ಸಂಜು ಸ್ಯಾಮ್ಸನ್‌ ಸ್ಥಾನಕ್ಕೆ ರಿಯಾನ್ ಪರಾಗ್ ನೇಮಕ: ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ನೂತನ ನಾಯಕ | IPL 2026: Riyan Parag Appointed as Rajasthan Royals Captain After Sanju Samson’s Exit: Know details

Sports

oi-Madhusudhan KR

IPL 2026: ಸಂಜು ಸ್ಯಾಮ್ಸನ್‌ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹೋದಮೇಲೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲವಿತ್ತು. ಇದೀಗ ಕೊನೆಗೂ, ಈ ಸ್ಥಾನಕ್ಕೆ ರಿಯಾನ್ ಪರಾಗ್ ಅವರನ್ನು ಘೋಷಣೆ ಮಾಡಿದೆ. ಹಾಗಾದ್ರೆ ಇವರನ್ನು ಆಯ್ಕೆ ಮಾಡಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್ 2026ರ ಸೀಸನ್‌ಗೆ ಮುನ್ನ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ರಿಯಾನ್ ಪರಾಗ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಸಂಜು ಅಲಭ್ಯರಾಗಿರುವ ವೇಳೆ ಅವರ ನಾಯಕತ್ವ ಸ್ಥಾನವನ್ನು ಉತ್ತಮವಾಗಿ ನಿಭಾಯಿಸಿದ್ದರು. ಇದನ್ನು ಗಮನಿಸಿ ಫ್ರಾಂಚೈಸಿ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ.

IPL 2026 Riyan Parag Appointed as Rajasthan Royals Captain After Sanju Samson s Exit Know details

ಪರಾಗ್ ನಾಯಕನಾಗಿ ಆಯ್ಕೆಯಾಗಿದ್ದು ಹೇಗೆ?

ಕಳೆದ ಬಾರಿ ಸೀಸನ್‌ನಲ್ಲಿಯೇ ಅವರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ಜೊತೆಗೆ ಪ್ರಮುಖ ಆಟಗಾರನಾಗಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಆದ್ದರಿಂದ ಫ್ರಾಂಚೈಸಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಂಡದಲ್ಲಿ ಸಹ ಆಟಗಾರರೊಂದಿಗೆ ಉತ್ತಮ ಬಾಂದ್ಯವ್ಯ ಹೊಂದಿದ್ದು, ಇದರಿಂದ ಅವರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಇನ್ನೂ ಐಪಿಎಲ್ ಹರಾಜಿನ ನಂತರ ಕಳೆದ ಎರಡು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ನಡೆಸಿದ ಪ್ರಕ್ರಿಯೆಯ ಬಳಿಕ ಈ ನೇಮಕಾತಿ ನಡೆದಿದೆ.

ರಿಯಾನ್‌ ಪರಾಗ್ ಅವರು ಫ್ರಾಂಚೈಸಿಯೊಂದಿಗೆ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಭಾರತೀಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ 2019ರಿಂದ ಆರ್‌ಆರ್‌ ತಂಡದಲ್ಲಿದ್ದಾರೆ. ಕಿರಿಯ ವಯಸ್ಸಿನಲ್ಲಿ ತಂಡಕ್ಕೆ ಸೇರಿದ್ದ ಅವರು, ಇದೀಗ ಉನ್ನತ ಮಟ್ಟದ ಅನುಭವದೊಂದಿಗೆ ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ರಿಯಾನ್‌ ಪರಾಗ್ ಹೇಳಿದ್ದೇನು ಗೊತ್ತಾ?

“ಐಪಿಎಲ್‌ನಲ್ಲಿ ಮೊದಲ ದಿನದಿಂದಲೇ ರಾಜಸ್ಥಾನ್ ರಾಯಲ್ಸ್ ನನ್ನ ಮನೆ ಆಗಿದೆ. ಈ ಫ್ರಾಂಚೈಸಿ ನನಗೆ ಬೆಂಬಲ ನೀಡಿದೆ, ನನ್ನನ್ನು ಬೆಳೆಸಿದೆ ಹಾಗೂ ಪ್ರತೀ ಸೀಸನ್‌ನಲ್ಲಿ ಪ್ರೇರೇಪಿಸಿದೆ,” ಎಂದು ಆರ್‌ಆರ್‌ ನಾಯಕನಾಗಿ ನೇಮಕಗೊಂಡ ಬಳಿಕ ರಿಯಾನ್ ಪರಾಗ್ ಹೇಳಿದ್ದಾರೆ.

ಅಲ್ಲದೆ, “ಈ ತಂಡವನ್ನು ಈಗ ಮುನ್ನಡೆಸುವ ಅವಕಾಶ ಸಿಕ್ಕಿರುವುದು ಅತ್ಯಂತ ವಿಶೇಷವಾಗಿ. ಇದು ದೊಡ್ಡ ಜವಾಬ್ದಾರಿಯಾಗಿದ್ದು, ಅದನ್ನು ನಾನು ಸಂಪೂರ್ಣವಾಗಿ ಸ್ವೀಕರಿಸುತ್ತೇನೆ. ನಮ್ಮ ತರಬೇತುದಾರರು ಮತ್ತು ತಂಡದೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ,” ಎಂದು ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹೇಳಿಕೆ

ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಮಾತನಾಡಿ, “ರಿಯಾನ್ ನಮ್ಮ ತಂಡದಲ್ಲಿ ಪ್ರಭಾವಶಾಲಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಶಾಂತತೆಯಿಂದ ನಡೆದುಕೊಳ್ಳುವ ಗುಣ, ನಾವು ಹೇಗೆ ಆಡಬೇಕೆಂದು ಬಯಸುತ್ತೇವೋ ಅದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈಗಾಗಲೇ ಆಟಗಾರರ ನಾಯಕತ್ವ ಗುಂಪಿನ ಭಾಗವಾಗಿರುವ ರಿಯಾನ್, ಡ್ರೆಸ್ಸಿಂಗ್ ರೂಮ್‌ನ ಗೌರವವನ್ನು ಗಳಿಸಿದ್ದಾರೆ. ಈ ಪಾತ್ರದಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ನಮಗಿದೆ,” ಎಂದು ಹೇಳಿದರು.

ರಾಜಸ್ಥಾನ್ ರಾಯಲ್ಸ್‌ ಮಾಲೀಕ ಹೇಳಿದ್ದೇನು?

ರಾಜಸ್ಥಾನ್ ರಾಯಲ್ಸ್‌ನ ಮಾಲೀಕ ಮನೋಜ್ ಬದಾಲೆ ಮಾತನಾಡಿ, “ರಿಯಾನ್ ರಾಜಸ್ಥಾನ್ ರಾಯಲ್ಸ್‌ನಲ್ಲಿ ನಾವು ಅಂದುಕೊಂಡಂತೆ ಉತ್ತಮವಾಗಿ ನಾಯಕನ ಸ್ಥಾನವನ್ನು ನಿಭಾಯಿಸುತ್ತಾರೆ. ಅಂತಹ ವ್ಯಕ್ತಿತ್ವ ಅವರಲ್ಲಿ ಕಂಡಿದ್ದೇವೆ. ಹಲವು ವರ್ಷಗಳಿಂದ ಈ ಫ್ರಾಂಚೈಸಿಯ ಭಾಗವಾಗಿದ್ದಾರೆ. ಆದ್ದರಿಂದ ರಿಯಾನ್‌ಗೆ ತಂಡದ ಬಗ್ಗೆ ತುಂಬಾ ಅರ್ಥಮಾಡಿಕೊಂಡಿದ್ದಾರೆ. ಸ್ಪಷ್ಟತೆ, ಧೈರ್ಯ ಮತ್ತು ಹೊಣೆಗಾರಿಕೆಯೊಂದಿಗೆ ತಂಡವನ್ನು ಮುನ್ನಡೆಸಲು ಅವರು ಸಿದ್ಧರಾಗಿದ್ದಾರೆ ಎಂದು ನಾವು ನಂಬಿದ್ದೇವೆ. ಐಪಿಎಲ್ 2026ರಲ್ಲಿ ಅವರು ಈ ಹೆಜ್ಜೆ ಇಡುವುದನ್ನು ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ,” ಎಂದು ಹೇಳಿದರು.

ಕೋಚ್‌ಗಳ ವಿವರ: ಐಪಿಎಲ್ 2026ಕ್ಕೆ ರಾಜಸ್ಥಾನ್ ರಾಯಲ್ಸ್ ತಂಡವು ಕುಮಾರ್‌ ಸಂಗಕ್ಕಾರ ಅವರ ನೇತೃತ್ವದ ಬಲಿಷ್ಠ ಕೋಚಿಂಗ್‌ನೊಂದಿಗೆ ಮುನ್ನಡೆಯಲಿದೆ. ಇನ್ನು ಇದರಲ್ಲಿ ಪ್ರಮುಖ ಸಹಾಯಕ ಕೋಚ್ ಆಗಿ ವಿಕ್ರಮ್ ರಾಥೋರ್, ಫಾಸ್ಟ್ ಬೌಲಿಂಗ್ ಕೋಚ್ ಆಗಿ ಶೇನ್ ಬಾಂಡ್, ಸಹಾಯಕ ಕೋಚ್ ಆಗಿ ಟ್ರೆವರ್ ಪೆನ್ನಿ ಹಾಗೂ ಸಿಡ್ ಲಹಿರಿ ಪರ್ಫಾರ್ಮೆನ್ಸ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-riyan-parag-appointed-as-rajasthan-royals-captain-after-sanju-samson-s-exit-know-details-443623.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo