ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ | Narendra Modi Shares Kannada Devotional Song Sri Chamundeshwari from Sri Krishnadevaraya Movie

Karnataka

oi-Manohara M

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಮಾತೆ ಕುರಿತು ಮಾತನಾಡುತ್ತಾ ಕನ್ನಡದ ಪ್ರಸಿದ್ಧ ಭಕ್ತಿಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್‌ ಅಭಿನಯದ ಶ್ರೀಕೃಷ್ಣದೇವರಾಯ ಸಿನಿಮಾದ “ಶ್ರೀ ಚಾಮುಂಡೇಶ್ವರಿ” ಹಾಡನ್ನು ಹಂಚಿಕೊಂಡಿರುವ ಅವರು, ವಿಶ್ವಮಾತೆಯ ಮೇಲಿನ ಅಚಲ ನಂಬಿಕೆಯು ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಚೈತನ್ಯವನ್ನು ತುಂಬುತ್ತದೆ ಎಂದು ಬರೆದುಕೊಂಡಿದ್ದಾರೆ.

ವಿಶ್ವಮಾತೆಯ ಮೇಲಿನ ಅಚಲ ಭಕ್ತಿ

ಎಕ್ಸ್‌ ಖಾತೆಯಲ್ಲಿ ಈ ಹಾಡನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಭಾರತ ದೇಶದ ಆಧ್ಯಾತ್ಮಿಕ ಪರಂಪರೆ, ದೇವಿ ಆರಾಧನೆ ಮತ್ತು ಶಕ್ತಿ ಉಪಾಸನೆಯ ಮಹತ್ವವನ್ನು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ವಿಶ್ವಮಾತೆಯ ಮೇಲಿನ ಅಚಲ ಭಕ್ತಿ, ಭಕ್ತರಲ್ಲಿ ಹೊಸ ಚೇತನ ಮತ್ತು ಉತ್ಸಾಹವನ್ನು ಉಂಟುಮಾಡುತ್ತದೆ” ಎಂಬ ಸಂದೇಶದೊಂದಿಗೆ ಅವರು ಈ ಹಾಡನ್ನು ಹಂಚಿಕೊಂಡಿದ್ದು, ಕನ್ನಡಿಗರ ಗಮನ ಸೆಳೆದಿದೆ. ವಿಶೇಷವಾಗಿ ನಾಡದೇವತೆ ಎಂದೇ ಕರೆಯಲ್ಪಡುವ ಮೈಸೂರಿನ ಆರಾಧ್ಯ ದೇವತೆ ಚಾಮುಂಡೇಶ್ವರಿ ಕುರಿತು ಪ್ರಧಾನಿ ಮೋದಿ ಮಾಡಿದ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

Narendra Modi

ಡಾ.ರಾಜ್‌ಕುಮಾರ್ ಅಭಿನಯದ ಶ್ರೀಕೃಷ್ಣದೇವರಾಯ ಸಿನಿಮಾದ ಈ ಭಕ್ತಿಗೀತೆ ಕನ್ನಡದ ಅತ್ಯಂತ ಜನಪ್ರಿಯ ದೇವಿ ಹಾಡುಗಳಲ್ಲಿ ಒಂದಾಗಿದೆ. ಇದೀಗ ಪ್ರಧಾನಿ ಮೋದಿ ಅದನ್ನು ಹಂಚಿಕೊಂಡಿರುವುದು ಕನ್ನಡಿಗರಲ್ಲಿ ಸಂತೋಷ ಮೂಡಿಸಿದೆ. ವಿಶ್ವಮಾತೆ ಕುರಿತು ಪ್ರಧಾನಿ ಮೋದಿ ಹಂಚಿಕೊಂಡ ಈ ಪೋಸ್ಟ್ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕನ್ನಡಾಭಿಮಾನಿಗಳ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಕನ್ನಡಿಗರಿಗೆ ಮತ್ತು ಕನ್ನಡ ಚಿತ್ರರಂಗದ ಅಭಿಮಾನಿಗಳಿಗೆ ಅತ್ಯಂತ ಹೆಮ್ಮೆಯ ವಿಷಯ. ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಿಗರ ಆರಾಧ್ಯ ದೈವ ಡಾ. ರಾಜ್‌ಕುಮಾರ್ ಅವರು ಅಭಿನಯಿಸಿದ ಚಿತ್ರದ “ಶ್ರೀ ಚಾಮುಂಡೇಶ್ವರಿ” ಹಾಡನ್ನು ಹಂಚಿಕೊಳ್ಳುವ ಮೂಲಕ ಕನ್ನಡ ಸಂಸ್ಕೃತಿ ಮತ್ತು ಆಧ್ಯಾತ್ಮದ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ.

ಸಂಸದ ಯದುವೀರ್ ಒಡೆಯರ್ ಧನ್ಯವಾದ

ಜಗನ್ಮಾತೆ ಚಾಮುಂಡೇಶ್ವರಿಯ ಕುರಿತು ಕನ್ನಡದ ಭಕ್ತಿಗೀತೆಯನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಸಂಸದ ಯದುವೀರ್‌ ಒಡೆಯರ್‌ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಯದುವೀರ್ ಒಡೆಯರ್, “ಜಗನ್ಮಾತೆ ಚಾಮುಂಡೇಶ್ವರಿಯ ಮೇಲಿನ ಅಚಲವಾದ ಶ್ರದ್ಧೆಯು ಭಕ್ತರಲ್ಲಿ ಅಪಾರವಾದ ಜಾಗೃತಿ ಹಾಗೂ ಅದಮ್ಯವಾದ ಚೈತನ್ಯವನ್ನು ತುಂಬುತ್ತದೆ. ತಾಯಿ ಚಾಮುಂಡೇಶ್ವರಿಯ ಕುರಿತಾದ ಅಮೋಘವಾದ ಗೀತೆಯನ್ನು ಹಂಚಿಕೊಂಡ ಪ್ರಧಾನಮಂತ್ರಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದ್ದಾರೆ.

“ಈ ನೂತನ ಪರಾಭವ ನಾಮ ಸಂವತ್ಸರದಲ್ಲಿ ಸಮಸ್ತ ರಾಷ್ಟ್ರದ ಕ್ಷೇಮ ಹಾಗೂ ಅಭ್ಯುದಯಕ್ಕಾಗಿ ಆ ಜಗನ್ಮಾತೆಯಲ್ಲಿ ಪ್ರಾರ್ಥಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ. ಮೈಸೂರು ಆರಾಧ್ಯ ದೇವತೆ ಚಾಮುಂಡೇಶ್ವರಿ ಕುರಿತಾಗಿ ಪ್ರಧಾನಿ ಮೋದಿ ಹಂಚಿಕೊಂಡಿರುವ ಈ ಭಕ್ತಿಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿದ್ದು, ಹಲವಾರು ಗಣ್ಯರು ಮತ್ತು ಭಕ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಡಾ.ರಾಜ್‌ಕುಮಾರ್‌ ಅಭಿನಯದ ಶ್ರೀಕೃಷ್ಣದೇವರಾಯ ಸಿನಿಮಾದ ಶ್ರೀಚಾಮುಂಡೇಶ್ವರಿ ಹಾಡನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಚೈತನ್ಯವನ್ನು ತುಂಬುತ್ತದೆ ಎಂದು ಹೇಳಿಕೊಂಡಿರುವುದು ಕನ್ನಡಿಗರ ಗಮನಸೆಳೆದಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/narendra-modi-shares-kannada-devotional-song-sri-chamundeshwari-from-sri-krishnadevaraya-movie-447885.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo