ಸಿಎಸ್‌ಕೆ ಕಪ್‌ 5 ರೂಪಾಯಿ, ಆರ್‌ಸಿಬಿ ಟ್ರೋಫಿ ಬೆಲೆ 5 ಕೋಟಿ ರೂಪಾಯಿ: ಪುಟ್ಟ ಬಾಲಕನ ಹೇಳಿಕೆ ಭಾರೀ ವೈರಲ್ | “RCB Trophy Worth ₹5 Crore”; Young boy’s Viral Reaction After RCB Win Sparks Buzz Ahead of CSK Clash

Sports

oi-Madhusudhan KR

RCB Trophy Price: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಈ ನಡುವೆ ಪುಟ್ಟ ಬಾಲಕನೊಬ್ಬ ನೀಡಿರುವ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಪಂದ್ಯ ಮುಗಿದ ಬಳಿಕ ಮೈದಾನದ ಹೊರಗೆ ಆರ್‌ಸಿಬಿ ಅಭಿಮಾನಿಗಳು ಮಾಧ್ಯಮದವರ ಮುಂದೆ ಬಂದು ‘ಈ ಸಲನೂ ಕಪ್‌ ನಮ್ದೇ’ ಎಂಬ ಘೋಷಣೆಗಳನ್ನು ಹೇಳಿದರು. ಇದೇ ವೇಳೆ ಮಾಧ್ಯಮವೊಂದರ ಜೊತೆ ಮಾತನಾಡಿದ ಪುಟ್ಟ ಬಾಲಕ, ಆರ್‌ಸಿಬಿ ಮೇಲಿರುವ ತನ್ನ ಅಭಿಮಾನವನ್ನು ವಿಶಿಷ್ಟವಾಗಿ ವ್ಯಕ್ತಪಡಿಸಿದ್ದಾನೆ. “ಆರ್‌ಸಿಬಿ ಗೆದ್ದಿರುವುದು ತುಂಬಾ ಖುಷಿಯಾಗುತ್ತಿದೆ. ಮುಂದಿನ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲೂ ಗೆಲ್ಲುತ್ತದೆ,” ಎಂದು ಹೇಳಿದ್ದಾನೆ.

RCB Trophy Worth 5 Crore Young boy s Viral Reaction After RCB Win Sparks Buzz Ahead of CSK Clash

ಆರ್‌ಸಿಬಿ ಟ್ರೋಫಿ ಬೆಲೆ 5 ಕೋಟಿ

ಮುಂದುವರೆದು ಮಾತನಾಡಿದ ಆ ಪುಟ್ಟ ಬಾಲಕ, “ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವ ಟ್ರೋಫಿ ಬೆಲೆ ಬರಿ 5 ರೂಪಾಯಿ, ಆದರೆ ನಮ್ಮ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟ್ರೋಫಿಯ ಬೆಲೆ 5 ಕೋಟಿ ರೂಪಾಯಿಗೆ ಸಮ,” ಎಂದು ಹೇಳಿದ್ದಾನೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಬಾಲಕನ ಹೇಳಿಕೆ ಭಾರೀ ವೈರಲ್

ಈ ಬಾಲಕನ ಮಾತುಗಳು ಕೇಳಿ ಅಲ್ಲಿದ್ದ ಉಳಿದ ಅಭಿಮಾನಿಗಳು ಶಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಈ ರೀಲ್ಸ್‌ ಅನ್ನು ಸಾವಿರಾರು ಬಾರಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಆರ್‌ಸಿಬಿ ಅಭಿಮಾನಿಗಳು “ಇದು ಕೇವಲ ಟ್ರೋಫಿಯಲ್ಲ, ಇದು ನಮ್ಮ ಭಾವನೆ” ಎಂದು ಕಮೆಂಟ್ ಮಾಡುತ್ತಿದ್ದರೆ, ಸಿಎಸ್‌ಕೆ ಅಭಿಮಾನಿಗಳು ತಮ್ಮ 5 ಟ್ರೋಫಿಗಳ ದಾಖಲೆಯನ್ನು ನೆನಪಿಸಿ ತಮಾಷೆಯಾಗಿ ತಿರುಗೇಟು ನೀಡುತ್ತಿದ್ದಾರೆ.

ನೆಟ್ಟಿಗರು ಹೇಳೋದೇನು?

ಮಹಿಳಾ ತಂಡವು ಈಗಾಗಲೇ ಎರಡು ಬಾರಿ ಚಾಂಪಿಯನ್ ಆಗಿರುವುದರಿಂದ, ಈ ಬಾರಿ ಪುರುಷರ ತಂಡವೂ ಕಪ್ ಗೆಲ್ಲುತ್ತದೆ ಎಂಬ ಬಲವಾದ ನಂಬಿಕೆ ಅಭಿಮಾನಿಗಳಲ್ಲಿ ಇದೆ. ಈ ಪುಟ್ಟ ಬಾಲಕನ ಮಾತುಗಳು ಆ ನಂಬಿಕೆಗೆ ಕನ್ನಡಿ ಹಿಡಿದಂತಿವೆ. ಕೆಲವರು “ಗೆದ್ದಾಗ ಮಾತ್ರವಲ್ಲ, ಸೋತಾಗಲೂ ಜೊತೆಗಿರುವವನೇ ನಿಜವಾದ ಅಭಿಮಾನಿ. ಈ ಮಗು ಆ ಪ್ರೀತಿಯನ್ನು ಚೆನ್ನಾಗಿ ಹೇಳಿದ್ದಾನೆ. ನಮಗೆ ನಮ್ಮ ಒಂದು ಟ್ರೋಫಿ ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು” ಎಂದು ಹಲವರು ಹೇಳಿದ್ಧಾರೆ.

“ಅವನು ಇನ್ನೂ ಚಿಕ್ಕ ಬಾಲಕ, ತನ್ನ ತಂಡದ ಮೇಲಿರುವ ಅತಿಯಾದ ಪ್ರೀತಿಯಿಂದ ಹಾಗೆ ಹೇಳಿದ್ದಾನೆ. ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಬದಲು ಕ್ರೀಡಾ ಮನೋಭಾವದಿಂದ ನೋಡಬೇಕು” ಎಂದು ಹಲವು ಕ್ರಿಕೆಟ್ ಪ್ರೇಮಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಈ ಪುಟ್ಟ ಬಾಲಕನ ವಿಡಿಯೋ ಈಗ “ಆರ್‌ಸಿಬಿ vs ಸಿಎಸ್‌ಕೆ” ನಡುವಿನ ಹಳೆಯ ಪೈಪೋಟಿಗೆ ಹೊಸ ಕಿಚ್ಚು ಹಚ್ಚಿದೆ. ಏಪ್ರಿಲ್ 5ರಂದು ನಡೆಯಲಿರುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-trophy-worth-5-crore-young-boys-viral-reaction-after-rcb-win-sparks-buzz-ahead-of-csk-clash-448797.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo