
Entertainment
oi-Hitesh Y
ನಟ, ನಿರ್ದೇಶಕ ರವಿಚಂದ್ರನ್ ಅವರು ಕನ್ನಡಿಗರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡದೆ ಇರುವ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ಅವರ ಹೇಳಿಕೆಯು ಹಲವು ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರವಿಚಂದ್ರನ್ ಅವರು ಹೇಳಿದ್ದೇನು, ಇದಕ್ಕೆ ಕನ್ನಡಿಗರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ನಟಿ ರವಿಚಂದ್ರನ್ ಅವರು, ಸಿನಿಮಾಗಳು ಬಿಡುಗಡೆ ಆಗುತ್ತಲ್ಲೇ ಇವೆ. ಆದರೆ, ಒಳ್ಳೆ ಸಿನಿಮಾಗಳನ್ನು ನೀವು (ಜನರು) ಗೆಲ್ಲಿಸುತ್ತಿಲ್ಲ. ಎಲ್ಲರೂ ಮೊಬೈಲ್ಗಳಲ್ಲಿ ಕಳೆದು ಹೋಗಿದ್ದೀರ. ಅದನ್ನ ಬಿಟ್ಟು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ. ಒಬ್ಬ ಪ್ರೇಕ್ಷಕನಿಗೆ 100 ರೂಪಾಯಿ ಕೊಟ್ಟು ಸಿನಿಮಾ ನೋಡುವುದಕ್ಕೆ ಆಗಲ್ವಾ. ನಿಮಗೆ ಸಿನಿಮಾಗೋಸ್ಕರ ನೂರು ರೂಪಾಯಿ ಖರ್ಚು ಮಾಡೋಕೆ ಆಗುವುದಿಲ್ಲವೇ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ 100 ರೂಪಾಯಿ ಕೊಟ್ಟು ಸಿನಿಮಾ ನೋಡಿ, ಅದರಿಂದ ನಿಮ್ಮ ಗಂಟೇನೂ ಹೋಗಲ್ಲ ಅಂತನೂ ಅವರು ಹೇಳಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿರುವ ವಿಚಾರ. ಇದಕ್ಕೆ ಕನ್ನಡಿಗರು ತುಸು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಅಮರನಾಥ್ ಶಿವಶಂಕರ್ ಎನ್ನುವವರು, ನಟ ನಿರ್ದೇಶಕ ಕನಸುಗಾರ ರವಿಚಂದ್ರನ್ ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಂದು ಸಿನಿಮಾ ನೋಡಿ, 100 ರೂಪಾಯಿ ತಾನೇ ಖರ್ಚು ಮಾಡಿ, ಏನು ಗಂಟು ಹೋಗಲ್ಲ ಅಂತ ಹೇಳಿದ್ದಾರೆ. ಅವರ ಮಾತಿನ ಒಳಾರ್ಥ ನಮಗೆ ತಿಳಿಯುತ್ತದೆ. ಚಿತ್ರರಂಗವನ್ನು ಪ್ರೇಕ್ಷಕರು ಬೆಂಬಲಿಸದೆ ಹೋದರೆ ಚಿತ್ರರಂಗ ನೆಲಕಚ್ಚುತ್ತದೆ ಅನ್ನುವುದು ಅವರ ಮಾತಿನ ಅರ್ಥ.
ಆದರೆ ವರ್ಷಕ್ಕೆ 200 ಚಿತ್ರಗಳು ಬಂದಾಗ ಪ್ರೇಕ್ಷಕರು ಅಷ್ಟೂ ಚಿತ್ರಗಳನ್ನು ಬೆಂಬಲಿಸುವುದು ಕಷ್ಟ. ಸಿನಿಮಾ ಅಭಿಮಾನಿಗಳು ವರ್ಷಕ್ಕೆ 10-15 ಸಿನಿಮಾಗಳು ನೋಡುವುದು ಸಹಜ. ಅದಕ್ಕೆ ಅವರು ಖರ್ಚು ಮಾಡುವ ಸಮಯಕ್ಕೆ, ಹಣಕ್ಕೆ ತಕ್ಕ ಮನರಂಜನೆ ಬೇಕಿರುತ್ತದೆ. ಸಾಲು ಸಾಲು ಕೆಟ್ಟ ಚಿತ್ರಗಳು ಬಂದಾಗ ಮಧ್ಯದಲ್ಲಿ ಒಂದೊಳ್ಳೆ ಚಿತ್ರ ಕಳೆದುಹೋಗುವುದು ನೋವುಂಟು ಮಾಡಿದರೂ ಹಾಗಾಗುವುದಕ್ಕೆ ಪ್ರೇಕ್ಷರಲ್ಲಿಯೂ ಆಗಿರುವ ನಿರಾಸೆ ಕಾರಣ.
ರವಿಚಂದ್ರನ್ ಅವರನ್ನೇ ತೆಗೆದುಕೊಂಡರೆ ದೃಶ್ಯ ಭಾಗ 1 ಮತ್ತು 2 ಅವರ ಇತ್ತೀಚಿನ ವರ್ಷಗಳಲ್ಲಿ ಬಂದ ಉತ್ತಮ ಕೌಟುಂಬಿಕ ಚಿತ್ರಗಳು. ಅವೆರಡೂ ರೀಮೇಕ್ ಚಿತ್ರಗಳು ಅನ್ನುವುದು ಬೇರೆ ವಿಚಾರ. ಉಳಿದೆಲ್ಲವೂ ಪ್ರೇಕ್ಷರನ್ನು ಸೆಳೆಯಲು ಸೋತಿವೆ. ನಿರ್ಮಾಪಕರ ಸ್ಥಿತಿ ಕೇಳುವಂತಿಲ್ಲ. ಪ್ರೇಕ್ಷಕರಿಗೆ ಮನೆಯಲ್ಲೇ ಕೂತು ಪ್ರಯೋಗ ಮಾಡುವ ಅವಕಾಶ ಇಂದಿದೆ. ಒಂದು ಚಿತ್ರ ಓಟಿಟಿ ಯಲ್ಲಿ ಶುರು ಮಾಡಿ ಇಷ್ಟವಾಗಿಲ್ಲವೆಂದರೆ ತಕ್ಷಣ ಬದಲಿಸುವ ಆಯ್ಕೆ ಇದೆ. ಹೀಗಿದ್ದಾಗ ಚಿತ್ರಮಂದಿರಕ್ಕೆ ಕರೆದೊಯ್ಯಲು ನಿಜಕ್ಕೂ ಉತ್ತಮ ಚಿತ್ರ, ಅತ್ಯುತ್ತಮ ವರ್ಡ್ ಆಫ್ ಮೌತ್ ಬೇಕಿದೆ. ಭಾವನಾತ್ಮಕವಾಗಿ ಪ್ರೇಕ್ಷರನ್ನು ಕರೆಸುವ ಕಾಲ ಇದಲ್ಲ. ರವಿಚಂದ್ರನ್ ಅವರ ಹತಾಶೆಯ ಬಗ್ಗೆ ಅನುಕಂಪವಿದೆ. ಆದರೆ ಚಿತ್ರರಂಗದವನ್ನು ಮತ್ತೆ ಜೀವಂತವಾಗಿಸಲು ಉತ್ತಮ ಚಿತ್ರಗಳಷ್ಟೇ ಬೇಕಿರುವುದು.
ಹೋಟೆಲ್ನಲ್ಲಿ ಊಟ ಚೆನ್ನಾಗಿಲ್ಲ, ಹೋಟೆಲ್ ಮಾಲೀಕರ ಧೋರಣೆ ಸರಿಯಿಲ್ಲ ಎಂದರೆ ಎಷ್ಟೇ ಹೊಟ್ಟೆ ಹಸಿಸಿದಿದ್ದರೂ ಜನ ಅಲ್ಲಿಗೆ ಹೋಗುವುದಿಲ್ಲ. ನಮ್ಮ ಅಡುಗೆ ಇರುವುದೇ ಹೀಗೆ ಸುಮ್ಮನೆ ಬಂದು ತಿಂದು ನಮ್ಮನ್ನು ಬೆಂಬಲಿಸಿ ಅಂದರೆ ಯಾರು ತಾನೇ ಬೆಂಬಲಿಸಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ರವಿಚಂದ್ರನ್ ಅವ್ರೇ,
ಸಿನಿಮಾ ಚೆನ್ನಾಗಿದ್ರೆ ಪ್ರೇಕ್ಷಕ 100 ರೂಪಾಯಿ ಅಲ್ಲಾ, 1000 ಕೊಟ್ಟೂ ಕೂಡ ಥಿಯೇಟರ್ ಗೆ ಬರ್ತಾನೆ,
ಕಥೆ ಹಾಗೂ ನಟನೆ ಇಷ್ಟ ಆದ್ರೆ ತನ್ನ ಸ್ವಂತ ದುಡ್ಡಲ್ಲಿ ಕಟೌಟ್ ನಿಲ್ಲಿಸ್ತಾನೆ, ಹಾಲಿನ ಅಭಿಷೇಕ ಮಾಡ್ತಾನೆ
ಆದರೆ ಸಿನಿಮಾ ಇಷ್ಟ ಆಗಿಲ್ಲ ಅಂದ್ರೆ ಫ್ರೀ ಆಗಿ ಟಿಕೆಟ್ ಕೊಟ್ರೂ ಬರಲ್ಲ… ಇದು ರಿಯಾಲಿಟಿ #KFI pic.twitter.com/0ujxjQ8Yrx
— ಅಲ್ಪಸಂಖ್ಯಾತ (@alpasankhyata) February 18, 2026
ರವಿಚಂದ್ರನ್ ಅವರೇ ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕ 100 ರೂಪಾಯಿ ಅಲ್ಲಾ, 1000 ಕೊಟ್ಟೂ ಕೂಡ ಥಿಯೇಟರ್ಗೆ ಬರ್ತಾನೆ. ಕಥೆ ಹಾಗೂ ನಟನೆ ಇಷ್ಟವಾದರೆ ತನ್ನ ಸ್ವಂತ ದುಡ್ಡಲ್ಲಿ ಕಟೌಟ್ ನಿಲ್ಲಿಸ್ತಾನೆ. ಹಾಲಿನ ಅಭಿಷೇಕ ಮಾಡ್ತಾನೆ. ಆದರೆ ಸಿನಿಮಾ ಇಷ್ಟ ಆಗಿಲ್ಲ ಎಂದರೆ ಫ್ರೀ ಆಗಿ ಟಿಕೆಟ್ ಕೊಟ್ಟರೂ ಬರಲ್ಲ. ಇದು ರಿಯಾಲಿಟಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
-

The Karala Story 2: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಂಭೀರ ಆರೋಪ
-

Gold Price: ಬಂಗಾರದ ಬೆಲೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ: ತಜ್ಞರ ಮುನ್ಸೂಚನೆ, ಕಾರಣವೇನು?
-

CBSE 10ನೇ ತರಗತಿ ಗಣಿತ ಪರೀಕ್ಷೆಗೆ ವಿದ್ಯಾರ್ಥಿಗಳ ಮಿಶ್ರ ಪ್ರತಿಕ್ರಿಯೆ: ‘ಕೇಸ್ ಸ್ಟಡಿ’ ವಿಭಾಗಕ್ಕೆ ಹೆಚ್ಚಿನ ಗಮನ ಅಗತ್ಯ
-

Gold, Silver Rate Feb 18: ಚಿನ್ನ ಪ್ರಿಯರಿಗೆ 4ನೇ ದಿನವೂ ಸಂತೋಷ: ಬೆಳ್ಳಿ ಬೆಲೆ ಬರೋಬ್ಬರಿ 5,000 ರೂ. ಇಳಿಕೆ
-

ನಮ್ಮ ಮೆಟ್ರೋ: ಹಸಿರು ಮಾರ್ಗದ ಜಯನಗರ–ಆರ್.ವಿ.ರಸ್ತೆ ನಡುವೆ ನಿಧಾನಗತಿಯಲ್ಲಿ ರೈಲು ಸಂಚಾರ
-

ರೈಲು ಪ್ರಯಾಣಿಕರಿಗೆ ಭರ್ಜರಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ, ಈ ಮಾರ್ಗದಲ್ಲಿ ವಿಶೇಷ ರೈಲು… South Western Railway
-

Gold: ಚಿನ್ನ – ಬೆಳ್ಳಿಗೆ ಪಿಂಕ್ ಕಾಗದ ದಶಕಗಳಿಂದ ಆಸರೆ: ಏನಿದರ ವಿಶೇಷತೆ, ಹಿನ್ನೆಲೆ ವಿವರ ಇಲ್ಲಿದೆ
-

IT – BT: ಕರಾವಳಿ ಅಭಿವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ vs ಉದ್ಯಮಿ ಮೋಹನ್ದಾಸ್ ಪೈ ನಡುವೆ ಟ್ವೀಟ್ ಸಮರ
-

KSRTC: ನಾಳೆ ಬಸ್ ಸಂಚಾರ ವ್ಯತ್ಯಾಸ: 38 ತಿಂಗಳ ವೇತನ ಬಾಕಿ: ಫೆ.19–20ಕ್ಕೆ ಕೆಎಸ್ಆರ್ಟಿಸಿ ಸೇರಿ ಸಾರಿಗೆ ನೌಕರರ ಮುಷ್ಕರ
-

Horoscope February 18: ಆರೋಗ್ಯದ ಮೇಲೆ ಎಚ್ಚರವಹಿಸಿ, ಯಾವ ರಾಶಿಯವರಿಗೆ ಶುಭ-ಅಶುಭ?, ದಿನ ಭವಿಷ್ಯ
-

Ambur Biryani: ಬೆಂಗಳೂರಿನ ಸ್ಟಾರ್ ಅಂಬೂರ್ ಬಿರಿಯಾನಿ ಹೋಟೆಲ್ಗೆ ಶಾಕ್ ಕೊಟ್ಟ ಜಿಬಿಎ
-

Rashmi Leela biography: ಸೀರಿಯಲ್ ಲೋಕದಿಂದ ಇಹಲೋಕದವರೆಗೆ: ನಟಿ ರಶ್ಮಿ ಲೀಲಾ ಹೋರಾಟ ಮತ್ತು ಅಕಾಲಿಕ ವಿದಾಯ
-

ಔಷಧ ಖರೀದಿಗೆ 30 ಕೋಟಿ ರೂ.ಅನುದಾನ: ಆಸ್ಪತ್ರೆಗಳಲ್ಲಿ ಪರದಾಡುತ್ತಿದ್ದ ರೋಗಿಗಳಿಗೆ ನೆಮ್ಮದಿ
-

Explainer: ಉತ್ತರ ಭಾರತದ ಮಹಿಳೆ ಅಡುಗೆಮನೆಗೆ ಸೀಮಿತ, ದಕ್ಷಿಣ ಭಾರತದ ಮಹಿಳೆ ಮಾಡರ್ನ್: ಈ ವಿಭಜನೆ ಸರಿಯೇ?
-

Karnataka Weather Updates: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮುಂದಿನ 5 ದಿನ ಒಣಹವೆ ಮುಂದುವರಿಕೆ, ಚಳಿ ಯಥಾಸ್ಥಿತಿ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/pay-rs-100-watch-the-film-v-ravichandrans-appeal-draws-sympathy-from-kannadigas-sparks-social-media-444403.html. xn--babytilbehr-pgb.com does not claim ownership of this content. All rights remain with the original publisher.

