
Karnataka
oi-Shankrappa Parangi
ಹಾವೇರಿ: ಪ್ರತಿ ವರ್ಷದಂತೆ ಈ ವರ್ಷವು ರಾಜ್ಯಾದಾದ್ಯಂತ ಹೋಳಿ ಹಬ್ಬದ ಸಡಗರ ಮನೆ ಮಾಡಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜೀವಂತ ರತಿ ಮನ್ಮಥರ ಆಚರಣೆಯು ಯಶಸ್ವಿ 66 ವರ್ಷ ಪೂರೈಸಿದ್ದು, 2026ರಲ್ಲಿ 67ನೇ ವರ್ಷಕ್ಕೆ ಕಾಲಿಟ್ಟಿದೆ. ಇಂದು ಮಾರ್ಚ್ 3ರಂದು ಮಂಗಳವಾರ ಸಂಜೆ ಹೋಳಿ ಪ್ರಯುಕ್ತ ಜೀವಂತ ರತಿ-ಮನ್ಮಥರನ್ನು ಕೂರಿಸಿ ಆಚರಣೆ ಮಾಡಲಾಗುತ್ತಿದೆ. ಯಾರಾದರೂ ಈ ಜೋಡಿಯನ್ಉ ನಗಿಸಿದರೆ ಅವರು ಭರ್ಜರಿ ನಗದು ಬಹುಮಾನ ಗೆಲ್ಲಬಹುದಾಗಿದೆ.
ರಾಣಿಬೆನ್ನೂರಿನ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಮುಂದಿನ ರಾಮಲಿಂಗೇಶ್ವರ ಸೇವಾ ಸಮಿತಿ ಹಾಗೂ ಶಕ್ತಿ ಯುವಕ ಸಂಘದ ಆಶ್ರಯದಲ್ಲಿ ದಶಕಗಳಿಂದ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ರತಿ-ಮನ್ಮಥದ ಕಾಮಣ್ಣ ವೇಷದಲ್ಲಿ ಆಟೋ ಚಾಲಕ ಗದಿಗೆಪ್ಪ (47) ಹಾಗೂ ರತಿ ವೇಷದಲ್ಲಿ 38 ವಯಸ್ಸಿನ ಕುಮಾರ ಹಡಪದ ಅವರು ಪ್ರದರ್ಶನದಲ್ಲಿರುತ್ತಾರೆ. ಅವರನ್ನು ನಗಿಸುವ ಯತ್ನ ವರ್ಷಗಳಿಂದ ನಡೆಯುತ್ತಿದೆ. ಆದರೆ ಅವರ ಈವರೆಗೂ ನಕ್ಕಿಲ್ಲ ಎಂದು ಪ್ರಜಾವಾಣಿ ವರದಿ ಮಾಡಿದೆ.

ನಗಿಸಿದವರಿಗೆ 13 ಲಕ್ಷ ರೂ. ನಗದು ಬಹುಮಾನ
ಬಿಜೆಪಿ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವಿಧಾನಸೌಧದಲ್ಲಿ ಇದೇ ರತಿ ಮನ್ಮಥರ ಪ್ರದರ್ಶನ ನೀಡಲಾಗಿತ್ತು. ಆದರೆ ಆಗಲೂ ಯಾರೊಬ್ಬರು ಇವನರನ್ನು ನಗಿಸುವಲ್ಲಿ ಸಫಲರಾಗಲಿಲ್ಲ. ಇದೀಗ 2026 ರಲ್ಲಿ ಯಾರಾದರೂ ಇವರನ್ನು ನಗಿಸಿದರೆ ಅವರಿಗೆ 13 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.
ರತಿ ಮನ್ಮಥರ ಮುಂದೆ ಅನೇಕ ಮಂದಿ ಸಾಲುಗಟ್ಟಿ ನಿಂತು ನಾನಾ ಬಗೆಯಲ್ಲಿ ಅವರನ್ನು ನಗಿಸಲು ಪ್ರಯತ್ನಿಸುತ್ತಾರೆ. ಅಲ್ಲಿ ನೆರೆದವರು ನಗುತ್ತಾರೆಯೇ ವಿನಃ ಇವರು ಮಾತ್ರ ನಗುವುದಿಲ್ಲ. ಅವರನ್ನು ನಗಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಸ್ವೀಕರಿಸಿದವರು ಯಾರು ಗೆದ್ದಿಲ್ಲ. ಈ ಬಾರಿಯು ಅಂತಹ ಅವಕಾಶ ಇದೆ. ಜಾರಿ ಬೇದ, ಭಾವ ಮರೆತು, ಕುಟುಂಬಸ್ಥರು ಈ ರತಿ ಮನ್ಮಥರ ಪ್ರದರ್ಶನವನ್ನು ಕಣ್ತುಂಬಿಕೊಳ್ಳುತ್ತಾರೆ.
1958ರಿಂದ ಹೋಳಿ, ರತಿ-ಮನ್ಮಥರ ಕಾರ್ಯಕ್ರಮ
ಸ್ವಾತಂತ್ರ್ಯಾ ನಂತರ 1958ರಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ಹೋಳಿ ಹುಣ್ಣಿಮೆ ವೇಳೆ ರಾಣಿಬೆನ್ನೂರಿನ ರಾಮಲಿಂಗೇಶ್ವರ ದೇವಸ್ಥಾನದ ಬಳಿಕ ಕೇವಲ ಸ್ಥಳೀಯರು ಮಾತ್ರವಲ್ಲದೇ ಬೇರೆ ಬೇರೆ ಊರಿನ ಜನರು ಆಗಮಿಸುತ್ತಾರೆ. ಸಿಂಗಲ್ ಮೀನಿಂಗ್, ಡಬಲ್ ಮೀನಿಂಗ್ ಮಾತುಗಳು, ಚೇಷ್ಟೆ, ತಮಾಷೆ, ಹನಿಮೂನ್ ವಿಚಾರ ಸೇರಿ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿ ನಗಿಸಲು ಯತ್ನಿಸಿದರೂ ಸಹಿ ಇವರಿಬ್ಬರು ನಕ್ಕಿಲ್ಲ. ಈ ಬಾರಿಯು ನಗಿಸಲು ಅವಕಾಶ ಇದ್ದು, ನಗಿಸುವ ಅದೃಷ್ಟವಂತರಿಗೆ ಸಿಗಲಿದೆ 13 ಲಕ್ಷ ರೂಪಾಯಿ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/holi-2026-win-13-lakh-rupees-by-making-this-rati-manmatha-duo-laugh-in-ranibennur-haveri-445755.html. xn--babytilbehr-pgb.com does not claim ownership of this content. All rights remain with the original publisher.
