ಮಾರ್ನಿಂಗ್ ವಾಕ್ vs ಈವಿನಿಂಗ್ ವಾಕ್: ಯಾವುದು ಉತ್ತಮ? | Morning Walk vs Evening Walk: Which Is Better for Health, Weight Loss and Fitness Overall?

Karnataka

oi-Shiddalingesh S

ನಾವು ಆರೋಗ್ಯವಾಗಿರಲು ದೈಹಿಕ ಚಟುವಟಿಕೆಗಳನ್ನು ಮಾಡುವುದು ಅಗತ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಹಲವರು ತಮ್ಮ ದಿನನಿತ್ಯದ ವ್ಯಾಯಾಮಗಳಲ್ಲಿ ವಾಕಿಂಗ್ ಕೂಡ ಒಂದಾಗಿದೆ. ಕೆಲವರು ವಾಕಿಂಗ್ ಸಮಯವನ್ನು ಬೆಳಿಗ್ಗೆ ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ಸಂಜೆ ಸಮಯವನ್ನು ಆಯ್ಕೆ ಮಾಡಿಕೊಳ್ಳತ್ತಾರೆ. ಆದರೆ ವಾಕಿಂಗ್ ಮಾಡಲು ಯಾವ ಸಮಯ ಸೂಕ್ತ ಎಂಬ ಪ್ರಶ್ನೆ ಎದುರಾಗುತ್ತದೆ. ತಜ್ಞರ ಪ್ರಕಾರ ಬೆಳಿಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವಾಕಿಂಗ್ ಮಾಡಿದರು ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಮುಖ್ಯವಾಗಿ ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ದಿನಚರಿಯನ್ನು ಗಮನದಲ್ಲಿಟ್ಟುಕೊಂಡು ಸಮಯ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದ್ದು, ದಿನವಿಡೀ ಚುರುಕಾಗಿ ಇರಲು ನೆರವಾಗುತ್ತದೆ. ಬೆಳಗಿನ ಸೂರ್ಯನ ಕಿರಣಗಳಿಂದ ನೈಸರ್ಗಿಕವಾಗಿ ವಿಟಮಿನ್ ಡಿ ದೊರೆಯುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ತಜ್ಞರ ಪ್ರಕಾರ ಬೆಳಗಿನ ನಡಿಗೆಯು ನಮ್ಮ ದೇಹದಲ್ಲಿ ಹಾರ್ಮೋನುಗಳನ್ನು ಹೆಚ್ಚಿಸಿ ಮನಸ್ಸಿನ ಮನೋಭಾವವನ್ನು ಉತ್ತಮಗೊಳಿಸುತ್ತದೆ.

Morning Walk

ಇನ್ನೊಂದೆಡೆ ಸಂಜೆ ನಡಿಗೆಯೂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ದಿನವಿಡೀ ಕೆಲಸದಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಇದು ಸಹಕಾರಿ. ರಾತ್ರಿ ಉತ್ತಮ ನಿದ್ರೆ ಪಡೆಯಲು ಸಂಜೆ ನಡಿಗೆ ಸಹಾಯ ಮಾಡುತ್ತದೆ. ವಿಶೇಷವಾಗಿ ಊಟದ ನಂತರ ಸ್ವಲ್ಪ ಹೊತ್ತು ನಡೆಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ದಿನದ ಅಂತ್ಯದಲ್ಲಿ ಸ್ನಾಯುಗಳ ಶಕ್ತಿ ಹೆಚ್ಚಾಗಿರುವುದರಿಂದ ದೈಹಿಕ ಕಾರ್ಯಕ್ಷಮತೆ ಕೂಡ ಉತ್ತಮವಾಗಿರುತ್ತದೆ.

ಇದಲ್ಲದೆ ವಾಕಿಂಗ್ ಮಾಡುವಾಗ ಕೆಲವು ಸರಳ ನಿಯಮಗಳನ್ನು ಪಾಲಿಸುವುದೂ ಅಗತ್ಯವಾಗಿದೆ. ಆರಾಮದಾಯಕವಾದ ಪಾದರಕ್ಷೆಗಳನ್ನು ಧರಿಸುವುದು, ಸರಿಯಾದ ಭಂಗಿಯಲ್ಲಿ ನಡೆಯುವುದು ಮತ್ತು ಆರಂಭದಲ್ಲಿ ನಿಧಾನವಾಗಿ ನಡೆದು ನಂತರ ವೇಗ ಹೆಚ್ಚಿಸಿಕೊಳ್ಳವುದು ಉತ್ತಮ. ನೀರು ಕುಡಿಯುವುದನ್ನು ಮರೆಯಬಾರದು ಮತ್ತು ವಿಶೇಷವಾಗಿ ದೀರ್ಘ ಕಾಲ ನಡೆಯುವವರು ಇದನ್ನು ಗಮನಿಸಬೇಕು. ಜೊತೆಗೆ ಸರಿಯಾದ ಮತ್ತು ನಿಗದಿತ ಸಮಯದಲ್ಲಿ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆರೋಗ್ಯಕರ ಜೀವನಶೈಲಿಗೆ ವಾಕಿಂಗ್ ಒಂದು ಸರಳ ಆದರೆ ಪರಿಣಾಮಕಾರಿ ಮಾರ್ಗವಾಗಿದೆ.

ಒಟ್ಟಿನಲ್ಲಿ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಎರಡೂ ಆರೋಗ್ಯಕ್ಕೆ ಒಳ್ಳೆಯದೇ. ಯಾವ ಸಮಯದಲ್ಲಿ ವಾಕಿಂಗ್ ಮಾಡಬೇಕು ಎಂಬುದು ವ್ಯಕ್ತಿಯ ಅನುಕೂಲತೆ ಮತ್ತು ಅವಶ್ಯಕತೆಗಳ ಮೇಲೆ ಅವಲಂಬಿತವಾಗಿದೆ. ಮುಖ್ಯವಾಗಿ ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ಇದು ದೇಹದ ಫಿಟ್‌ನೆಸ್‌ನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿನ ಆರೋಗ್ಯವನ್ನೂ ಕಾಪಾಡುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/morning-walk-vs-evening-walk-which-is-better-for-health-weight-loss-and-fitness-overall-448633.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo