ಯಶ್‌ ಜೊತೆ ಹಸಿಬಿಸಿ ದೃಶ್ಯದಲ್ಲಿ ಮತ್ತೊಬ್ಬ ನಟಿ: ಹೆಸರು ರಿವೀಲ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ | Yash Toxic Teaser Sparks Buzz Over Actress in Intimate Scene Name Revealed In Social Media

Entertainment

oi-Manohara M

ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್‌ (Toxic) ಸಿನಿಮಾ ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಟೀಸರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದು, ಯಶ್‌ ಅವರ ಸ್ಟೈಲಿಷ್‌ ಮತ್ತು ರಗಡ್‌ ಲುಕ್‌ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಆದರೆ ಟೀಸರ್‌ನಲ್ಲಿರುವ ಕೆಲ ಹಸಿಬಿಸಿ ದೃಶ್ಯಗಳು ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ಮತ್ತೊಬ್ಬ ನಟಿಯ ಹೆಸರು ಕೇಳಿಬರುತ್ತಿದೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಜೋರಾಗಿ ಆ ನಟಿ ಯಾರು ಎಂದೂ ಹೆಸರೂ ರಿವೀಲ್‌ ಮಾಡಿದ್ದಾರೆ.

ಮೊದಲ ಹಸಿಬಿಸಿ ದೃಶ್ಯಕ್ಕೆ ಟೀಕೆ

ಮೊದಲ ಟೀಸರ್ ಬಿಡುಗಡೆಯಾದಾಗಲೇ ಯಶ್‌ ಅವರೊಂದಿಗೆ ನಟಿಯೊಬ್ಬರು ಕಾಣಿಸಿಕೊಂಡ ಹಸಿಬಿಸಿ ದೃಶ್ಯಗಳು ಭಾರೀ ಚರ್ಚೆಗೆ ಕಾರಣವಾಗಿದ್ದವು. ಕೆಲವರು ಅದನ್ನು ಟೀಕಿಸಿದರೆ, ಕೆಲವರು ಚಿತ್ರದ ಕಥಾ ಹಂದರದ ಭಾಗವಾಗಿಯೇ ನೋಡಬೇಕೆಂದು ಅಭಿಪ್ರಾಯಪಟ್ಟಿದ್ದರು. ವಿಷಯವು ಕರ್ನಾಟಕ ಫಿಲ್ಮ್‌ ಚೇಂಬರ್‌ ಮಟ್ಟಕ್ಕೂ ಹೋಗಿತ್ತು. ಆದರೆ ಚೇಂಬರ್‌ ಚಿತ್ರದ ಪರ ನಿಂತು, ಕೇವಲ ಟೀಸರ್‌ ಆಧರಿಸಿ ಸಿನಿಮಾ ಬಗ್ಗೆ ತೀರ್ಪು ನೀಡಬಾರದು ಎಂದು ಸ್ಪಷ್ಟಪಡಿಸಿತ್ತು.

Toxic Teaser

ಈಗ ಬಿಡುಗಡೆಯಾದ ಹೊಸ ಟೀಸರ್‌ನಲ್ಲಿಯೂ ಯಶ್‌ ಮತ್ತೊಬ್ಬ ನಟಿಯೊಂದಿಗೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಆ ನಟಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಊಹಾಪೋಹಗಳು ಶುರುವಾಗಿದೆ. ಟಾಕ್ಸಿಕ್‌ ಸಿನಿಮಾದಲ್ಲಿ ನಟಿಯರಾದ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿರುವುದರಿಂದ, ಟೀಸರ್‌ನಲ್ಲಿರುವುದು ಇವರಲ್ಲಿ ಒಬ್ಬರು ಎನ್ನುತ್ತಿದ್ದಾರೆ.

ರುಕ್ಮಿಣಿ, ಕಿಯಾರ, ತಾರಾ ಎಂದು ಚರ್ಚೆ

ಅನೇಕರು ಆ ದೃಶ್ಯದಲ್ಲಿರುವುದು ಕನ್ನಡದ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್‌ ಎಂದು ಊಹಿಸಿದ್ದಾರೆ. ಕೆಲ ಅಭಿಮಾನಿಗಳು ಅದು ನಮ್ಮ ರುಕ್ಕು ಆಗದಿದ್ದರೆ ಅಷ್ಟೇ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ, ಕೆಲವರು ಇದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅಥವಾ ನಯನತಾರಾ, ನಯನತಾರ ಇರಬಹುದು ಎಂದು ಊಹಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹೀರೋಯಿನ್‌ಗಳ ಫಸ್ಟ್‌ಲುಕ್‌ ಪೋಸ್ಟರ್‌ಗಳನ್ನು ಹೋಲಿಸಿ ಅಭಿಮಾನಿಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ.

“ಟಾಕ್ಸಿಕ್” ಟೀಸರ್‌ ಸಿನಿಮಾದ ಮೇಲೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದ ಕಥೆ, ಪಾತ್ರಗಳ ನೈಜತೆ ಮತ್ತು ಹಿನ್ನೆಲೆ ದೃಶ್ಯಗಳ ಹಿನ್ನೆಲೆ ಏನು ಎಂಬುದನ್ನು ತಿಳಿಯಲು ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಸ್ಪಷ್ಟನೆ ಬರಬಹುದೇ ಎಂಬುದನ್ನು ಕಾದುನೋಡಬೇಕಾಗಿದೆ.

ಮೊದಲ ಟೀಸರ್‌ನಲ್ಲಿದ್ದ ನಟಿ ಯಾರು?

ಟಾಕ್ಸಿಕ್‌ನ ಮೊದಲ ಟೀಸರ್‌ನಲ್ಲಿ ಕಾಣಿಸಿಕೊಂಡ ಹಸಿಬಿಸಿ ದೃಶ್ಯಗಳೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯ ವಿಷಯವಾಗಿವೆ. ಯಶ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಸುಂದರಿ ಯಾರು ಎಂಬುದರ ಬಗ್ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ತಲೆಕೆಡಿಸಿಕೊಂಡಿದ್ದರು. ಮೊದಲಿಗೆ ಆ ನಟಿ ಹಾಲಿವುಡ್ ನಟಿ Natalia Barulich ಎಂದು ಕೆಲವರು ಊಹಿಸಿದ್ದರು. ಆದರೆ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರೇ ಈ ಗೊಂದಲಕ್ಕೆ ತೆರೆ ಎಳೆದರು.

ಆ ನಟಿಯ ಫೋಟೋವನ್ನು ಹಂಚಿಕೊಂಡು, ಆಕೆಯ ಹೆಸರು Beatriz Taufenbach (ಬೀಟ್ರಿಜ್ ಟೌಫೆನ್‌ಬಾಚ್) ಎಂದು ಸ್ಪಷ್ಟಪಡಿಸಿದರು. ಬೀಟ್ರಿಜ್ ಟೌಫೆನ್‌ಬಾಚ್ ಬ್ರೆಜಿಲ್ ಮೂಲದ ನಟಿ ಹಾಗೂ ಮಾಡೆಲ್ ಎಂದು ತಿಳಿದುಬಂದಿದೆ. ಆದರೆ ಆಕೆಯ ಸಿನಿ ಹಿನ್ನೆಲೆ ಅಥವಾ ಇತರ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಈ ಹೆಸರಿನ ಖಾತೆ ಕೂಡ ಪ್ರೈವೇಟ್ ಆಗಿರುವುದರಿಂದ, ಆಕೆಯ ವೈಯಕ್ತಿಕ ಹಾಗೂ ವೃತ್ತಿಜೀವನದ ವಿವರಗಳು ಹೆಚ್ಚಾಗಿ ಬಹಿರಂಗವಾಗಿಲ್ಲ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yash-toxic-teaser-sparks-buzz-over-actress-in-intimate-scene-name-revealed-in-social-media-444509.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo