ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ಗೆಲುವು: ಎರಡು ಬೌಂಡರಿಗಳ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಬೂಮ್ರಾ ಬೇಸರ | T20 World Cup 2026: Sanju Samson’s 97* Powers India, Jasprit Bumrah Named Impact Player of the Match

Sports

oi-Madhusudhan KR

T20 World Cup 2026: ಭಾರತದ ಟಿ20 ವಿಶ್ವಕಪ್ 2026ನಲ್ಲಿ ಅತ್ಯಂತ ಪ್ರಮುಖ ಗಮನ ಸೆಳೆದಿದ್ದು, ಪ್ರತಿ ಪಂದ್ಯದಲ್ಲೂ ಭಾರತದ ತಂಡದಲ್ಲಿ ಒಬ್ಬೊಬ್ಬ ಆಟಗಾರರು ಜವಾಬ್ದಾರಿಯುತವಾಗಿ ಆಕ್ರಮಣಕಾರಿ ಆಟ ಆಡಿದ್ದು. ಯುಎಸ್‌ಎ ವಿರುದ್ಧದ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮಿಂಚಿದ್ದರೆ, ಕೊನೆಯ ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಹೀರೋ ಆದರು.

ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಅಜಯೇ 97 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರ ಈ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾವು ವೆಸ್ಟ್ ಇಂಡೀಸ್ ನೀಡಿದ್ದ 196 ರನ್‌ಗಳ ಸವಾಲಿನ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಆದರೆ, ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ವೆಸ್ಟ್ ಇಂಡೀಸ್ ತಂಡದ ರನ್‌ಗಳ ವೇಗವನ್ನು ನಿಯಂತ್ರಿಸಿದ ಜಸ್ಪ್ರೀತ್ ಬುಮ್ರಾ ಅವರಿಗೆ “ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಮ್ಯಾಚ್” ಪ್ರಶಸ್ತಿ ಲಭಿಸಿತು.

T20 World Cup 2026 Sanju Samson s 97 Powers India Jasprit Bumrah Named Impact Player of the Match

ವೆಸ್ಟ್‌ ಇಂಡೀಸ್‌ ರನ್‌ಗಳ ವೇಗಕ್ಕೆ ಕಡಿವಾಣ

ಬುಮ್ರಾ ನಾಲ್ಕು ಓವರ್‌ ಬೌಲಿಂಗ್‌ ಮಾಡಿ ಬಿಟ್ಟುಕೊಟ್ಟು 2 ವಿಕೆಟ್‌ ಕಬಳಿಸಿದರು. ಈ ಸಂಖ್ಯೆಗಳು ಅವರ ಸಂಪೂರ್ಣ ಪ್ರಭಾವವನ್ನು ತೋರಿಸದಿದ್ದರೂ, ಅವರು ಪಡೆದ ವಿಕೆಟ್‌ಗಳ ಸಮಯವೇ ಪಂದ್ಯದಲ್ಲಿ ನಿರ್ಣಾಯಕವಾಗಿತ್ತು. ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್‌ ವೇಗ ಹೆಚ್ಚಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬುಮ್ರಾ ಸತತವಾಗಿ ಎರಡು ಬಿಗ್‌ ವಿಕೆಟ್‌ಗಳನ್ನು ಪಡೆದರು. ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಹಾಗೂ ರೋಸ್ಟನ್ ಚೇಸ್ ಅವರನ್ನು ಔಟ್ ಮಾಡುವ ಮೂಲಕ ಕ್ಯಾರಿಬಿಯನ್ ತಂಡದ ರನ್‌ಗಳ ವೇಗಕ್ಕೆ ಕಡಿವಾಣ ಹಾಕಿದರು.

ಒತ್ತಡದ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ತನ್ನ ಸಾಮರ್ಥ್ಯವನ್ನು ಬುಮ್ರಾ ಮತ್ತೊಮ್ಮೆ ಸಾಬೀತುಪಡಿಸಿದರು. ಆ ಎರಡು ವಿಕೆಟ್‌ಗಳು ರನ್‌ಗಳ ವೇಗವನ್ನು ತಡೆಯಲು ಮಾತ್ರವಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ ಮೇಲೆ ಮಾರಕ ಬೌಲಿಂಗ್ ದಾಳಿ ಮೂಲಕ ಒತ್ತಡ ಹೇರಿದರು. ಇದರಿಂದ ಡೆತ್ ಓವರ್‌ಗಳಲ್ಲಿ ಭಾರತ ಪಂದ್ಯವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಯಿತು.

ಭಾರತದ ಫೀಲ್ಡಿಂಗ್ ಕೋಚ್ ಹೇಳಿದ್ದೇನು?

ಇನ್ನು ಪದಕ ನೀಡುವ ವೇಳೆ, ಭಾರತದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ತಂಡದ ಒಟ್ಟಾರೆ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು. ಜೊತೆಗೆ ನಿರ್ಣಾಯಕ ಕ್ಷಣಗಳಲ್ಲಿ ಶಾಂತತೆ ಮತ್ತು ಸಮಾಧಾನದಿಂದ ಬೌಲಿಂಗ್ ಮಾಡಿದ ಬುಮ್ರಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ತಂಡದ ಶಕ್ತಿ ಪ್ರತಿಯೊಬ್ಬ ಆಟಗಾರನಲ್ಲಿ ಇದೆ, ಮತ್ತು ಪ್ರತಿಯೊಬ್ಬ ಆಟಗಾರನ ಶಕ್ತಿ ತಂಡದಲ್ಲಿದೆ. ಇಂದು ನಾವು ಪರಸ್ಪರ ಕಾಳಜಿ ಮತ್ತು ನಂಬಿಕೆಯಿಂದ ಅದನ್ನು ಮೈದಾನದಲ್ಲಿ ತೋರಿಸಿದ್ದೇವೆ. ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರನಿಗೆ ಇಂದಿನ ಇಂಪ್ಯಾಕ್ಟ್ ಪ್ಲೇಯರ್ ಪ್ರಶಸ್ತಿ ನೀಡಲಾಗುತ್ತಿದೆ. ಅವರು ಮತ್ತಾರೂ ಅಲ್ಲ, ಜಸ್ಪ್ರೀತ್ ಬುಮ್ರಾ,” ಎಂದು ಹೇಳಿದರು.

ಅಭಿಮಾನಿಗಳ ಮನಸು ಗೆದ್ದ ಬೂಮ್ರಾ

ಪಂದ್ಯ ಮುಗಿದ ಬಳಿಕ ಸಂಜು ಸ್ಯಾಮ್ಸನ್ ಅವರ ಅದ್ಭುತ ಇನ್ನಿಂಗ್ಸ್‌ಗೆ ಜಸ್ಪ್ರೀತ್ ಬುಮ್ರಾ ಮೆಚ್ಚುಗೆ ವ್ಯಕ್ತಪಡಿಸಿದರು. ಪಂದ್ಯದಲ್ಲಿ ನಿರ್ಣಾಯಕ ತಿರುವು ಯಾವ ಕ್ಷಣದಲ್ಲಿ ಬಂತು ಎಂಬ ಪ್ರಶ್ನೆಗೆ ಉತ್ತರಿಸಿದ ಬುಮ್ರಾ, ಕೊನೆಯ ಹಂತದಲ್ಲಿ ದುಬೆ ಬಾರಿಸಿದ ಎರಡು ಬೌಂಡರಿಗಳು ಅತ್ಯಂತ ಮಹತ್ವದ್ದಾಗಿದ್ದವು. ಅವರ ಹೊಡೆದ ಶಾಟ್‌ಗಳು ಬಹುಶಃ ಅಂಕಿಅಂಶಗಳಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳದೇ ಇರಬಹುದು, ಆದರೆ, ಪಂದ್ಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡವರಿಗೆ ಅವುಗಳ ಮೌಲ್ಯ ಸ್ಪಷ್ಟವಾಗುತ್ತದೆ ಎಂದು ಹೇಳಿ ಗಮನ ಸೆಳದರು. ಒಟ್ಟಿನಲ್ಲಿ ಹೇಳುವುದಾದರೆ, ಕೊನೆಯಲ್ಲಿ ಒಂದು ಸಿಕ್ಸ್‌ನಿಂದ ತಂಡ ಗೆದ್ದರೆ ಅವರ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದು ಹೇಳುವ ಮೂಲಕ ಬೂಮ್ರಾ ಅಭಿಮಾನಿಗಳ ಮನಸ್ಸು ಗೆದ್ದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/t20-world-cup-2026-sanju-samson-s-97-powers-india-jasprit-bumrah-named-impact-player-of-the-match-445721.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo