17 ವರ್ಷ ಬೇಕಾಯಿತು ಲೋಕಾಯುಕ್ತ ಪೊಲೀಸರಿಗೆ ಮತ್ತದೇ ದಕ್ಷತೆಯಿಂದ ಕರ್ತವ್ಯ ನಿಭಾಯಿಸಲು: ರವಿ ಕೃಷ್ಣರೆಡ್ಡಿ | 17 Years Needed for Lokayukta Police to Work Efficiently and Honestly, Says Ravi Krishna Reddy

Karnataka

oi-Hitesh Y

17 ವರ್ಷ ಬೇಕಾಯಿತು ಲೋಕಾಯುಕ್ತ ಪೊಲೀಸರಿಗೆ ಮತ್ತದೇ ದಕ್ಷತೆ, ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಕರ್ತವ್ಯ ನಿಭಾಯಿಸಲು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವ್ಯಾಧ್ಯಕ್ಷರಾದ ರವಿ ಕೃಷ್ಣರೆಡ್ಡಿ ಅವರು ಹೇಳಿದ್ದಾರೆ. ಈ ಬರಹವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರ ಪೂರ್ಣ ಬರಹ ಇಲ್ಲಿದೆ.

ಇದೇ 28-12-2025ರಂದು ರಾಜ್ಯದ ನೂರಾರು ಪೊಲೀಸ್ ಠಾಣೆಗಳಿಗೆ ದಿವಂಗತ ಮಧುಕರ್ ಶೆಟ್ಟರ ಭಾವಚಿತ್ರದೊಂದಿಗೆ ಭೇಟಿ ಕೊಟ್ಟಿದ್ದ KRS ಪಕ್ಷದ ಸೇನಾನಿಗಳು, ಮಧುಕರ್ ಶೆಟ್ಟಿ ಅವರ ಸ್ಫೂರ್ತಿಯಲ್ಲಿ ಕೆಲಸ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಬಹುಶಃ ಆ ನಮ್ಮ ಪ್ರಾಮಾಣಿಕ ಮನವಿಯ ಗಾಳಿ ಲೋಕಾಯುಕ್ತ ಪೊಲೀಸರ ತನಕ ಬೀಸಿರಬಹುದು.

17 Years Needed for Lokayukta Police to Work Efficiently and Honestly Says Ravi Krishna Reddy

ಅದಾದ ಎರಡು ತಿಂಗಳ ಒಳಗೆಯೇ, ಲೋಕಾಯುಕ್ತ ಪೊಲೀಸರೊಬ್ಬರು ಪರಮಭ್ರಷ್ಟ ಶಾಸಕರನ್ನು ಆತ ಲಂಚ ತೆಗೆದುಕೊಳ್ಳುವಾಗ trap ಮಾಡಿ ಬಂಧಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟ ಮತ್ತು ಅದಕ್ಷ ಲೋಕಾಯುಕ್ತ ಪೊಲೀಸರು ಮಾಡಿಕೊಂಡು ಬಂದಂತೆ ಲಂಚಕೋರರಿಗೆ ಮೊದಲೇ ಮಾಹಿತಿ ಕೊಟ್ಟು ಅವರನ್ನು ಬಚಾವ್ ಮಾಡುವ ಮಾಮೂಲಿ ದಂಧೆ/ಚಾಳಿಯನ್ನು ಕೈಬಿಟ್ಟು ಈ ಬಾರಿ ಪ್ರಾಮಾಣಿಕವಾಗಿ ಮತ್ತು ವೃತ್ತಿಪರತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಪ್ರಾಮಾಣಿಕ ಮತ್ತು ದೇಶಪ್ರೇಮಿ ಲೋಕಾಯುಕ್ತ ಪೊಲೀಸರಿಗೆ ಅಭಿನಂದನೆಗಳು.

ಇಂದು KRS ಪಕ್ಷ ಇಡೀ ಭ್ರಷ್ಟ ವ್ಯವಸ್ಥೆಯ ಮೇಲೆ ಅದು ತಕ್ಷಣವೇ ಬದಲಾಗಲು ಅಪಾರ ಒತ್ತಡವನ್ನು ಹೇರುತ್ತಿದೆ. ನಾವು ಆರು ವರ್ಷಗಳ ಹಿಂದೆಯೇ ರಾಜ್ಯದ ಪ್ರತಿ ಜಿಲ್ಲೆಗೂ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕೆಂದು ಒತ್ತಾಯಿಸಿದ್ದೆವು ಮತ್ತು ಅದನ್ನು ನಮ್ಮ 2023ರ ಪ್ರಣಾಳಿಕೆಯಲ್ಲಿಯೂ ಸೇರಿಸಿದ್ದೆವು. ಈಗ ಅದೇ ಮಾತನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಹೇಳುತ್ತಿದ್ದಾರೆ. ನಾವು ಪ್ರತಿಪಾದಿಸುತ್ತಾ ಬಂದ ಇಂತಹ ಅನೇಕವನ್ನು ಇತರೆ ಪಕ್ಷಗಳ ಮುಖಂಡರು ಈಗ ಹೇಳಲು ಆರಂಭಿಸಿದ್ದಾರೆ.

ರಾಜ್ಯದ so-called ಚಿಂತಕರು, ಹೋರಾಟಗಾರರು ಮತ್ತು ಪತ್ರಕರ್ತರು ನಿಜಕ್ಕೂ ಪ್ರಾಮಾಣಿಕರೂ, ಬದ್ಧತೆಯುಳ್ಳವರೂ ಆಗಿದ್ದರೆ ಇಷ್ಟೊತ್ತಿಗೆ ರಾಜ್ಯದ ಚಿತ್ರಣ ಸಕಾರಾತ್ಮಕವಾಗಿ ಬದಲಾಗಿರುತ್ತಿತ್ತು. ಆದರೆ ಈ ವರ್ಗ ಪರಮಭ್ರಷ್ಟವಾಗಿರುವ ಮತ್ತು ನೈತಿಕ ಅಧಃಪತನ ಕಂಡಿರುವ ಕಾರಣ ಅದು ನಿಧಾನವಾಗಿದೆ. ಆದರೆ ಕಾಲ ಹೀಗೆಯೇ ಇರುವುದಿಲ್ಲ. KRS ಪಕ್ಷದ ವಿಚಾರಗಳು ಜನರಿಗೆ ವೇಗವಾಗಿ ಮುಟ್ಟುತ್ತಿವೆ ಮತ್ತು ನಮಗೆ ಸಿಗುತ್ತಿರುವ ಬೆಂಬಲವೂ ದಿನೇದಿನೆ ಹೆಚ್ಚುತ್ತಿದೆ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

ಜನರು ಹೇಳಿದ್ದೇನು ?

ಇನ್ನು ಕರ್ನಾಟಕದಲ್ಲಿ ಲೋಕಾಯುಕ್ತ ಪೊಲೀಸರು ಇನ್ನಷ್ಟು ತೀವ್ರವಾಗಿ ಕಾರ್ಯಾಚರಣೆಗಳನ್ನು ನಡೆಸಬೇಕು. ಶಾಸಕರೇ ಈ ರೀತಿ ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂದರೆ ಅಧಿಕಾರಿಗಳು ಇನ್ನೆಷ್ಟು ಭ್ರಷ್ಟರಾಗಿರಬಹುದು. ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು, ಇದಕ್ಕೆ ಲೋಕಾಯುಕ್ತ ಪೊಲೀಸರು ಇನ್ನಷ್ಟು ಸಮರ್ಥವಾಗಿ ಕಾರ್ಯಾಚರಣೆ, ದಾಳಿಗಳನ್ನು ನಡೆಸಬೇಕು ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/17-years-needed-for-lokayukta-police-to-work-efficiently-and-honestly-says-ravi-krishna-reddy-444839.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo