ಮುಂಬೈ ವಿರುದ್ಧದ ಹೈವೋಲ್ಟೇಜ್‌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ | Royal Challengers Bengaluru Playing XI vs MI: Venkatesh Iyer Likely to Replace Devdutt Padikkal

Sports

oi-Madhusudhan KR

RCB Playing 11 Vs MI: ಮುಂಬೈನ ವಾಂಖೆಡೆ ಸ್ಡೇಡಿಯಂನಲ್ಲಿ ಭಾನುವಾರ (ಏಪ್ರಿಲ್‌ 12) ನಡೆಯಲಿರುವ ಐಪಿಎಲ್‌ 2026ರ 20ನೇ ಹೈವೋಲ್ಟೇಜ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸುಳಿವು ಸಿಕ್ಕಿದೆ.

ಕನ್ನಡಿಗ ದೇವತ್ ಪಡಿಕ್ಕಲ್ ಅವರು ಆಡಿದ ಮೊದಲೆರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ, ಶುಕ್ರವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕದನದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಅವರ ಬದಲಿಗೆ ಸ್ಫೋಟಕ ಬ್ಯಾಟರ್ ವೆಂಕಟೇಶ್ ಅಯ್ಯರ್‌ಗೆ ಸ್ಥಾನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Royal Challengers Bengaluru Playing XI vs MI Venkatesh Iyer Likely to Replace Devdutt Padikkal

ದೇವ್ ಬದಲಿಗೆ ಅಯ್ಯರ್ ಕಣಕ್ಕಿಳಿಸಲು ಚಿಂತನೆ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಯತ್ನಿಸುತ್ತಿದ್ದು, ಮುಂಬೈನ ವಾಂಖೆಡೆ ಅಥವಾ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಂತಹ ಹೈ-ಸ್ಕೋರಿಂಗ್ ಪಿಚ್‌ಗಳಲ್ಲಿ ವೇಗವಾಗಿ ರನ್ ಗಳಿಸುವ ಆಟಗಾರರ ಮೇಲೆ ಕಣ್ಣಿಟ್ಟಿದೆ. ಆದ್ದರಿಂದ ಭಾನುವಾರ ನಡೆಯಲಿರುವ ಎಂಐ ವಿರುದ್ಧ ಹೈವೋಲ್ಟೇಜ್ ಕದನಕ್ಕೆ ಪ್ರಮುಖ ಬದಲಾವಣೆ ಬಗ್ಗೆ ತಂಡದಲ್ಲಿ ಚರ್ಚೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ಫೋಟಕ ಬ್ಯಾಟರ್ ಮತ್ತು ಉಪಯುಕ್ತ ಬೌಲರ್ ಆಗಿರುವ ವೆಂಕಟೇಶ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅಯ್ಯರ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಮುಂಬೈ ಬೌಲರ್‌ಗಳ ಮೇಲೆ ಒತ್ತಡ ಹೇರಲು ಸಹಕಾರಿ ಆಗಬಹುದು. ಆದ್ದರಿಂದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ಆರ್‌ಸಿಬಿ ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಜೋಶ್ ಹೇಜಲ್‌ವುಡ್ ಮೇಲೆ ಎಲ್ಲರ ಕಣ್ಣು

ಆರ್‌ಸಿಬಿ ತಂಡಕ್ಕೆ ಹೇಜಲ್‌ವುಡ್ ಮರಳಿದರೂ ಸಹ, ಕಳೆದ ಪಂದ್ಯದಲ್ಲಿ ಅವರು 2 ವಿಕೆಟ್ ಪಡೆದರೂ, 4 ಓವರ್‌ಗಳಲ್ಲಿ 44 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಆದರೂ, ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಯಶಸ್ಸು ಸಾಧಿಸಲು ಇವರ ಪಾತ್ರ ಬಹಳ ಮುಖ್ಯವಾಗಿದೆ. ಈ ಆಸ್ಟ್ರೇಲಿಯಾದ ವೇಗಿ ಐಪಿಎಲ್ 2025ರಲ್ಲಿ 12 ಪಂದ್ಯಗಳಿಂದ 22 ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

ಯಶ್ ದಯಾಳ್ ಅವರ ಅನುಪಸ್ಥಿತಿಯಲ್ಲಿ, ಅಭಿನಂದನ್ ಸಿಂಗ್ ಅಥವಾ ಮಂಗೇಶ್ ಯಾದವ್ ಅವರು ಭುವನೇಶ್ವರ್ ಕುಮಾರ್‌ಗೆ ಸಾಥ್‌ ನೀಡಲಿದ್ದಾರೆ. ಕಳೆದ ಪಂದ್ಯದಲ್ಲಿ 54 ರನ್ ನೀಡಿ ದುಬಾರಿಯಾಗಿದ್ದ ಅಭಿನಂದನ್ ಸಿಂಗ್ ಬದಲಿಗೆ ಮಂಗೇಶ್ ಯಾದವ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ಕೃನಾಲ್ ಪಾಂಡ್ಯ ಅವರಿಗೂ ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಪ್ರಮುಖ ಪಾತ್ರವಿದೆ. ಏಕೆಂದರೆ ಅವರಿಗೆ ಈ ಮೈದಾನ ಮತ್ತು ಎದುರಾಳಿ ತಂಡದ ಬಗ್ಗೆ ಚೆನ್ನಾಗಿ ತಿಳಿದುಕೊಂಡವರಾಗಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಗೆ ಪ್ಲಾನ್

ಮುಂಬೈ ಇಂಡಿಯನ್ಸ್ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದೆ. ಹೀಗಾಗಿ, ಆರ್‌ಸಿಬಿ ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಉಳಿಸಿಕೊಂಡು ದೊಡ್ಡ ಮೊತ್ತ ದಾಖಲಿಸುವುದು ಅನಿವಾರ್ಯವಾಗಿದೆ. ಪಡಿಕ್ಕಲ್ ಬದಲಿಗೆ ಅಯ್ಯರ್ ಬಂದರೆ ಪವರ್‌ಪ್ಲೇ ನಂತರದ ಓವರ್‌ಗಳಲ್ಲಿ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್, ರಜತ್ ಪಾಟೀದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಅಭಿನಂದನ್ ಸಿಂಗ್.

ಇಂಪ್ಯಾಕ್ಟ್: ಸುಯಶ್ ಶರ್ಮಾ, ದೇವದತ್ ಪಡಿಕ್ಕಲ್, ರಸಿಖ್ ಸಲಾಂ ದಾರ್, ಕನಿಷ್ಕ್ ಚೌಹಾಣ್, ಜೇಕಬ್ ಬೆಥೆಲ್.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/royal-challengers-bengaluru-playing-xi-vs-mi-venkatesh-iyer-likely-to-replace-devdutt-padikkal-450141.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo