
International
oi-Shankrappa Parangi
Middle East War Update: ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವೆ ಸಂಘರ್ಷ ತಾರಕಕ್ಕೇರಿರಿದೆ. ಟೆಹರಾನ್ ಮೇಲಿನ ದಾಳಿಗೆ ಇರಾನ್ ಪ್ರತೀಕಾರ ತಿರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಇಂದು (ಮಾ.2) ಮೂರನೇ ದಿನ ಯುದ್ಧ ಭೀಕರ ಸ್ವರೂಪ ಪಡೆದಿದೆ. ಮಧ್ಯ ಪ್ರಾಚ್ಯದಲ್ಲಿ ಸಿಲುಕಿದ ಮಕ್ಕಳು, ಗರ್ಭಿಣಿಯರು ಮತ್ತು ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಜರ್ಮನಿ ಸರ್ಕಾರ ಸಿದ್ಧತೆ ನಡೆಸಿದೆ. ಬಿಕ್ಕಟ್ಟಿನಿಂದಾಗಿ ಸುಮಾರು 30,000 ಜರ್ಮನ್ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷ ವಿಮಾನಗಳ ಮೂಲಕ ಜನರ ರವಾನೆ ಕಾರ್ಯ ನಡೆಯುತ್ತಿದೆ.
ಕತಾರ್ ಮತ್ತು ಯುಎಇಗಳಲ್ಲಿ ಅಮೆರಿಕ ಪಡೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ಅಲ್ಲಿನ ವಾಯು ಪ್ರದೇಶವು ಅನಿಶ್ಚಿತತೆಯಲ್ಲಿದೆ. ಜರ್ಮನಿಯು ತನ್ನ ಪ್ರಜೆಗಳಿಗಾಗಿ ಮಸ್ಕತ್, ದೋಹಾ ಮತ್ತು ದುಬೈಗೆ ವಿಶೇಷ ಬಿಕ್ಕಟ್ಟು ನಿರ್ವಹಣಾ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ. ಯುಎಸ್ನ ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ. ಕ್ಷಪಣೆ ದಾಳಿಗಳು ಪರಸ್ಪರ ಮುಂದುವರಿದಿವೆ. ಈ ಯುದ್ಧಕ್ಕೆ ಸಂಬಂಧಿಸಿದಂತೆ ಇಂದಿನ 10 ಪ್ರಮುಖಾಂಶಗಳು ಇಲ್ಲಿವೆ.

ಸೋಮವಾರ ಮುಂದುವರಿದ ಯುದ್ಧದ 10 ಪ್ರಮುಖಾಂಶಗಳು ಇಲ್ಲಿವೆ
1. ಇರಾನ್-ಇಸ್ರೇಲ್ ಮತ್ತು ಅಮೆರಿಕ ಮಧ್ಯದ ಯುದ್ಧವು ಮೂರನೇ ದಿನವಾದ ಸೋಮವಾರವು (ಮಾರ್ಚ್ 2) ತೀವ್ರಗೊಂಡಿದೆ. ದಾಳಿ ಮುಂದುವರಿದಿದ್ದರಿಂದ ಬೇರೆ ಬೇರೆ ದೇಶಗಳ ಮೇಲೆ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಅನೇಕ ದೇಶಗಳ ಪ್ರಯಾಣಿಕರು ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿದ್ದಾರೆ. ಕರ್ನಾಟಕದವರನ್ನು ರಕ್ಷಿಸಲು ಸರ್ಕಾರ ಸಕಲ ಪ್ರಯತ್ನವನ್ನು ಈಗಾಗಲೇ ಆರಂಭಿಸಿದೆ.
2. ಇರಾನ್-ಇಸ್ರೇಲ್ ಮಧ್ಯದ ಉದ್ವಿಘ್ನತೆ ಸ್ಥಿತಿಯಿಂದಾಗಿ ಕನ್ನಡಿಗರು ಸೇರಿದಂತೆ ಅನೇಕ ಭಾರತೀಯರು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿದ್ದಾರೆ. ಅವರನ್ನು ಕರೆ ತರುವಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
3. ಮಧ್ಯಪ್ರಾಚ್ಯದಲ್ಲಿನ ಯುದ್ಧಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಅಮೆರಿಕಾದ ವಾಯು ನೆಲೆ ಹಾಗೂ ಇನ್ನಿತರ ಪ್ರದೇಶಗಳ ಮೇಲೆ ಇರಾನ್ ದಾಳಿ ಮಾಡಿದೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗುತ್ತಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಪ್ರಧಾನಿ ಮಾತುಕತೆ ನಡೆದಿದ್ದಾರೆ. ದಾಳಿಗಳನ್ನು ಖಂಡಿಸಿದ್ದಾರೆ. ಶತ್ರುತ್ವ ಕ್ರಮಗಳು ನಿಲ್ಲಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
4. ಇರಾನ್-ಇಸ್ರೇಲ್ ಮಧ್ಯದ ಸಂಘರ್ಷ ಹೆಚ್ಚಾಗಿದ್ದು, ಮಧ್ಯಪ್ರಾಚ್ಯವನ್ನು ತೈಲಕ್ಕಾಗಿ ಅವಲಂಬಿಸಿದ ದೇಶಗಳಿಗೆ ಆತಂಕ ಶುರುವಾಗಿದೆ. ವಿಶ್ವದ ರಾಜಕೀಯ, ಆರ್ಥಿಕ ಸ್ಥಿತಿ ಸ್ಥಿರವಾಗಿರದೇ ಅಲುಗಾಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
5. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಶುರುವಾದ ಉದ್ವಿಗ್ನತೆಯಿಂದಾಗಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಸೋಮವಾರ (ಮಾರ್ಚ್ 2) ಮಧ್ಯಪ್ರಾಚ್ಯದ ಆಯ್ದ ವಿಷಯಗಳಲ್ಲಿ ನಡೆಬೇಕಿದ್ದ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ.
6. ಇರಾನ್-ಇಸ್ರೇಲ್ ಹಾಗೂ ಅಮೆರಿಕ ವಾಯು ನೆಲೆಗಳ ಮೇಲಿನ ಇರಾನ್ ದಾಲಿಯು ಹೆಚ್ಚಾಗುತ್ತಲೇ ಇದೆ. ಇದು ಇಡಿ ಯೂರೋಪ್ ರಾಷ್ಟ್ರಗಳಿಗೆ ವಿಸ್ತರಣೆ ಆಗುವ ಆತಂಕ ಎದುರಾಗಿದೆ. ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟರೆ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಜಾಗತಿಕವಾಗಿ ಆತಂಕ ಶುರುವಾಗಿದೆ.
7. ಯುದ್ಧ ಭೀತಿಯಿಂದಾಗಿ ಕರ್ನಾಟಕದ ಬೆಂಗಳೂರಿನಿಂದ ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಸುಮಾರು 15 ವಿಮಾನಗಳ ಸಂಚಾರ ದಿಢೀರ್ ರದ್ದಾಗಿದೆ. ಇದರಿಂದ ಪ್ರಯಾಣಿಕರಿಗೆ ಅನಾಕೂಲ ಉಂಟಾಗಿದೆ.
8. ಇರಾನ್ ನಾಯಕ ಅಯತೂಲ್ಲಾ ಅಲಿ ಖಮೇನಿ ಅವರ ಸಾವಿಗೆ ಸೇಡು ತೀರಿಸಿಕೊಳ್ಳಬೇಕೆಂದು ಆ ದೇಶದ ಜನರು ಆಗ್ರಹಿಸುತ್ತಿದ್ದಾರೆ. ಖಮೇನಿ ಸ್ಥಾನಕ್ಕೆ ಬಂದ ಅಲಿರೇಜಾ ಅರಾಫಿ ಅವರಿಗೆ ಒತ್ತಾಯಿಸಿದ್ದಾರೆ.
9. ಇರಾನ್, ಇಸ್ರೇಲ್ ಯದ್ಧವು ಶುರುವಾಗಿದ್ದು, ಅಮೆರಿಕ ಸೇರಿ ಮೂರು ರಾಷ್ಟ್ರಗಳ ಜನರಲ್ಲಿ ಆತಂಕ ಶುರುವಾಗಿದೆ. ಯುದ್ಧ ಮುಂದುವರಿದಿದ್ದು, ಇರಾನ್ ಯುಎಸ್ ಯುದ್ಧ ವಿಮಾನವನ್ನು ನೆಲಕ್ಕುರುಳಿಸಿದೆ. ಒಟ್ಟಾರೆ ಈ ಬೆಳವಣಿಗೆಯಿಂದ ಇಂಡಿಗೋ, ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿದಿದೆ.
10. ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಲಿ ಮುಂದುವರಿದಿದೆ. ಇರಾನ್ ಸಹಿತ ತನ್ನ ನಾಯಕನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದು, ಇದರ ಮಧ್ಯ ದುಬೈನಿಂದ ಏರ್ಪೋರ್ಟ್ನಿಂದ ಒಂದಷ್ಟು ವಿಮಾನಗಳ ಕಾರ್ಯಾಚರಣೆ ಸೋಮವಾರ ಸಂಜೆ ಆರಂಭವಾಗಿದೆ. ಈ ಬೆಳವಣಿಗೆ ಅಲ್ಲಿ ಸಿಲುಕಿದ್ದ ಕನ್ನಡಿಗರು ಸೇರಿದಂತೆ ಅಪಾರ ಜನರಿಗೆ ನೆಮ್ಮದಿ ತಂದಿದೆ.
-

Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ!
-

ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ
-

ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು
-

Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು
-

Iran Vs Israel War: ಇರಾನ್ – ಇಸ್ರೇಲ್ ಯುದ್ಧ: ಯುರೋಪಿಗೆ ವಿಸ್ತರಿಸುವ ಆತಂಕ, ಯುಕೆ ಮೇಲೆ ಶಂಕಿತ ಡ್ರೋನ್ ದಾಳಿ
-

ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ
-

ಇರಾನ್-ಇಸ್ರೇಲ್ ಯುದ್ಧದ ಪರಿಣಾಮ: ಭಾರತದಲ್ಲಿ ಪೆಟ್ರೋಲ್-ಡೀಸೆಲ್, ಚಿನ್ನದ ಬೆಲೆ ಗಗನಕ್ಕೇರುವ ಭೀತಿ
-

ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕಾರಣವಾದ ಖಮೇನಿ ಯಾರು ಎಂಬದನ್ನು ತಿಳಿಯಿರಿ | Israel Military
-

ಕುವೈತ್ ಮೇಲೆ ಭೀಕರ ದಾಳಿ ನಡೆಸಿದ ಇರಾನ್ ಮಿಲಿಟರಿ, ಅಮೆರಿಕ ಸೇನಾ ನೆಲೆಗೆ ಹಾನಿ ಆರೋಪ | Israel Military
-

ಅಮೆರಿಕ ಯುದ್ಧನೌಕೆ ಮೇಲೆ ದಾಳಿ ಮಾಡಿದ ಇರಾನ್, ಮಧ್ಯಪ್ರಾಚ್ಯ ಸಮುದ್ರ ಭಾಗದಲ್ಲೂ ಹಿಂಸಾಚಾರ | Israel Military
-

ಪಾಕಿಸ್ತಾನದ ಅಮೆರಿಕ ರಾಯಭಾರ ಕಚೇರಿ ಮೇಲೆ ದಿಢೀರ್ ದಾಳಿ, ಹಿಂಸಾಚಾರದಲ್ಲಿ 8 ಸಾವು | Israel Military
-

ಖಮೇನಿ ಜಾಗಕ್ಕೆ ಹೊಸ ನಾಯಕನ ಆಯ್ಕೆ ಮಾಡಲು ಮಂಡಳಿ ರಚಿಸಿದ ಇರಾನ್ | Israel Military
-

ಸಿಂಹ ಘರ್ಜನೆಗೆ ಬೆಚ್ಚಿಬಿದ್ದ ಇರಾನ್, ಸೇನಾ ಕಾರ್ಯಾಚರಣೆಗೆ ವಿಶೇಷ ಹೆಸರು ಇಟ್ಟ ಇಸ್ರೇಲ್ | Operation Roaring Lion
-

ಇರಾನ್ ವಿರುದ್ಧ ಮತ್ತಷ್ಟು ಕಠಿಣ ನಿರ್ಧಾರಕ್ಕೆ ಮುಂದಾದ ಅಮೆರಿಕ, ಇನ್ನಷ್ಟು ಅಸ್ತ್ರ ರವಾನೆ ಸಾಧ್ಯತೆ | Israel Military
-

ಮಧ್ಯಪ್ರಾಚ್ಯದಲ್ಲಿ 40,000 ಸೈನಿಕರ ಬಲ ಹೊಂದಿದೆ ಅಮೆರಿಕ, ನೌಕೆಗಳಿಂದಲೂ ದಾಳಿಗೆ ಸಿದ್ಧತೆ | Israel Military
Disclaimer: This content was automatically imported from a third-party source via RSS feed. The original source is: https://kannada.oneindia.com/news/international/middle-east-war-day-3-us-jet-downed-cbse-exams-postponed-bengaluru-flights-cancel-highlights-445719.html. xn--babytilbehr-pgb.com does not claim ownership of this content. All rights remain with the original publisher.
