ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು… Rashmika Mandanna | Rashmika Mandanna Name Is On Discussion After The Rakshit Shetty Post

Entertainment

oi-Malathesha M

ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? ರಕ್ಷಿತ್ ಶೆಟ್ಟಿ ಎನು ಮಾಡ್ತಾ ಇದ್ದಾರೆ? ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಯಾವಾಗ ರಿಲೀಸ್? ಹಿಂಗೆಲ್ಲಾ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿರುವ ಸಮಯದಲ್ಲೇ ಭಾರಿ ಭರ್ಜರಿ ಎಂಟ್ರಿ ಕೊಡುವ ಮುನ್ಸೂಚನೆ ಕೊಡುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಇದರ ಭಾಗವಾಗಿ ದಿಢೀರ್ ಅಂತಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನ ಮಾಡಿದ್ದಾರೆ. ಹೀಗೆ ರಕ್ಷಿತ್ ಶೆಟ್ಟಿ ಹಾಕಿದ ಒಂದೇ ಒಂದು ಪೋಸ್ಟ್ ಮಂಡ್ಯ ಟು ಇಂಡಿಯಾ ಫುಲ್ ಹವಾ ಎಬ್ಬಿಸಿದ್ದು, ದಿಢೀರ್ ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಿದರೆ ರಕ್ಷಿತ್ ಶೆಟ್ಟಿ ಅವರ ಪೋಸ್ಟ್‌ನಲ್ಲಿ ಅಂತಹದ್ದು ಏನಿದೆ?

ರಕ್ಷಿತ್ & ರಶ್ಮಿಕಾ ಮದುವೆ 8 ವರ್ಷಗಳ ಹಿಂದೆ ಮುರಿದು ಬಿದ್ದಿತ್ತು, ಅಂದಹಾಗೆ ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಯಲ್ಲಿ ಬಿದ್ದಿದ್ದರು. ಹಾಗೇ ಇಡೀ ಕನ್ನಡ ಸಿನಿಮಾ ರಂಗದಲ್ಲೇ ಕಿರಿಕ್ ಪಾರ್ಟಿ ಸಿನಿಮಾ ದೊಡ್ಡ ಹಿಟ್ ಕಂಡು, ಭರ್ಜರಿ ಕಲೆಕ್ಷನ್ ಕೂಡ ಮಾಡಿ ಅಬ್ಬರಿಸಿತ್ತು. ಈ ದೊಡ್ಡ ಗೆಲುವಿನ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮದುವೆಗೂ ತಯಾರಿ ನಡೆಸಿ, ಇಡೀ ಜಗತ್ತು ನೋಡುವಂತೆ ಎಂಗೇಜ್‌ಮೆಂಟ್ ಆಗಿದ್ದರು. ಇಷ್ಟೆಲ್ಲಾ ಸಂಭ್ರಮಗಳ ನಡುವೆಯೇ ಭಾರಿ ದೊಡ್ಡ ಆಘಾತ ಅಭಿಮಾನಿಗಳಿಗೆ ಎದುರಾಗಿ, ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಬಾಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು.

Rashmika Mandanna

ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್!

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಎಂಗೇಜ್‌ಮೆಂಟ್ ವಿಡಿಯೋ ಆಗಿನ ಕಾಲಕ್ಕೆ ಎಲ್ಲೆಲ್ಲೂ ವೈರಲ್ ಆಗಿತ್ತು. ಎಲ್ಲರೂ ಸಮಾರಂಭ ನೋಡಿ ಖುಷಿಯಲ್ಲಿ ಕುಣಿದಾಡಿದ್ದರು, ಅದರಲ್ಲೂ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಹೀಗಿದ್ದಾಗಲೆ ದಿಢೀರ್ ಒಂದು ಆಘಾತಕಾರಿ ಸುದ್ದಿ ಹೊರಬಿದ್ದು, ಮದುವೆಯೇ ಮುರಿದು ಬಿತ್ತು. ಆದರೆ ಈಗ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಕೆಲ ದಿನಗಳ ಹಿಂದೆ ಮದುವೆ ಆಗಿದ್ದು, ಇದೇ ಸಮಯದಲ್ಲಿ ರಕ್ಷಿತ್ ಶೆಟ್ಟಿ ಹಾಕಿರುವ ಪೋಸ್ಟ್ ಫುಲ್ ವೈರಲ್ ಆಗುತ್ತಿದೆ. ಹಾಗಾದರೆ, ಏನಿದೆ ರಕ್ಷಿತ್ ಶೆಟ್ಟಿ ಅವರ ಹೊಸ ಪೋಸ್ಟ್‌ನಲ್ಲಿ? ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಇಷ್ಟು ವೈರಲ್ ಆಗಲು ಕಾರಣ ಏನು? ಮುಂದೆ ಓದಿ.

ಅಂದಹಾಗೆ 2022 ಜೂನ್ ತಿಂಗಳಲ್ಲಿ ಬಿಡುಗಡೆಯಾಗಿ ಭಾರಿ ದೊಡ್ಡ ಸಕ್ಸಸ್ ಕಂಡಿದ್ದ ಕನ್ನಡದ ‘777 ಚಾರ್ಲಿ’ ಸಿನಿಮಾ ರಕ್ಷಿತ್ ಶೆಟ್ಟಿ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಇದೀಗ ಅದೇ ಚಾರ್ಲಿ ಚಿತ್ರದ ಒಂದು ಫೋಟೋ ಆಯ್ಕೆ ಮಾಡಿಕೊಂಡು, ತಮ್ಮ ಕವರ್ ಫೋಟೋ ಆಗಿ ಬದಲಾಯಿಸಿದ್ದಾರೆ ನಟ ರಕ್ಷಿತ್ ಶೆಟ್ಟಿ ಅವರು. ಫೇಸ್‌ಬುಕ್ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ತಮ್ಮ ಕವರ್ ಫೋಟೋಗೆ ಈ ಚಿತ್ರವನ್ನ ಹಾಕಿರುವ ರಕ್ಷಿತ್ ಶೆಟ್ಟಿ, ಚಾರ್ಲಿ ಪಾತ್ರದಾರಿ ನಾಯಿ ಜೊತೆಗೆ ಕೆಟಲ್ ಒಂದನ್ನ ಕಡ್ಡಿಗೆ ನೇತು ಹಾಕಿ ಕೆಳಗೆ ಬೆಂಕಿ ಹಾಕಿ & ನೀರು ಕಾಯಿಸುತ್ತಿರುವ ಸೀನ್ ಇದೆ. ಈ ಫೋಟೋ ನೋಡಿ ಇದೀಗ ಅಭಿಮಾನಿಗಳು ರೊಚ್ಚಿಗೆದ್ದು, ರಶ್ಮಿಕಾ ಮಂದಣ್ಣ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದಾರೆ. ಹಾಗೇ ರಕ್ಷಿತ್ ಶೆಟ್ಟಿ ಅವರಿಗೆ ಧೈರ್ಯ ಹೇಳುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲಾ ಬಿಟ್ಟು, ಹೊಸ ಜೀವನ ಶುರು ಮಾಡಿ ಅಂತಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-name-is-on-discussion-after-the-rakshit-shetty-post-446167.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo