ನೇರವಾಗಿ ನಾವು ಮಧ್ಯಪ್ರಾಚ್ಯ ದೇಶಗಳ ಜೊತೆಗೆ ನಿಲ್ಲಲಿದ್ದೇವೆ, ಇರಾನ್ ಡ್ರೋನ್ ದಾಳಿ ತಡೆಯಲು ಉಕ್ರೇನ್ ಬೆಂಬಲ ನೀಡಲಿದೆ ಎಂದಿದ್ದಾರೆ ಝಲೆನ್ಸ್ಕಿ. ಇದನ್ನು ಕೇಳಿಸಿಕೊಂಡು ರೊಚ್ಚಿಗೆದ್ದಿರುವ ಇರಾನ್ ಸೇನೆ ಉಕ್ರೇನ್ಗೆ ಕ್ಷಿಪಣಿ ಉಡುಗೊರೆ ಕೊಡುತ್ತೇವೆ ಎಂದಿದೆ. ಉಕ್ರೇನ್ಗೆ ಈಗ ಹಣದ ಅಗತ್ಯತೆ ಇದ್ದು, ರಷ್ಯಾ ವಿರುದ್ಧ ಯುದ್ಧ ಮಾಡಲು ಕಾಸು ಬೇಕಾಗಿದೆ. ಇದೇ ಕಾರಣಕ್ಕೆ ನಮಗೆ ಹಣ ಕೊಟ್ಟರೆ ನಾವು ಮಧ್ಯಪ್ರಾಚ್ಯ ದೇಶಗಳಿಗೆ ಬೆಂಬಲ ನೀಡಲು ಸಿದ್ಧ ಎಂಬ ಸಂದೇಶ ಸಾರಿದೆ ಉಕ್ರೇನ್. ಆದರೆ ಇಂತಹ ನಿರ್ಧಾರಗಳ ಪರಿಣಾಮ ಉಕ್ರೇನ್ ವಿರುದ್ಧ ಇರಾನ್ ಸೇನೆ ದಾಳಿ ಮಾಡಿ ಅಪಾಯ ಉಂಟುಮಾಡುವ ಸಾಧ್ಯತೆ ದಟ್ಟವಾಗಿದೆ.
ರಷ್ಯಾಗೆ ಭಾರಿ ದೊಡ್ಡ ಲಾಭ
ಇರಾನ್ ಮೇಲೆ ದಾಳಿ ಶುರುವಾದ ನಂತರ ಮತ್ತೊಂದೆಡೆ ರಷ್ಯಾಗೆ ಸಖತ್ ಲಾಭ ಆಗುತ್ತಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಇರಾನ್ ನಾಶ ಮಾಡಲು ಅಮೆರಿಕ ರಷ್ಯಾ ತೈಲಕ್ಕೆ ಒಪ್ಪಿಗೆ ನೀಡಿದೆ, ಈ ಬೆಳವಣಿಗೆ ಪರಿಣಾಮ ರಷ್ಯಾಗೆ ಯುದ್ಧದಿಂದ ಲಾಭ ಆಗುತ್ತಿದೆ. ಆ ಮೂಲಕ ಪರೋಕ್ಷವಾಗಿ ಮತ್ತೊಂದು ತಿಕ್ಕಾಟ ಎಂದರೆ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣ ಒದಗಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹೀಗೆಲ್ಲಾ ಹೊತ್ತಿಕೊಂಡಿರುವ ಬೆಂಕಿ ಸಾಲು ಸಾಲು ವಿವಾದಕ್ಕೆ ಕಾರಣವಾಗುತ್ತಿದ್ದು, ಮತ್ತೊಂದು ಕಡೆ ಇರಾನ್ ಈಗ ಉಕ್ರೇನ್ ಮೇಲೆ ಕೂಡ ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-conflict-is-getting-bigger-day-by-day-and-explore-what-ukraine-is-said-to-middle-east-countries-011-447421.html. xn--babytilbehr-pgb.com does not claim ownership of this content. All rights remain with the original publisher.
