
Sports
oi-Madhusudhan KR
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ, ಕೇವಲ ಒಬ್ಬ ಆಟಗಾರನಾಗಿ ಕಾಣಿಸುತ್ತಿಲ್ಲ. ಬದಲಿಗೆ ಕ್ರಿಕೆಟ್ ಲೋಕದ ಭವಿಷ್ಯದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಇವರ ಆಟದ ಶೈಲಿಯನ್ನು ನೋಡುತ್ತಿರುವ ದಿಗ್ಗಜರು, ಇವರಲ್ಲಿ ಅಂದು ಬ್ರಿಯಾನ್ ಲಾರಾ ಮತ್ತು ಸಚಿನ್ ತೆಂಡೂಲ್ಕರ್ ಅವರಲ್ಲಿದ್ದ ಕಿಚ್ಚನ್ನು ಕಾಣುತ್ತಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ವೈಭವ್ ಅವರ ಬ್ಯಾಕ್ ಲಿಫ್ಟ್ ಮತ್ತು ಚೆಂಡನ್ನು ಹೊಡೆಯುವ ವಿಧಾನವು ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರನ್ನು ನೆನಪಿಸುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಎಡಗೈ ಬ್ಯಾಟರ್ ಆಗಿರುವ ಇವರಲ್ಲಿರುವ ಲಯ ಅದ್ಭುತವಾಗಿದೆ ಅಂತಲೂ ಹೇಳುತ್ತಿದ್ದಾರೆ.

ವೈಭವ್ ಸೂರ್ಯವಂಶಿ 15ನೇ ವಯಸ್ಸಿಗೆ ಇಂತಹ ದೊಡ್ಡ ವೇದಿಕೆಯಲ್ಲಿ ಅಬ್ಬರಿಸುತ್ತಿರುವುದು ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳನ್ನು ನೆನಪಿಸುತ್ತಿದೆ. ಇವರ ಶಿಸ್ತು ಮತ್ತು ಏಕಾಗ್ರತೆಯನ್ನು ಕಂಡವರು ಇವರಲ್ಲಿ ರಾಹುಲ್ ದ್ರಾವಿಡ್ ಅವರಂತಹ ತಾಳ್ಮೆಯೂ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವೈಭವ್ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮದ ಕಥೆ
ಬಿಹಾರದ ಸಮಸ್ತಿಪುರ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಬಂದ ವೈಭವರ್, ತಂದೆಯ ಮಾರ್ಗದರ್ಶನದಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. 12ನೇ ವಯಸ್ಸಿನಲ್ಲಿಯೇ ಬಿಹಾರದ ಪರ ರಣಜಿ ಟ್ರೋಫಿ ಆಡುವ ಮೂಲಕ ಅತಿ ಕಿರಿಯ ವಯಸ್ಸಿನ ಪ್ರಥಮ ದರ್ಜೆ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜಸ್ಪ್ರೀತ್ ಬುಮ್ರಾ ಅವರಂತಹ ವಿಶ್ವದ ಅತ್ಯುತ್ತಮ ಬೌಲರ್ಗಳನ್ನು ಎದುರಿಸುವಾಗ ಇವರಲ್ಲಿ ಯಾವುದೇ ಆತಂಕವಿರಲಿಲ್ಲ. ಆ ಭಯವಿಲ್ಲದ ಮನಸ್ಥಿತಿಯೇ ಇಂದು ಇವರನ್ನು ಸ್ಟಾರ್ ಮಾಡಿದೆ ಎನ್ನುತ್ತಿದ್ದಾರೆ ಬಹುತೇಕ ಮಂದಿ.
ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಹೆಸರುವಾಸಿಯಾದ ರಾಜಸ್ಥಾನ್ ರಾಯಲ್ಸ್, ಹರಾಜಿನಲ್ಲಿ ವೈಭವ್ ಅವರನ್ನು ಖರೀದಿಸಿ ಎಲ್ಲರ ಹುಬ್ಬೇರಿಸಿತ್ತು. ಆದರೆ, ಹರಾಜಿನ ನಿರ್ಧಾರ ಸರಿಯಾಗಿತ್ತು ಎಂಬುದನ್ನು ವೈಭವ್ ತಮ್ಮ ಬ್ಯಾಟಿಂಗ್ ಮೂಲಕ ಸಾಬೀತುಪಡಿಸಿದ್ದಾರೆ. ಈಗ ಇಡೀ ಜಗತ್ತು ಇವರನ್ನು ಭವಿಷ್ಯದ ಸೂಪರ್ ಸ್ಟಾರ್ ಆಟಗಾರ ಎಂದು ಕರೆಯುತ್ತಿದೆ.
ಭುವನೇಶ್ವರ್ ಸ್ವಿಂಗ್ ದಾಳಿ ಎದುರಿಸಲು ಸಜ್ಜಾದ ವೈಭವ್
ಬ್ರಿಯಾನ್ ಲಾರಾ ಅವರ ಸ್ಟೈಲ್, ಸಚಿನ್ ಅವರ ಟೈಮಿಂಗ್ ಮತ್ತು ದ್ರಾವಿಡ್ ಅವರ ಶಿಸ್ತು ಈ ಮೂರು ವೈಭವ್ ಸೂರ್ಯವಂಶಿ ಅವರಲ್ಲಿದ್ದು, ಭಾರತೀಯ ಕ್ರಿಕೆಟ್ನ ಮುಂದಿನ ಉತ್ತಮ ಸ್ಟಾರ್ ಆಟಗಾರನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಂತಲೂ ಹೇಳುತ್ತಿದ್ದಾರೆ. ಇನ್ನೂ ಶುಕ್ರವಾರ ಆರ್ಸಿಬಿಯ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ದಾಳಿಯನ್ನು ಇವರು ಹೇಗೆ ಎದುರಿಸುತ್ತಾರೆ ಎಂಬುದು ಇವರ ವೃತ್ತಿಜೀವನದ ಮತ್ತೊಂದು ಪ್ರಮುಖ ಮೈಲಿಗಲ್ಲಾಗಲಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/vaibhav-suryavanshi-the-15-year-old-prodigy-drawing-comparisons-to-brian-lara-and-sachin-tendulkar-449945.html. xn--babytilbehr-pgb.com does not claim ownership of this content. All rights remain with the original publisher.
