ಮುಂಬೈನಲ್ಲಿ ಬರೋಬ್ಬರಿ 20,00,00,000 ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ಶುಭ್‌ಮನ್ ಗಿಲ್: ವರದಿ | Shubman Gill Buys ₹20.7 Cr Luxury Apartment Near Mumbai Juhu Beach: Here see Complete details

Sports

oi-Madhusudhan KR

Shubman Gill Property: ಟಿ20 ವಿಶ್ವಕಪ್ 2026 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ನಂತರ, ಶುಭ್‌ಮನ್ ಗಿಲ್ ಇದೀಗ ಐಪಿಎಲ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅವರು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ನಡುವೆಯೇ ಮೈದಾನದ ಹೊರಗಿನ ಅವರ ವೈಯಕ್ತಿಕ ವಿಚಾರಗಳು ಸಖತ್ ಸದ್ದು ಮಾಡುತ್ತಿವೆ.

ವೈಯಕ್ತಿಕ ಗುರಿ ಬಗ್ಗೆ ಮಾತನಾಡಿದ ಶುಭ್‌ಮನ್ ಗಿಲ್‌ ಅವರು, “ನಾನು ವೈಯಕ್ತಿಕ ಗುರಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ದೇಶಕ್ಕಾಗಿ ಆಡಲಿ ಅಥವಾ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಆಡಲಿ, ನನಗೆ ತಂಡವೇ ಮುಖ್ಯ. ನನ್ನ ವೈಯಕ್ತಿಕ ಗುರಿ ತುಂಬಾ ಸರಳ. ಪ್ರತಿನಿಧಿಸುವ ತಂಡ ಗೆಲ್ಲಬೇಕು ಅಷ್ಟೇ. ನನ್ನ ಸಂಪೂರ್ಣ ಗಮನ ಅದರ ಮೇಲೆಯೇ ಇರುತ್ತದೆ,” ಎಂದು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.

Shubman Gill Buys 20 7 Cr Luxury Apartment Near Mumbai Juhu Beach Here see Complete details

ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿ

ಶುಭ್‌ಮನ್ ಗಿಲ್ ಮುಂಬೈನಲ್ಲಿ ಐಷಾರಾಮಿ ಆಸ್ತಿಯೊಂದನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಜ್ಯಾಪ್‌ಕೀ ವರದಿಯ ಪ್ರಕಾರ, ಮುಂಬೈನ ಪ್ರಖ್ಯಾತ ಜುಹು ಬೀಚ್‌ ಬಳಿ ಸುಮಾರು 3,300 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್ ಅನ್ನು ಗಿಲ್ 20.7 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಈ ಒಪ್ಪಂದದ ಪ್ರಕಾರ ಪ್ರತಿ ಚದರ ಅಡಿಗೆ 61,442 ರೂಪಾಯಿ ಬೆಲೆ ನಿಗದಿಯಾಗಿದ್ದು, ಕರಾವಳಿ ತೀರದ ಪ್ರಮುಖ ಪ್ರದೇಶಗಳಲ್ಲಿನ ಆಸ್ತಿಗಳಿಗೆ ಇರುವ ಹೆಚ್ಚಿನ ಬೇಡಿಕೆಯನ್ನು ಇದು ಎತ್ತಿ ತೋರಿಸುತ್ತದೆ.

ವೈಯಕ್ತಿಕ ಗುರಿಗಳ ಬಗ್ಗೆ ಗಿಲ್ ಹೇಳಿದ್ದೇನು?

ಒಂದೆಡೆ ಆಸ್ತಿ ವಿಚಾರ ಮುನ್ನಲೆಗೆ ಬಂದರೆ, ಮತ್ತೊಂದೆಡೆ ಅವರ ವೈಯಕ್ತಿಕ ಗುರಿಗಳ ಬಗ್ಗೆ ಮಹತ್ವದ ವಿಚಾರಗಳು ಹೊರಬಿದ್ದಿವೆ. ಶುಭ್‌ಮನ್ ಗಿಲ್ ಅವರು, “2026ರ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಮತ್ತೊಂದು ಯಶಸ್ವಿ ಅಭಿಯಾನದ ಗುರಿ ಹೊಂದಿದ್ದು, ಪ್ರತಿಷ್ಠಿತ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದೇ ತಮ್ಮ ಮುಖ್ಯ ಉದ್ದೇಶ. ವೈಯಕ್ತಿಕ ಗುರಿಗಳು ಮುಖ್ಯವಾಗಿದ್ದರೂ, ಅವು ಪ್ರತಿ ಟೂರ್ನಿಯೊಂದಿಗೆ ಬದಲಾಗುತ್ತಾ ಹೋಗುತ್ತವೆ,” ಎಂದು ಅವರು ತಿಳಿಸಿದ್ದಾರೆ.

“ಐಪಿಎಲ್‌ನಲ್ಲಿ ಆಡಲಿ ಅಥವಾ ಅಂತಾರಾಷ್ಟ್ರೀಯ ಸರಣಿಯಲ್ಲಿ ಆಡಲಿ. ಒಟ್ಟಿನಲ್ಲಿ ಗೆಲ್ಲುವುದೇ ನನ್ನ ಮುಖ್ಯ ಉದ್ದೇಶವಾಗಿರುತ್ತದೆ. ನನಗೆ ಯಾವುದೇ ವೈಯಕ್ತಿಕ ಗುರಿಗಳಿಲ್ಲ. ಆದರೆ, ಪ್ರತಿ ಟೂರ್ನಿಯೊಂದಿಗೆ ನನ್ನ ಗಮನ ಬದಲಾಗುತ್ತಿರುತ್ತದೆ. ಸದ್ಯಕ್ಕೆ ಐಪಿಎಲ್ ಟ್ರೋಫಿ ಗೆಲ್ಲುವುದೇ ನನ್ನ ಗುರಿ. ಅದು ಮುಗಿದ ನಂತರ ಮುಂದಿನ ಸವಾಲಿಗೆ ತಕ್ಕಂತೆ ನನ್ನ ಗುರಿಗಳನ್ನು ಬದಲಾಯಿಸಿಕೊಳ್ಳುತ್ತೇನೆ,” ಎಂದು ಅವರು ಹೇಳಿದರು.

ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆಯೂ ಶುಭ್‌ಮನ್ ಗಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದು ಆಟದ ನೈಜ ಸತ್ವವನ್ನು ಹಾಳುಮಾಡುತ್ತದೆ. ಕ್ರಿಕೆಟ್ ಎಂಬುದು 11 ಆಟಗಾರರ ನಡುವೆ ನಡೆದರೆ ಮಾತ್ರ ಅದು ಅತ್ಯುತ್ತಮ ಕ್ರೀಡೆಯಾಗಿರುತ್ತದೆ,” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಶುಭ್‌ಮನ್ ಗಿಲ್ ಅವರು ತಮ್ಮ ಗುರಿಗಳ ಬಗ್ಗೆ ನಿಖರವಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಅವರು ಆಸ್ತಿ ಖರೀದಿ ಮಾಡಿದ ವಿಚಾರವೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಅವರು ಮುಂದಿನ ದಿನಗಳಲ್ಲಿ ಏನು ಹೇಳುತ್ತಾರೆ ಎಂದು ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/shubman-gill-buys-20-7-cr-luxury-apartment-near-mumbai-juhu-beach-here-see-complete-details-449013.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo