200 ಸ್ಥಾನ ಗೆದ್ದು ಬೀಗಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ, ಇಲ್ಲಿದೆ ಸಂಪೂರ್ಣ ಮಾಹಿತಿ… Bangladesh Election | Bangladesh Election Result 2026 And Bangladesh Nationalist Party Is On Trend For Getting Majority

International

oi-Malathesha M

ಭಾರತದ ನೆರೆಯ ದೇಶ ಹಾಗೂ ಭಾರತದ ಸಹಾಯ ಪಡೆದು ಸ್ವತಂತ್ರಗೊಂಡ ಬಾಂಗ್ಲಾದೇಶದಲ್ಲಿ ಈಗ ಬಹುದೊಡ್ಡ ಬೆಳವಣಿಗೆ ನಡೆದಿದೆ. ಅಂದಹಾಗೆ ಬಾಂಗ್ಲಾದೇಶ ಸಂಸತ್ ಚುನಾವಣೆ ಫಲಿತಾಂಶ ಹೊರ ಬೀದ್ದಿದ್ದು, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಭರ್ಜರಿ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ. ಬಾಂಗ್ಲಾದ 300 ಸಂಸತ್ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ನಿಧನ ಹಿನ್ನೆಲೆ ಚುನಾವಣೆ ರದ್ದು ಮಾಡಲಾಗಿತ್ತು, ಆದರೆ ಇನ್ನುಳಿದ 299 ಕ್ಷೇತ್ರಗಳಿಗೆ ಮತದಾನವು ನಡೆದಿತ್ತು.

ಹೀಗೆ ಬಾಂಗ್ಲಾದೇಶದಲ್ಲಿ 299 ಕ್ಷೇತ್ರಗಳಿಗೆ, ಏಕಕಾಲಕ್ಕೇ ಫೆಬ್ರವರಿ 12 ಗುರುವಾರ ಸಂಸತ್ ಎಲೆಕ್ಷನ್ ನಡೆದಿತ್ತು. ಈ 299 ಕ್ಷೇತ್ರಗಳಲ್ಲಿ ಇದೀಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ 200ಕ್ಕೂ ಹೆಚ್ಚು ಸ್ಥಾನ ಗೆದ್ದು ಬೀಗಿದೆ. ಭಾರಿ ಕುತೂಹಲದ ಜೊತೆಗೆ ಹಿಂಸಾಚಾರದ ಭೀತಿಯನ್ನು ಕೂಡ ಬಾಂಗ್ಲಾದೇಶದ ಈ ಚುನಾವಣೆ ಹುಟ್ಟುಹಾಕಿತ್ತು, ಆದರೆ ಬಿಗಿ ಬಂದೋಬಸ್ತ್ ನಡುವೆ ಚುನಾವಣೆ ನಡೆಸಿದ ಕಾರಣಕ್ಕಾಗಿ ಅಹಿತಕರ ಘಟನೆಗಳು ನಡೆಯದಂತೆ ಮತದಾನ ಮುಗಿಸಲಾಗಿತ್ತು. ನಿನ್ನೆ ವೋಟಿಂಗ್ ಮುಗಿದು ಇಂದು ಫಲಿತಾಂಶ ಹೊರಬಿದ್ದಿದೆ, ಆ ಮೂಲಕ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ.

Bangladesh Election

ತಾರಿಕ್ ರಹ್ಮಾನ್‌ಗೆ ಪ್ರಧಾನಿ ಪಟ್ಟ?

ಬಾಂಗ್ಲಾದೇಶದ ಈ ಬಾರಿಯ ಚುನಾವಣೆ ಹಲವು ವಿಶೇಷತೆ ಒಳಗೊಂಡಿತ್ತು, ಪ್ರಮುಖವಾಗಿ ಸುಮಾರು 50 ಲಕ್ಷ ಯುವ ಮತದಾರರು ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದರು. ಇದೇ ಕಾರಣ ಬಾಂಗ್ಲಾ ಸಂಸತ್ ಚುನಾವಣೆ ಏಷ್ಯಾ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದಿತ್ತು, ಒಂದು ಕಡೆ ಕೋಮು ಗಲಭೆ ಹಾಗೂ ಇನ್ನೊಂದು ಕಡೆ ಆರ್ಥಿಕ ಸಂಕಷ್ಟಗಳ ಕಾರಣಕ್ಕೆ ಬಾಂಗ್ಲಾದೇಶ ಗೆಲ್ಲುವ ಪಕ್ಷ ಯಾವುದು? ಎಂಬ ಚರ್ಚೆ ಜೋರಾಗಿತ್ತು. ಇದೀಗ ಅದಕ್ಕೆಲ್ಲಾ ಉತ್ತರ ಸಿಕ್ಕಿದ್ದು, 200ಕ್ಕೂ ಹೆಚ್ಚು ಸ್ಥಾನ ಗೆದ್ದಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಕಡೆಯಿಂದಲೇ ಹೊಸ ಪ್ರಧಾನಿ ಆಯ್ಕೆ ಗ್ಯಾರಂಟಿ ಆಗಿದೆ.

291 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು

ಈ ನಡುವೆ ಬಿಎನ್‌ಪಿ ಪಕ್ಷದ ತಾರಿಕ್ ರಹ್ಮಾನ್‌ಗೆ ಪ್ರಧಾನಿ ಪಟ್ಟ ಸಿಗುವ ನಿರೀಕ್ಷೆ ಇದ್ದು, ಭಾರತದ ಜೊತೆ ತಾರಿಕ್ ರಹ್ಮಾನ್ ಸಂಬಂಧ ಕೂಡ ಉತ್ತಮವಾಗಿದೆ. ಎದುರಾಳಿ ಅಭ್ಯರ್ಥಿಗಳನ್ನ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಭ್ಯರ್ಥಿಗಳು ಸುಲಭವಾಗಿ ಎದುರಿಸಿ ಗೆದ್ದಿದ್ದಾರೆ, ಹೀಗಾಗಿ ಬಾಂಗ್ಲಾ ಮತದಾರ ಸಂಪೂರ್ಣ ಬೆಂಬಲವನ್ನು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ ನೀಡಿದ್ದಾನೆ ಎಂಬ ಚರ್ಚೆಗಳು ಈಗ ಶುರುವಾಗಿವೆ. 291 ಅಭ್ಯರ್ಥಿಗಳನ್ನು ಬಿಎನ್‌ಪಿ ಪಕ್ಷ ಈ ಚುನಾವಣೆಯಲ್ಲಿ ಕಣಕ್ಕೆ ಇಳಿಸಿತ್ತು, ಹೀಗೆ ಕಣಕ್ಕಿಳಿದ ಅಭ್ಯರ್ಥಿಗಳಲ್ಲಿ 200ಕ್ಕೂ ಹೆಚ್ಚು ಸ್ಥಾನ ಈಗಾಗಲೇ ಬಿಎನ್‌ಪಿ ಪಕ್ಷದ ಪಾಲಾಗಿದೆ. ಇನ್ನೂ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿ ಬಿಎನ್‌ಪಿ ನಾಯಕರು ಇದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/international/bangladesh-election-result-2026-and-bangladesh-nationalist-party-is-on-trend-for-getting-majority-443563.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo