ಶರಣಾಗತಿ ಪ್ರಸ್ತಾವ ತಿರಸ್ಕರಿಸಿದ ಇರಾನ್: ಅಮೆರಿಕದಿಂದ ‘ಭೀಕರ ದಾಳಿ’ಯ ಎಚ್ಚರಿಕೆ: ಇಂದಿನ ಪ್ರಮುಖಾಂಶಗಳು | Middle East War Update: Trump Warns Iran of ‘Terrible Attack’ as Peace Talks Remain Stalled

International

oi-Shankrappa Parangi

War Update Today: ಮಧ್ಯಪ್ರಾಚ್ಯದಲ್ಲಿ ಯುದ್ಧ ನಿಲ್ಲುವ ಸ್ಥಿತಿ ಇನ್ನೂವರೆಗೂ ಕಂಡು ಬರುತ್ತಿಲ್ಲ. ಇಂದು (ಮಾರ್ಚ್ 7) ಎಂಟನೇ ದಿನವೂ ಯುದ್ಧ ಸಂಘರ್ಷ ಮುಂದುವರಿದಿದೆ. ಯುಎಸ್‌ ಶರಣಾಗತಿ ಆಗ್ರಹವನ್ನು ಇರಾನ್ ತಿರಸ್ಕರಿಸಿದೆ. ಪರಸ್ಪರ ದೇಶಗಳ ಮಧ್ಯೆ ಮತ್ತೆ ದಾಳಿ ನಡೆಯುವ ಲಕ್ಷಣಗಳು ಕಾಣುತ್ತಿವೆ. ಇನ್ನೂ ಜಾಗತಿಕವಾಗಿ ತೈಲ ಪೂರೈಕೆ, ಆಮದಿನ ಮೇಲೆ ಒತ್ತಡ ಹೆಚ್ಚಾಗಿದೆ. ರಷ್ಯಾದಿಂದ ಭಾರತವು ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣದ ಬಗ್ಗೆ ಆ ದೇಶದ ಇಂಧನ ಸಚಿವರೇ ಮಾಹಿತಿ ನೀಡಿದ್ದಾರೆ. ಇರಾನ್ ತಾನೇ ತಾನಾಗಿ ಯಾವ ನಗರಗಳ ಮೇಲೂ ದಾಳಿ ಮಾಡುವುದಿಲ್ಲ ಎಂದು ತಿಳಿಸಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಧಾನದ ಮುನ್ಸೂಚನೆ ಕೊಟ್ಟಿದೆ. ಆದರೆ ಯುಎಸ್ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು, ‘ಮಧ್ಯಪ್ರಚಾದ್ಯದ ಸೋಲೊಪ್ಪಿಕೊಂಡು ರಾಷ್ಟ್ರ’ ಇರಾನ್ ಎಂದು ಲೇವಡಿ ಮಾಡಿದ್ದಾರೆ. ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್‌ ಯುದ್ಧದ ಇಂದಿನ ಪ್ರಮುಖ ಬೆಳವಣಿಗೆಗಳ ಪ್ರಮುಖಾಂಶಗಳು ಇಲ್ಲಿವೆ.

* ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದಿಗೆ ಬೇರೆ ದೇಶಗಳ (ಅಮೆರಿಕ) ಒಪ್ಪಿಗೆ ಬೇಕಾಯಿತು ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಈ ಖರೀದಿಗೆ ಪ್ರಮುಖ ಕಾರಣ ಏನೆಂಬುದನ್ನು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಬಹಿರಂಗಪಡಿಸಿದ್ದಾರೆ. ಇರಾನ್‌ನೊಂದಿಗಿನ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ಮಾರುಕಟ್ಟೆಯ ಮೇಲೆ ಒತ್ತಡದ ಸನ್ನಿವೇಶ ಸೃಷ್ಟಿಯಾಗಿದೆ. ತೈಲ ಮಾರುಕಟ್ಟೆಯ ಮೇಲಿನ ಈ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಷ್ಯಾದ ತೈಲ ಖರೀದಿಸುವಂತೆ ಭಾರತಕ್ಕೆ ಮನವಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

Middle East War Update

* ಭಾರತವು ರಷ್ಯಾದಿಂದ ಸಂಗ್ರಹಿತ ತೈಲವನ್ನು ಖರೀದಿಸಿ ತನ್ನಲ್ಲಿ ಸಂಸ್ಕರಣಗೊಳಿಸಿ ಬಳಸಿದರೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಇರುವ ಒತ್ತಡ ಕಡಿಮೆ ಆಗಲಿದೆ. ಬೇರೆ ಇತರ ದೇಶಗಳ ಸಂಸ್ಕರಣಗಳ ಮೇಲಿನ ಒತ್ತಡವೂ ತಗ್ಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

* ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಆಸಿಫ್ ರಾಜಾ ಮರ್ಚೆಂಟ್ ದೋಷಿ ಎಂದು ಬ್ರೂಕ್ಲಿನ್ ಫೆಡರಲ್ ಕೋರ್ಟ್ ತೀರ್ಪು ನೀಡಿದೆ. 2020ರಲ್ಲಿ ಹತ್ಯೆಯಾದ ಇರಾನ್ ಕಮಾಂಡರ್ ಖಾಸೆಮ್ ಸೊಲೈಮಾನಿ ಸಾವಿಗೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ನಡೆದಿತ್ತು ಎಂಬುದು ಗೊತ್ತಾಗಿದೆ. ಇದು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಾಗುವಂತೆ ಮಾಡಿದೆ. ಜಾಗತಿಕವಾಗಿ ಈ ವಿಚಾರ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.

* ಮಧ್ಯಪ್ರಾಚ್ಯ ಯುದ್ಧ ಸಂದರ್ಭದಲ್ಲಿ ಕ್ಷಿಪಣಿ ದಾಳಿಯಿಂದ ಅರಬ್ ರಾಷ್ಟ್ರಗಳಿಗೆ ಆದ ಹಾನಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಕ್ಷಮೆಯಾಚಿಸಿದ್ದಾರೆ. ಅಮೆರಿಕ-ಇಸ್ರೇಲ್ ದಾಳಿಯ ನಂತರ ನಡೆದ ಪ್ರತೀಕಾರದ ಕ್ರಮವಾಗಿ ದುಬೈ, ಅಬುಧಾಬಿ ಸೇರಿದಂತೆ ಗಲ್ಫ್ ದೇಶಗಳಿಗೆ ಹಾನಿ ಉಂಟಾಗಿತ್ತು. ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ.

* ಇರಾನ್ ನೆರೆಹೊರೆಯ ರಾಷ್ಟ್ರಗಳ ಮೇಲೆ ದಾಳಿ ನಡೆಸದೇ ಇರಲು ತೀರ್ಮಾನಿಸಿದೆ. ಒಂದು ವೇಳೆ ಸುಮ್ಮನಿರುವ ಇರಾನ್‌ ಮೇಲೆ ದಾಳಿ ಮಾಡಿದಲ್ಲಿ ಪ್ರತಿದಾಳಿ ಮೂಲಕ ತಿರುಗೇಟು ನೀಡುವುದಾಗಿ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಎಚ್ಚರಿಸಿದೆ. ಜೊತೆಗೆ ಸೌದಿ ಅರೇಬಿಯಾ ತನ್ನ ತೈಲ ಕ್ಷೇತ್ರಗಳ ರಕ್ಷಣೆಗೆ ಬದ್ಧ ಎಂದು ಹೇಳಿದ್ದಾರೆ.

* ನೆರೆ ಹೊರೆಯ ರಾಷ್ಟ್ರಗಳ ಮೇಲೆ ಇನ್ನು ಮುಂದೆ ಯಾವುದೇ ಕ್ಷಿಪಣಿ ದಾಳಿ ನಡೆಸುವುದಿಲ್ಲ ಎಂದು ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿ ನಿರ್ಧರಿಸಿದೆ. ಆದರೆ, ಆ ದೇಶಗಳ ನೆಲದಿಂದ ಇರಾನ್ ಮೇಲೆ ದಾಳಿ ನಡೆದರೆ ಮಾತ್ರ ತಿರುಗೇಟು ನೀಡುವುದಾಗಿ ಪೆಜೆಶ್ಕಿಯಾನ್ ಎಚ್ಚರಿಸಿದ್ದಾರೆ.

* ಪರಿಮಾಣು ಎಚ್ಚರಿಕೆ ಬಳಿಕ ಸಂಧಾನ ಮಾತುಕತೆ ನಡೆಯಲಿದೆ ಎನ್ನಲಾಗಿತ್ತು. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಅನ್ನು ‘ಮಧ್ಯಪ್ರಾಚ್ಯದ ಸೋಲಪ್ಪಿದ ರಾಷ್ಟ್ರ’ ಎಂದು ಲೇವಡಿ ಮಾಡಿದ್ದಾರೆ. ಜೊತೆಗೆ ‘ಭೀಕರ ದಾಳಿ’ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಮತ್ತೆ ಇರಾನ್‌ ಅನ್ನು ಕೆರಳಿಸುವ ಪ್ರಯತ್ನ ಇದಾಗಿದೆ. ಸದ್ಯ ಎರಡು ದೇಶದವರು ಸಂಧಾನಕ್ಕೆ ಮುಂದಾಗುವ ಯತ್ನ ನಡೆಸಿಲ್ಲ ಎಂದು ವರದಿ ಆಗಿದೆ.

* ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಇರಾನ್ ನಮ್ಮ ಮುಂದೆ ಶರಣಾಗಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಒಪ್ಪ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಶರಣಾಗತಿ ನಿರಾಕರಿಸಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲೇ ದುಬೈನಲ್ಲಿ ಸ್ಫೋಟದ ಶಬ್ದಗಳು ಕೇಳಿ ಬಂದಿವೆ. ಅಲ್ಲಿನ ಜನರು ಭಯ ಬೀತರಾಗಿದ್ದಾರೆ. ಅಮೆರಿಕ ದೇಶ ಇರಾನ್‌ ಮೇಲೆ ‘ಅತ್ಯಂತ ಭೀಕರ ದಾಳಿ’ ನಡೆಸುವ ಯತ್ನದಲ್ಲಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/middle-east-war-update-trump-warns-iran-of-terrible-attack-as-peace-talks-remain-stalled-446309.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo