ಮೈದಾನಕ್ಕೆ ಬರ್ತಾರಾ ಆರ್‌ಸಿಬಿ ಅಭಿಮಾನಿಗಳ ಹೊಸ ಕ್ರಶ್ ಬಿರ್ಲಾ ಕುಡಿ ಅನನ್ಯಾ?; ಕಾವ್ಯಾ ಮಾರನ್‌ ಬಗ್ಗೆ ಹೊಸ ಚರ್ಚೆ | IPL 2026: Ananya Birla vs SRH’s Kavya Maran Trends as RCB Ownership Shift Sparks Buzz: Know details

Sports

oi-Madhusudhan KR

IPL 2026 RCB Vs SHR: ಐಪಿಎಲ್ 2026ರ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವ ಬದಲಾವಣೆಯು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿ ಮಾಡಿದ ಬೆನ್ನಲ್ಲೇ ಅವರ ಸಹೋದರಿ ಉದ್ಯಮಿ ಅನನ್ಯಾ ಬಿರ್ಲಾ ಅವರ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ. ಅಲ್ಲದೆ, ನೆಟ್ಟಿಗರು ಇವರ ಜೊತೆ ಸನ್‌ರೈಸರ್ಸ್‌ ಹೈದರಾಬಾದ್ ತಡಂದ ಮಾಲಕಿ ಕಾವ್ಯಾ ಮಾರನ್ ಅವರನ್ನು ಹೋಲಿಕೆ ಮಾಡುತ್ತಿದ್ದು, ಇದು ಎಲ್ಲೆಡೆ ವೈರಲ್‌ ಆಗಿದೆ.

ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಸುಮಾರು ₹16,700 ಕೋಟಿ ಮೌಲ್ಯದ ಭಾರಿ ಮೊತ್ತಕ್ಕೆ ಆರ್‌ಸಿಬಿ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ. ಪ್ರಸ್ತುತ ‘ಡಿಯಾಜಿಯೋ’ ಕಂಪನಿಯು ಇದರ ಮಾಲಿಕತ್ವ ಹೊಂದಿದ್ದು, ಈ ಸೀಸನ್‌ ಮುಗಿದ ಬಳಿಕ ಆ ಜವಾಬ್ದಾರಿಯನ್ನು ಬಿರ್ಲಾ ಗ್ರೂಪ್‌ಗೆ ವರ್ಗಾವಣೆ ಮಾಡಲಿದೆ ಎಂದು ತಿಳಿದುಬಂದಿದೆ.

IPL 2026 Ananya Birla vs SRH s Kavya Maran Trends as RCB Ownership Shift Sparks Buzz Know details

ಅನನ್ಯಾ ಬಿರ್ಲಾ ಅವರ ಸಹೋದರ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್‌ಸಿಬಿ ತಂಡದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆರ್ಯಮನ್ ಅಧ್ಯಕ್ಷರಾಗುತ್ತಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಅನನ್ಯಾ ಬಿರ್ಲಾ ಅವರ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಅವರು ತಂಡದ ಮಾಲೀಕತ್ವದ ಪ್ರಮುಖ ಭಾಗವಾಗಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ಯಾರು ಈ ಅನನ್ಯಾ ಬಿರ್ಲಾ?

ಅನನ್ಯಾ ಬಿರ್ಲಾ ಅವರು ಖ್ಯಾತ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ. ಅವರು ಕೇವಲ ಉದ್ಯಮಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗಾಯಕಿ ಮತ್ತು ಪ್ರಸಿದ್ಧ ಫ್ಯಾಷನ್ ಐಕಾನ್ ಕೂಡ ಹೌದು. ಅವರ ಕ್ರಿಯಾಶೀಲ ವ್ಯಕ್ತಿತ್ವವು ಆರ್‌ಸಿಬಿ ತಂಡಕ್ಕೆ ಹೊಸ ಮೆರುಗು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನೂ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕಾವ್ಯ ಮಾರನ್ ಅವರು ಹೇಗೆ ಪ್ರಮುಖ ಆಕರ್ಷಣೆಯಾಗಿದ್ದಾರೋ, ಅದೇ ರೀತಿ ಆರ್‌ಸಿಬಿ ತಂಡಕ್ಕೆ ಇನ್ಮುಂದೆ ಅನನ್ಯಾ ಬಿರ್ಲಾ ಅವರು ಕ್ವೀನ್‌ ಆಗಲಿದ್ದಾರೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಅನನ್ಯಾ ಬಿರ್ಲಾ vs ಕಾವ್ಯಾ ಮಾರನ್

ಕಾವ್ಯಾ ಮಾರನ್: ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಅವರು ಪಂದ್ಯಗಳ ಸಮಯದಲ್ಲಿ ತಮ್ಮ ತಂಡವನ್ನು ಬೆಂಬಲಿಸುತ್ತಾ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುವುದು ಎಲ್ಲರಿಗೂ ತಿಳಿದಿದೆ. ಇದೀಗ ಅನೇಕ ನೆಟ್ಟಿಗರು ಅನನ್ಯಾ ಬಿರ್ಲಾ ಅವರನ್ನು ಕಾವ್ಯ ಮಾರನ್ ಅವರಿಗೆ ಹೋಲಿಸುತ್ತಿದ್ದಾರೆ.

ಅನನ್ಯಾ ಬಿರ್ಲಾ: ಪಂದ್ಯದ ವೇಳೆ ಕಾವ್ಯ ಮಾರನ್ ಹೇಗೆ ಎಸ್‌ಆರ್‌ಹೆಚ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೋ, ಅದೇ ರೀತಿ ಅನನ್ಯಾ ಬಿರ್ಲಾ ಕೂಡ ಆರ್‌ಸಿಬಿ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಉಪಸ್ಥಿತರಿರುತ್ತಾರೆಯೇ ಎಂಬ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಈ ಚರ್ಚೆಗಳು ಐಪಿಎಲ್ ಅಭಿಮಾನಿ ಬಳಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಕೇವಲ ಆಟಗಾರರು ಮಾತ್ರವಲ್ಲದೆ, ತಂಡದ ಪ್ರತಿನಿಧಿಗಳು ಮತ್ತು ಮಾಲೀಕರು ಕೂಡ ಪಂದ್ಯ ವೀಕ್ಷಣೆಯ ಅನುಭವದ ಅವಿಭಾಜ್ಯ ಅಂಗವಾಗುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿಗೆ ಬಿರ್ಲಾ ಕುಟುಂಬದ ಪ್ರವೇಶ ಆಗಿರುವುದು ತಂಡಕ್ಕೆ ಹೊಸ ಮೆರುಗು ನೀಡಿದೆ. ವಿಶೇಷವಾಗಿ ಅನನ್ಯಾ ಬಿರ್ಲಾ ಅವರ ಸ್ಟೈಲಿಶ್ ಮತ್ತು ಕ್ರಿಯಾಶೀಲ ವ್ಯಕ್ತಿತ್ವವು ಆರ್‌ಸಿಬಿ ಬ್ರ್ಯಾಂಡ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ಆರ್‌ಸಿಬಿ ಮಾಲೀಕತ್ವದ ಪ್ರಮುಖ ಹೂಡಿಕೆದಾರರು

ಆರ್‌ಸಿಬಿ ತಂಡದ ಈ ಹೊಸ ಮಾಲೀಕತ್ವವು ಕೇವಲ ಕ್ರೀಡಾ ಜಗತ್ತಿನಲ್ಲಿ ಮಾತ್ರವಲ್ಲದೆ, ವ್ಯವಹಾರಿಕ ಕ್ಷೇತ್ರದಲ್ಲೂ ದೊಡ್ಡ ಸಂಚಲನ ಮೂಡಿಸಿದೆ. ಈ ದೊಟ್ಟ ಮಟ್ಟದ ಒಪ್ಪಂದದಲ್ಲಿ ಹಲವಾರು ಪ್ರಮುಖ ಹೂಡಿಕೆದಾರರು ಭಾಗಿಯಾಗಿದ್ದಾರೆ.

* ಆದಿತ್ಯ ಬಿರ್ಲಾ ಗ್ರೂಪ್ (Aditya Birla Group)

* ಟೈಮ್ಸ್ ಆಫ್ ಇಂಡಿಯಾ ಗ್ರೂಪ್ (Times of India Group)

* ಬ್ಲ್ಯಾಕ್‌ಸ್ಟೋನ್ (Blackstone) – ಜಾಗತಿಕ ಹೂಡಿಕೆ ಸಂಸ್ಥೆ

* ಡೇವಿಡ್ ಬ್ಲಿಟ್ಜರ್ (David Blitzer) – ಅಮೇರಿಕನ್ ಬಿಲಿಯನೇರ್ ಹೂಡಿಕೆದಾರ

ಆರ್‌ಸಿಬಿಯ ಹೊಸ ಅಧ್ಯಾಯ

ಆರ್‌ಸಿಬಿ ತಂಡದ ಮೌಲ್ಯವು ಸರಿಸುಮಾರು $1.8 ಬಿಲಿಯನ್ (ಸುಮಾರು ₹15,000 – ₹16,700 ಕೋಟಿ) ಎಂದು ವರದಿಯಾಗಿದೆ. ಈ ಭಾರಿ ಮೌಲ್ಯದೊಂದಿಗೆ, ಆರ್‌ಸಿಬಿ ಈಗ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ಫ್ರಾಂಚೈಸಿಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಐಪಿಎಲ್ 2026 ಹತ್ತಿರವಾಗುತ್ತಿದ್ದಂತೆ, ಕೇವಲ ಮೈದಾನದ ಪ್ರದರ್ಶನ ಮಾತ್ರವಲ್ಲದೆ, ಹೊಸ ಮಾಲೀಕರು ತಂಡದ ಚಿತ್ರಣವನ್ನು ಹೇಗೆ ಬದಲಿಸಲಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.

ಬಿರ್ಲಾ ಮತ್ತು ಟೈಮ್ಸ್ ಗ್ರೂಪ್‌ನಂತಹ ದೈತ್ಯ ಸಂಸ್ಥೆಗಳ ಪ್ರವೇಶದಿಂದ ಆರ್‌ಸಿಬಿ ಬ್ರ್ಯಾಂಡ್ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವ ಸಾಧ್ಯತೆಯಿದೆ. ಹೊಸ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರ ಅನುಭವವು ಅಭಿಮಾನಿಗಳಿಗೆ ಕ್ರೀಡಾಂಗಣದಲ್ಲಿ ಹೊಸ ಅನುಭವವನ್ನು ನೀಡಬಹುದು.
ಮಾರ್ಚ್ 28 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ತಂಡದ ಹೊಸ ಲೋಗೋ ಅಥವಾ ಹೊಸ ಜರ್ಸಿಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆಯೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮನೆಮಾಡಿದೆ.

ಅನನ್ಯಾ ಬಿರ್ಲಾ ವೃತ್ತಿಜೀವನ

ಅನನ್ಯಾ ಬಿರ್ಲಾ ಅವರು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರ ಹಿರಿಯ ಪುತ್ರಿ. ಬಿರ್ಲಾ ಕುಟುಂಬದ ಕುಡಿಯಾಗಿದ್ದರೂ ಸಹ, ಅವರು ಒಬ್ಬ ಉದ್ಯಮಿ ಮತ್ತು ಹೂಡಿಕೆದಾರರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು 1994 ರಲ್ಲಿ ಮುಂಬೈನಲ್ಲಿ ಜನಿಸಿದ್ದು, ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಅಮೆರಿಕನ್ ಸ್ಕೂಲ್ ಆಫ್ ಬಾಂಬೆನಲ್ಲಿ ಪೂರೈಸಿದರು.

ನಂತರ ಅವರು ಉನ್ನತ ಶಿಕ್ಷಣಕ್ಕಾಗಿ ಲಂಡನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ, ಅಲ್ಲಿ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ವಿಷಯದಲ್ಲಿ ವ್ಯಾಸಂಗ ಮಾಡಿದರು. ಆಕ್ಸ್‌ಫರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳಲ್ಲೇ ಅವರು ವ್ಯವಹಾರ ಮತ್ತು ಸಂಗೀತ ಎರಡರಲ್ಲೂ ಆಸಕ್ತಿ ಬೆಳೆಸಿಕೊಂಡರು. ಇದು ಅವರ ಮುಂದಿನ ವೃತ್ತಿಜೀವನಕ್ಕೆ ಅಡಿಪಾಯವಾಯಿತು.

ಅನನ್ಯಾ ಬಿರ್ಲಾ ಅವರು ಕೇವಲ ಕೌಟುಂಬಿಕ ವ್ಯವಹಾರಕ್ಕೆ ಸೀಮಿತವಾಗದೆ, ಮೈಕ್ರೋಫೈನಾನ್ಸ್ ಮತ್ತು ಐಷಾರಾಮಿ ಇ-ಕಾಮರ್ಸ್ ಕ್ಷೇತ್ರಗಳಲ್ಲಿ ತಮ್ಮದೇ ಆದ ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಜೊತೆಗೆ ಅವರು ಅಂತಾರಾಷ್ಟ್ರೀಯ ಮಟ್ಟದ ಇಂಗ್ಲಿಷ್ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ಆರ್‌ಸಿಬಿ ಮಾಲೀಕತ್ವದ ಬದಲಾವಣೆಯ ನಂತರ, ಅವರು ತಂಡದ ಪ್ರಮುಖ ರಾಯಭಾರಿಯಾಗಿ ಅಥವಾ ಫ್ರಾಂಚೈಸಿಯ ಮುಖವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಅನನ್ಯಾ ಪಾಪ್ ಗಾಯಕಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದರು ಮತ್ತು ಇಂಗ್ಲಿಷ್ ಹಾಡಿನ ಮೂಲಕ ‘ಪ್ಲಾಟಿನಂ’ ಗೌರವವನ್ನು ಪಡೆದ ಭಾರತದ ಮೊದಲ ಕಲಾವಿದರಲ್ಲಿ ಒಬ್ಬರಾದರು. ಈ ಯಶಸ್ಸಿನ ಹೊರತಾಗಿಯೂ, ಅವರು ನಂತರ ಪೂರ್ಣ ಪ್ರಮಾಣದಲ್ಲಿ ವ್ಯವಹಾರದ ಮೇಲೆ ಗಮನ ಹರಿಸುವ ಉದ್ದೇಶದಿಂದ ಸಂಗೀತ ಲೋಕದಿಂದ ದೂರ ಸರಿದರು.

2024-25ರ ಸುಮಾರಿಗೆ ಅವರು ತಮ್ಮ ಸಂಗೀತ ವೃತ್ತಿಜೀವನಕ್ಕೆ ವಿರಾಮ ಘೋಷಿಸಿದರು. ಈಗ ಅವರು ಆದಿತ್ಯ ಬಿರ್ಲಾ ಸಮೂಹದ ವಿವಿಧ ಉದ್ಯಮಗಳಲ್ಲಿ ಮತ್ತು ವಿಶೇಷವಾಗಿ ಐಪಿಎಲ್‌ನ ಆರ್‌ಸಿಬಿ ತಂಡದ ಹೊಸ ಮಾಲೀಕತ್ವದ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಐಪಿಎಲ್ ಇತಿಹಾಸದಲ್ಲಿ ಮಾಲೀಕರ ಉಪಸ್ಥಿತಿಯು ತಂಡದ ‘ಬ್ರ್ಯಾಂಡ್ ವ್ಯಾಲ್ಯೂ’ ಅನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಎಸ್‌ಆರ್‌ಹೆಚ್‌ಗೆ ಕಾವ್ಯ ಮಾರನ್ ಹೇಗೋ, ಹಾಗೆಯೇ ಆರ್‌ಸಿಬಿ ಆಟಗಾರರನ್ನ ಪ್ರೇರೇಪಿಸಲು ಅನನ್ಯಾ ಬಿರ್ಲಾ ಅವರು ಕ್ರೀಡಾಂಗಣಕ್ಕೆ ಬರುತ್ತಾರೆಯಾ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-ananya-birla-vs-srhs-kavya-maran-trends-as-rcb-ownership-shift-sparks-buzz-know-details-448449.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo