ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! | Stock Market Crash Today March 23: Sensex Drops 1,800 Points, Investors Lose Rs 10 Lakh Crore

India

oi-Shankrappa Parangi

Stock Market Crash Today: ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳ ಪ್ರಭಾವವು ಇಂದು ಸೋಮವಾರ (ಮಾ.23) ಷೇರು ಪೇಟೆಯ ಮೇಲೆ ಉಂಟಾಗಿದೆ. ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಉದ್ವಿಗ್ನತೆ ಕಾರಣದಿಂದಾಗಿ ಷೇರು ಮಾರುಕಟ್ಟೆಯಲ್ಲಿ ನೆಗಟಿವ್ ಟ್ರೆಂಡ್ ಮುಂದುವರಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ತೀವ್ರವಾಗಿ ಕುಸಿತ ಕಂಡಿವೆ.

ಎಂದಿನಂತೆ 9.30ಕ್ಕೆ ಷೇರು ಪೇಟೆ ತೆರೆಯಿತು. ಬೆಳಗ್ಗೆ 10:29 ಗಂಟೆ ಹೊತ್ತಿಗೆ ಎಸ್ ಆಂಡ್ ಪಿ ಬಿಎಸ್ಐ ಸೆನ್ಸೆಕ್ಸ್ 1,822.25 ಪಾಯಿಂಟ್‌ಳ ಕುಸಿತದೊಂದಿಗೆ 72,710.71ಕ್ಕೆ ತಲುಪಿತು. ಎನ್ಎಸ್ಐ ನಿಫ್ಟಿ 50 533.30 ಪಾಯಿಂಟ್‌ಗಳ ಕುಸಿತದೊಂದಿಗೆ 22,581.20 ಕ್ಕೆ ಮುಟ್ಟಿದೆ. ಎರಡೂ ಸೂಚ್ಯಂಕಗಳು ಶೇಕಡಾ 2.4ಕ್ಕಿಂತ ಹೆಚ್ಚು ಇಳಿಕೆ ಆಗಿದೆ. ಇದು ಮಾರುಕಟ್ಟೆಯಲ್ಲಿ ಇಂದಿನ ವ್ಯಾಪಕ ಮಾರಾಟದ ಪ್ರತಿಬಿಂಬವಾಗಿದೆ.

Stock Market Crash Today

ಷೇರುಗಳ ಮಾರಾಟದ ಪರಿಣಾಮವಾಗಿ, ಬಿಎಸ್‌ಇ ಮಾರುಕಟ್ಟೆ ಬಂಡವಾಳೀಕರಣವು ಗಣನೀಯವಾಗಿ ಕುಸಿದಿದೆ, ಹೂಡಿಕೆದಾರರು ಒಟ್ಟು ಸುಮಾರು 10 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚು ನಷ್ಟ ಅನುಭವಿಸಿದ್ದಾರೆ ಎಂದು ವರದಿ ಆಗಿದೆ.

ಇಂದು ಪ್ರಮುಖ ಷೇರುಗಳ ಪೈಕಿ HDFC ಬ್ಯಾಂಕ್ ಶೇ.2.43, ICICI ಬ್ಯಾಂಕ್ ಶೇ. 1.37ರಷ್ಟು ಮತ್ತು ಎಕ್ಸಿಸ್‌ ಬ್ಯಾಂಕ್ ಶೇ.1.80ರಷ್ಟು ಕುಸಿತ ಕಂಡಿವೆ. ಐಟಿ ಷೇರುಗಳು ಕುಸಿತದ ಒತ್ತಡ ಎದುರಿಸುತ್ತಿವೆ. ಇನ್ಫೋಸಿಸ್ ಶೇ.0.72ರಷ್ಟು ಹಾಗೂ ಟಿಸಿಎಸ್ ಷೇರುಗಳಲ್ಲಿ ಶೇ. 0.28ರಷ್ಟು ಇಳಿಕೆ ಆಗಿವೆ.

ಆಟೋ ಮತ್ತು ಬಳಕೆ ಷೇರುಗಳಲ್ಲಿಯೂ ಭಾರಿ ಮಾರಾಟ ಕಂಡುಬಂದಿದೆ. ಮಾರುತಿ ಸುಜುಕಿ ಶೇ.1.15ರಷ್ಟು, ಟೈಟಾನ್ ಶೇ.2.53 ಮತ್ತು ಏಷ್ಯನ್ ಪೇಂಟ್ಸ್ ಷೇರಿನಲ್ಲಿ ಶೇ.1.39ರಷ್ಟು ಕುಸಿತ ಕಂಡಿವೆ ಎಂದು ವರದಿ ಆಗಿದೆ.

ಷೇರು ಮಾರುಕಟ್ಟೆ ಕುಸಿಯಲು ಪ್ರಮುಖ ಕಾರಣ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಮತ್ತು ಅಮೆರಿಕಾ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಸಂಘರ್ಷ ಸದ್ಯಕ್ಕೆ ಅಂತ್ಯಗೊಳ್ಳುವ ಹಾಗೆ ಕಾಣುತ್ತಿಲ್ಲ. ಅಮೆರಿಕ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗಳು ಜಾಗತಿಕ ಮಾರುಕಟ್ಟೆಗಳನ್ನು ಸಂಕಷ್ಟಕ್ಕೆ ತಳ್ಳಿವೆ. ಅದರಲ್ಲೂ ವಿಶೇಷವಾಗಿ ಜಾಗತಿಕ ತೈಲ ಪೂರೈಕೆಗೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಯುದ್ಧದ ಪ್ರಮುಖ ಕೇಂದ್ರ ಬಿಂದುವೇ ಆಗಿಬಿಟ್ಟಿದೆ.

ಯುದ್ಧದ ಉದ್ವಿಘ್ನತೆ ಹಾಗೂ ಅದರ ಸುತ್ತಲಿನ ಅನಿಶ್ಚಿತತೆಯು ಜಾಗತಿಕವಾಗಿ ಅಪಾಯ ತಂದೊಡ್ಡುತ್ತಿದ್ದೆ. ಯುದ್ಧನಿರತ ರಾಷ್ಟ್ರಗಳ ಜೊತೆಗೆ ಇತರ ದೇಶಗಳ ಮೇಲೆ, ಷೇರು ಮಾರುಕಟ್ಟೆ ಮೇಲೆ ನಿರಂತರ ಪರಿಣಾಮ ಬೀರುತ್ತಿದೆ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ.ಕೆ. ವಿಜಯಕುಮಾರ್ ಹೇಳಿದರು.

ಇರಾನ್, ಇಸ್ರೇಲ್ -ಅಮೆರಿಕಾ ನಡುವಿನ ಸಂಘರ್ಷ ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಯುಎಸ್ ಅಧ್ಯಕ್ಷ ಟ್ರಂಪ್ ಮುಂದಿನ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಬಗ್ಗೆ ಇರಾನ್‌ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ತೈಲ ಪೂರೈಕೆ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.

ಕ್ರೂಡ್ ಆಯಿಲ್ ಬೆಲೆ ಏರಿಕೆಯಿಂದ ಒತ್ತಡ

ಮಾರುಕಟ್ಟೆ ಕುಸಿತಕ್ಕೆ ಕಚ್ಚಾ ತೈಲ ಬೆಲೆ ಏರಿಕೆಯು ಷೇರು ಪೇಟೆ ಮೇಲೆ ವ್ಯತಿರಿಕ್ತ ಪ್ರಮುಖ ಉಂಟಾಗಲು ಕಾರಣ ಎನ್ನಲಾಗಿದೆ. ಇಂದಿನ ವಹಿವಾಟಿನ ಪ್ರಕಾರ, ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ. 0.67ರಷ್ಟು ಏರಿಕೆಯಾಗಿದ್ದು, 112.94 ಕ್ಕೆ ಮಾರಾಟವಾಗಿದೆ. ಡಬ್ಲುಟಿಐ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ.1.02ರಷ್ಟು ಹೆಚ್ಚಾಗಿ 99.23 ಕ್ಕೆ ತಲುಪಿದೆ. ಸಂಘರ್ಷದಿಂದ ಈ ತಿಂಗಳ ತೈಲ ಬೆಲೆಗಳು ಶೇ.50ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಪ್ರಸ್ತುತ ಬಿಕ್ಕಟ್ಟು 1970ರ ನಂತರ ಕಂಡು ಬಂದ ಕೆಟ್ಟ ಪರಿಸ್ಥಿತಿ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಹೇಳಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/stock-market-crash-today-march-23-sensex-drops-1-800-points-investors-lose-rs-10-lakh-crore-448029.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo