
Sports
oi-Madhusudhan KR
T20 World Cup: 2026ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಧಿಪತ್ಯ ಸಾಧಿಸುವುದರ ಜೊತೆಗೆ, ವೈಯಕ್ತಿಕ ದಾಖಲೆಗಳ ಪುಟದಲ್ಲೂ ಹೊಸ ಇತಿಹಾಸ ಸೃಷ್ಟಿಯಾಗಿದೆ. ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್, ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಕೊಹ್ಲಿ ದಾಖಲೆ ಮುರಿದಿದ್ದಾರೆ.
ಈವರೆಗೆ ಭಾರತದ ಪರ ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯು ವಿರಾಟ್ ಕೊಹ್ಲಿ (2014ರಲ್ಲಿ 319 ರನ್) ಹೆಸರಿನಲ್ಲಿತ್ತು. ಸುಮಾರು ಒಂದು ದಶಕದಿಂದ ಅಜೇಯವಾಗಿದ್ದ ಈ ದಾಖಲೆಯನ್ನು ಸಂಜು ಸ್ಯಾಮ್ಸನ್ ಇದೀಗ ಅಳಿಸಿ ಹಾಕಿದ್ದಾರೆ.

ಕೊಹ್ಲಿ ದಾಖಲೆ ಮುರಿದ ಸಂಜು
ಸಂಜು ಸ್ಯಾಮ್ಸನ್ 2026ರ ವಿಶ್ವಕಪ್ನಲ್ಲಿ ಕೇವಲ 5 ಇನಿಂಗ್ಸ್ಗಳನ್ನು ಆಡಿ ಭರ್ಜರಿ 321 ರನ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ. ಈ ಟೂರ್ನಿಯಲ್ಲಿ ಅಬ್ಬರಿಸಿದ ಮತ್ತೊಬ್ಬ ಯುವ ಬ್ಯಾಟರ್ ಇಶಾನ್ ಕಿಶನ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇಶಾನ್ ಕಿಶನ್ 2026ರ ಆವೃತ್ತಿಯಲ್ಲಿ ಒಟ್ಟು 317 ರನ್ ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಭಾರತದ ಪರ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದವರು
* ಸಂಜು ಸ್ಯಾಮ್ಸನ್: 321 ರನ್ – (2026)
* ವಿರಾಟ್ ಕೊಹ್ಲಿ: 319 ರನ್ – (2014)
* ಇಶಾನ್ ಕಿಶನ್: 317 ರನ್ – (2026)
ಈ ಬಾರಿಯ ಟಿ20 ವಿಶ್ವಕಪ್ ಟೂರ್ಯನಿಯಲ್ಲಿ ಸಂಜು ಸ್ಯಾಮ್ಸನ್ ಅವರ ಈ ಅದ್ಭುತ ಲಯವು ಭಾರತ ತಂಡ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದೆ. ಕೇವಲ 5 ಇನಿಂಗ್ಸ್ಗಳಲ್ಲಿ ಇಷ್ಟೊಂದು ರನ್ ಗಳಿಸುವ ಮೂಲಕ ಅವರು ತಾವು ಟಿ20 ಕ್ರಿಕೆಟ್ನ ಹೊಸ ‘ರನ್ ಮಷೀನ್’ ಎಂಬುದನ್ನು ಸಾಬೀತುಪಡಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/sanju-samson-breaks-virat-kohli-s-record-for-most-runs-by-an-indian-in-a-single-t20-world-cup-446523.html. xn--babytilbehr-pgb.com does not claim ownership of this content. All rights remain with the original publisher.
