
International
-Malathesha M
ಪಾಕಿಸ್ತಾನದ ಆರ್ಥಿಕ ಅರಾಜಕತೆ ಮತ್ತೆ ಮುಂದುವರಿದಿದ್ದು, ಅಲ್ಲಿನ ಪರಿಸ್ಥಿತಿ ಈಗ ಹೇಗೆ ಆಗಿದೆ ಅಂದರೆ ತುತ್ತು ಅನ್ನಕ್ಕೂ ಜನ ಪರದಾಡುತ್ತಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಮಾತ್ರ ಉಗ್ರರನ್ನು ಪೋಷಣೆ ಮಾಡುತ್ತಾ ಜಾಲಿ ಜಾಲಿಯಾಗಿ ಇದೆ. ಅಲ್ಲದೆ ಸೇನೆಗೆ ಕೂಡ ಸಾವಿರಾರು ಕೋಟಿ ರೂಪಾಯಿ ಹಣ ಸುರಿದು ಪಾಕಿಸ್ತಾನದ ರಾಜಕಾರಣಿಗಳು ಇಡೀ ದೇಶವನ್ನೇ ಬೀದಿಗೆ ತಂದಿದ್ದಾರೆ. ಮತ್ತೊಂದೆಡೆ ಜಗತ್ತಿನ ಬಹುತೇಕ ಎಲ್ಲಾ ಶ್ರೀಮಂತ ದೇಶಗಳ ಎದುರು ಭಿಕ್ಷೆ ಬೇಡಿ ಬಂದಿರುವ ಪಾಕಿಸ್ತಾನ ಸರ್ಕಾರ ಇದೀಗ ಅಮೆರಿಕ ಬಳಿ ಸಾಲಕ್ಕಾಗಿ ಕಾಲು ಹಿಡಿಯಲು ಶಾಂತಿ ಮಂಡಳಿ ಸೇರಿದೆ. ಗಾಜಾ ಶಾಂತಿ ಮಂಡಳಿಗೆ ಸೇರಿ ಟ್ರಂಪ್ ಅವರ ಜೊತೆಗೆ ಹತ್ತಿರವಾಗಲು ಇದೀಗ ಹೊಸ ಪ್ಲಾನ್ ಮಾಡಿಕೊಂಡಿದೆ.
ಭಾರತವನ್ನ ಎದುರು ಹಾಕಿಕೊಂಡು, ತನ್ನ ಪ್ರಜೆಗಳನ್ನು ಹಸಿವು & ಬಡತನದ ಬೇಗೆಯಲ್ಲಿ ಸಾಯುವಂತೆ ಮಾಡುತ್ತಿರುವ ಪಾಕಿಸ್ತಾನದ ರಾಜಕಾರಣಿಗಳಿಗೆ ಬುದ್ಧಿ ಬರಲ್ಲ. ಯಾಕಂದ್ರೆ ಅಲ್ಲಿನ ಭ್ರಷ್ಟ ವ್ಯವಸ್ಥೆಯ ಪರಿಣಾಮ ಇಡೀ ದೇಶ ಪರೋಕ್ಷವಾಗಿ ಉಗ್ರರ ಹಿಡಿತಕ್ಕೆ ಸಿಲುಕಿ ಒದ್ದಾಡುತ್ತಿದೆ. ಹಾಗೇ ಅಲ್ಲಿ ಇರುವ ರಾಜಕೀಯ ನಾಯಕರು ಕೂಡ ವ್ಯವಸ್ಥೆ ಮತ್ತಷ್ಟು ಹಾಳಾಗುವ ರೀತಿ ನಿರ್ಧಾರ ತೆಗೆದುಳ್ಳುತ್ತಿದ್ದಾರೆ. ಈ ಎಲ್ಲಾ ಪರಿಣಾಮಗಳಿಂದ ಪಾಕಿಸ್ತಾನ ಆರ್ಥಿಕತೆ ಇನ್ನಷ್ಟು ಹಾಳಾಗಿ ಬೀದಿಗೆ ಬೀಳುತ್ತಿದೆ. ಮತ್ತೊಂದು ಕಡೆ ಇದೇ ಸಮಯದಲ್ಲೇ, ಟ್ರಂಪ್ ಅವರು ಹುಟ್ಟು ಹಾಕಿರುವ ಶಾಂತಿ ಮಂಡಳಿಗೆ ಸೇರಲು ಇದೀಗ ದೀಢಿರ್ ಮಹತ್ವದ ನಿರ್ಧಾರ ಕೈಗೊಂಡಿದೆ ಪಾಕಿಸ್ತಾನ.

ಸಾಲ ಪಡೆಯಲು ಪಾಕಿಸ್ತಾನದ ನಾಟಕ?
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾ ಶಾಂತಿ ಮಂಡಳಿ ಸ್ಥಾಪನೆ ಮಾಡಿದ್ದು, ಈ ಮಂಡಳಿ ಮೂಲಕ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಶಾಂತಿ ಮಂಡಳಿ ಸಾವಿರಾರು ಕೋಟಿ ರೂಪಾಯಿ ಯೋಜನೆ ಘೋಷಣೆ ಮಾಡಿದ್ದು, ಟ್ರಂಪ್ ಅವರ ನೇತೃತ್ವದ ಮಂಡಳಿಗೆ ಜಗತ್ತಿನ ದೊಡ್ಡ ದೊಡ್ಡ ದೇಶಗಳು ಸೇರಿಕೊಂಡಿವೆ. ಅಲ್ಲದೆ ಒಟ್ಟು 20 ಅಂಶಗಳ ಯೋಜನೆ ರೂಪಿಸಿ, ಯುದ್ಧ ನಿಲ್ಲಿಸಿ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕ ಮುಂದಾಗಿದೆ. ಜಗತ್ತಿನ ಘಟಾನುಘಟಿ ದೇಶಗಳು ಕೂಡ ಬೆಂಬಲ ಕೊಡುತ್ತಿದ್ದು, ಈಗ ಗಾಜಾದಲ್ಲಿ ಹಮಾಸ್ ಸಂಪೂರ್ಣ ನಿಶ್ಯಸ್ತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಇಂತಹ ಸಮಯದಲ್ಲೇ ಪಾಕಿಸ್ತಾನ ಕೂಡ ಶಾಂತಿ ಮಂಡಳಿಗೆ ಸೇರಿದ್ದು, ಅಮೆರಿಕದ ಕಡೆಯಿಂದ ಸಾಲ ಪಡೆಯಲು ಸ್ಕೆಚ್ ಹಾಕಿದೆಯಾ? ಎಂಬ ಪ್ರಶ್ನೆ ಮೂಡಿದೆ.
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Bengaluru School: ಬೆಂಗಳೂರಿನಲ್ಲಿ ವಿದ್ಯಾರ್ಥಿಯಿಂದ ತಪ್ಪಿದ ಶಾಲಾ ಮಕ್ಕಳ ಕಿಡ್ಯಾಪ್, ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ
-

ಆಕಾಶದಲ್ಲಿ ಸೂರ್ಯ ಇಂದು ದಿಢೀರ್ ನಾಪತ್ತೆ, ಯಾವ ಯಾವ ದೇಶಗಳಲ್ಲಿ ತಿಳಿಯಿರಿ… Solar Eclipse
-

ವಿದ್ಯಾವಂತರ ಬೇಜವಾಬ್ದಾರಿಗೆ ಸಮಾಜವೇಕೆ ಹಣ ನೀಡಬೇಕು? ಆರೋಗ್ಯ ವಿಮೆ ಮಾಡಿಸಿ: ರಂಗಸ್ವಾಮಿ ಮೂಕನಹಳ್ಳಿ ಬರಹ
-

ಚಿನ್ನ-ಬೆಳ್ಳಿ ದರ ಮತ್ತೆ ಕುಸಿತ: ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯಾಗುವುದೇ? ಖರೀದಿ, ಹೂಡಿಕೆಗೆ ಮುನ್ನ ಗಮನಿಸಲೇಬೇಕಾದ ಅಂಶಗಳಿವು
-

Priyank Kharge biography: ಚಿತ್ತಾಪುರದಿಂದ ಸಚಿವ ಸಂಪುಟದವರೆಗೆ: ಪ್ರಿಯಾಂಕ್ ಖರ್ಗೆ ರಾಜಕೀಯ ಪಯಣ, ಕುಟುಂಬ, ಒಟ್ಟು ಆಸ್ತಿ ವಿವರ
Disclaimer: This content was automatically imported from a third-party source via RSS feed. The original source is: https://kannada.oneindia.com/news/international/pakistan-economy-still-struggling-to-recover-and-this-is-what-the-pakistan-government-doing-with-us-011-444341.html. xn--babytilbehr-pgb.com does not claim ownership of this content. All rights remain with the original publisher.
