ಸಿಂದಗಿಯ ಗೊಲ್ಲಾಳೇಶ್ವರ ಜಾತ್ರಾ ಮಹೋತ್ಸವ ಶುರು: 70 ಅಡಿ ರಥೋತ್ಸವಕ್ಕೆ ದಿನಗಣನೆ, ಐತಿಹಾಸಿಕ ಹಿನ್ನೆಲೆ | Grand Gollaleshwara Jatra 2026 in Sindagi: 70-Foot Chariot & Sacred Celebrations Begin April 2

Karnataka

oi-Shankrappa Parangi

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿಯಲ್ಲಿ ಗೊಲ್ಲಾಳೇಶ್ವರ ಹಲವು ಪವಾಡಗಳನ್ನು ಮಾಡುವ ಮೂಲಕ ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಅಪಾರ ಭಕ್ತರ ಆರಾಧ್ಶ ದೈವವಾಗಿದ್ದಾರೆ. ನಾಳೆ ಏಪ್ರಿಲ್ 2ರ ಗುರುವಾರದಿಮದ ಅದ್ಧೂರಿ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಜರುಗಲಿದೆ.

ಮೊದಲ ದಿನ ಏಪ್ರಿಲ್ 2 ರಂದು ಸಂಜೆ 5.40ಕ್ಕೆ ಧರ್ಮದರ್ಶಿಗಳಾದ ವರಪುತ್ರ ಹೊಳೆಪ್ಪಶರಣರು ದೇವರಮನಿ, ನಿಜಪ್ಪಶರಣರು ದೇವರಮನಿ ನೇತೃತ್ವದಲ್ಲಿ ಪಂಚಲೋಹದ ಕಲಶಾರೋಹಣ ನೇರವೇರಿ ಬಳಿಕ ಭೂಚಕ್ರ ಕೊಡೆ ಏರಿಸಿದ ನಂತರ ಸಂಭ್ರಮದಿಂದ ಮಹಾರಥೋತ್ಸವ ಜರುಗುತ್ತದೆ.

Grand Gollaleshwara Jatra 2026

ಏಪ್ರಿಲ್ 3 ರಿಂದ ದನಗಳ ಜಾತ್ರೆ ಇಲ್ಲಿನ ಮತ್ತೊಂದು ವಿಶೇಷವಾಗಿದೆ. ಏಪ್ರಿಲ್ 4 ಶನಿವಾರದಂದು ಕಡಬಿನ ಕಾಳಗ, ಏಪ್ರಿಲ್ 6 ಸೋಮವಾರ ಕಲಶ ಇಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಗೊಲ್ಲಾಳೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಕಾಯಾ೯ಧ್ಶಕ್ಷರಾದ ರವಿರಾಜ ಎಸ್.ದೇವರಮನಿ ಮಾಹಿತಿ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿಯೇ ಅತಿ ಎತ್ತರದ ರಥ

ಜಾತ್ರೆ ಸಂದರ್ಭದಲ್ಲಿ ಗೊಲ್ಲಾಳೇಶ್ವರರ 70 ಅಡಿ ಎತ್ತರದ ಭವ್ಶವಾದ ರಥ ಎಳೆಯುತ್ತಾರೆ. ರಥದ ಗಾಲಿಗಳ ಎತ್ತರವೂ 9 ಅಡಿ 10 ಇಂಚು ಎತ್ತರವಿದ್ದು, ನಾಲ್ಕು ಕಲ್ಲಿನ ಹಾಗೂ 2 ಕಟ್ಟಿಗೆ ಗಾಲಿಯನ್ನು ಏಕಶಿಲೆಯಲ್ಲಿ ಕೆತ್ತಿದ್ದು, ರಥಕ್ಕೆ ತಕ್ಕಂತೆ ಗಾಲಿ ನಿರ್ಮಿಸಲಾಗಿದೆ. ಈ ರಥ ಉತ್ತರ ಕನಾ೯ಟಕ ಭಾಗದಲ್ಲಿಯೇ ಅತಿ ಎತ್ತರದ ರಥ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಗೋಲಗೇರಿ ಗೊಲ್ಲಾಳೇಶ್ವರ ಕ್ಷೇತ್ರದ ಇತಿಹಾಸ

ಎರಡನೇ ಶ್ರೀಶೈಲ ಎಂದು ಖ್ಯಾತಿಯನ್ನು ಕ್ಷೇತ್ರವು ಪಡೆದಿದೆ. ಢವಳಾರ ಗ್ರಾಮದ ಬಲ್ಲುಗ -ದುಗ್ಗಾಳದೇವಿ ದಂಪತಿಯ ಉದರದಿಂದ ಜನಿಸಿದ ಗೊಲ್ಲಾಳೇಶ ,ಮನೆತನದ ವೃತ್ತಿಯಂತೆ ಕುರಿ ಕಾಯುವ ಕಾಯಕ ಮಾಡುತ್ತಿದ್ದ, ಸದಾ ಶಿವಧ್ಯಾನ, ನಿತ್ಯ ಶಿವ ಚಿಂತೆನೆಯಲ್ಲಿರುತ್ತಿದ್ದ. ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿದ್ದ ನಂದಯ್ಶಸ್ವಾಮಿ ಎನ್ನುವವರಿಗೆ ಹೊನ್ನಿನ ನಾಣ್ಯ ಕೊಟ್ಟ ಗೊಲ್ಲಾಳೇಶ ,ತನಗಾಗಿ ಒಂದು ಲಿಂಗ ತಂದುಕೊಡುವಂತೆ ಹೇಳಿದ್ದನಂತೆ.

ಆದರೆ ತಿರುಗಿ ಬರುವಾಗ ಲಿಂಗ ತರಲು ಮರೆತ ನಂದಯ್ಯಸ್ವಾಮಿ ಕುರಿಯ ಹಿಕ್ಕಿಯೊಂದನ್ನು ಗೊಲ್ಲಾಳೇಶನ ಕೈಗಿಟ್ಟು ಇದೆ ಲಿಂಗ, ಇದನ್ನು ಗೊಬ್ಬರದ ಗುಂಡಿಯಲ್ಲಿಟ್ಟು ಪೂಜಿಸು ಎಂದು ಹೇಳಿ ಅಷ್ಟಾವರಣ ಪೂಜಾವಿಧಿ ಬೋಧಿಸಿ ಹೋಗಿದ್ದರು. ಪಂಚಾಮೃತದ ಅಭಿಷೇಕವೆನ್ನುತ್ತಾ ಮನೆಯಲ್ಲಿದ್ದ ಹಾಲು, ಮೊಸರು, ತುಪ್ಪವನ್ನು ಗುಂಡಿಗೆ ಸುರಿಯ ತೊಡಗಿದ್ದ. ಇದನ್ನು ತಿಳಿದ ತಂದೆ ಕೆಂಡಾಮಂಡಲವಾಗಿ ಕುರಿಯ ಹಟ್ಟಿಗೆ ಧಾವಿಸಿ ಬಂದಾಗ ಗೊಲ್ಲಾಳೇಶ ಶಿವನಾಮ ಜಪಿಸುತ್ತಿದ್ದ.

ತಂದೆ ಗೊಬ್ಬರದ ಗುಂಪಿಯನ್ನು ಕಾಲಿನಿಂದ ಚಲ್ಲಾಪಿಲ್ಲಿ ಮಾಡಿದ. ಆಗ ಗೊಲ್ಲಾಳೇಶ್ವ ತಂದೆಯೆಂಬ ಮೋಹವನ್ನು ಕಿತ್ತೆಸೆದು ಅಲ್ಲಿಯೇ ಬಿದ್ದಿದ್ದ ಕೊಡಲಿಯಿಂದ ತಂದೆಯ ಶಿರಚ್ಛೇದನ ಮಾಡಿದ. ಕೂಡಲೇ ಗೊಬ್ಬರದ ಗುಂಡಿಯಿಂದ ಶಿವನು ಪ್ರತ್ಯಕ್ಷನಾಗಿ ಗೊಲ್ಲಾಳೇಶನ ಲಿಂಗ ಪ್ರೇಮ ಹಾಗೂ ಅಚಲ ಭಕ್ತಿಗೆ ಮೆಚ್ಚಿ. ನಾನು ಇಲ್ಲಿಯೇ ಲಿಂಗರೂಪದಲ್ಲಿ ನೆಲೆಗೊಳ್ಳುವೆ ಎಂದು ಹೇಳಿದ್ದರೆಂಬ ಐತಿಹ್ಯವಿದೆ.

ಈ ಕ್ಷೇತ್ರ ಇಂದಿನಿಂದ ಗೊಲ್ಲಾಳೇಶ್ವರನೆಂಬ ನಾಮದಿಂದ ಜಗವೆಲ್ಲ ಬೆಳಗಲಿ. ಈ ಕ್ಷೇತ್ರ ಭೂ ಕೈಲಾಸವಾಗಲಿ,ಬಯಸಿ ಬಂದ ಭಕ್ತರಿಗೆ ಇದು ಕಲ್ಪವೃಕ್ಷವಾಗಲಿ ಎಂದು ಹರಿಸಿದ ಎಂಬ ಉಲ್ಲೇಖ ಚರಿತ್ರೆಗಳಲ್ಲಿದೆ. ಅಂದಿನಿಂದ ಇಂದಿನವರೆಗೂ ಅದೇ ಲಿಂಗವನ್ನು ಇಲ್ಲಿ ಭಕ್ತರು, ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದಾರೆ. ಪ್ರತಿವರ್ಷ ಸಂಭ್ರಮದಿಂದ ರಥೋತ್ಸವವು ಜರುಗುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/grand-gollaleshwara-jatra-2026-in-sindagi-70-foot-chariot-sacred-celebrations-begin-april-2-449105.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo