2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್‌ಗಳ ಪಟ್ಟಿ | Karnataka 2nd PUC Toppers List 2025: Science, Commerce and Arts Stream Top Rankers Full List

Karnataka

oi-Pragathi S

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸಿದ್ದ 2025ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಒಟ್ಟಾರೆ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಟಾಪರ್ಸ್ ಪಟ್ಟಿಯಲ್ಲಿ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಮೂರೂ ವಿಭಾಗಗಳಲ್ಲಿ ಯಾರೆಲ್ಲಾ ಪ್ರಥಮ, ದ್ವಿತೀಯ ಮತ್ತು ತೃತೀಯ ರ್‍ಯಾಂಕ್ ಪಡೆದಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ವಿಜ್ಞಾನ ವಿಭಾಗದ ಟಾಪರ್ಸ್

ವಿಜ್ಞಾನ ವಿಭಾಗದಲ್ಲಿ ಬಾರಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದಿದೆ. ದಕ್ಷಿಣ ಕನ್ನಡದ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಅಮೂಲ್ಯ ಕಾಮತ್ ಹಾಗೂ ದೀಕ್ಷಾ. ಆರ್ ಅವರು ತಲಾ 600ಕ್ಕೆ 599 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.

PUC

ಪ್ರಥಮ ಸ್ಥಾನ: ಅಮೂಲ್ಯ ಕಾಮತ್ ಮತ್ತು ದೀಕ್ಷಾ ಆರ್ (599/600)

ದ್ವಿತೀಯ ಸ್ಥಾನ: ಬಿಂದು ನವಲೆ, ರಾಜಾ ಯದು ವಂಶಿ ಯಾದವ್ ಮತ್ತು ವಿಜೇತ್ ಜಿ. ಗೌಡ (598/600)

ತೃತೀಯ ಸ್ಥಾನ: ಅದಿತಿ ವೀರೇಶ್ ಅಂಗಡಿ, ಅಕ್ಷಯ್ ಎಂ. ಹೆಗಡೆ, ಕ್ಷಮಾ ಸಿ.ಪಿ, ಪ್ರಣತಿ ಎನ್.ಜೆ ಮತ್ತು ಪ್ರೇಕ್ಷಾ ಎಂ.ಎಸ್ (597/600)

ವಾಣಿಜ್ಯ ವಿಭಾಗದ ಟಾಪರ್ಸ್

ವಾಣಿಜ್ಯ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಅದ್ಭುತ ಸಾಧನೆ ತೋರಿದ್ದು, ದಕ್ಷಿಣ ಕನ್ನಡದ ಕೆನರಾ ಪಿಯು ಕಾಲೇಜಿನ ದೀಪಾಶ್ರೀ ಎಸ್. ಅವರು 599 ಅಂಕಗಳೊಂದಿಗೆ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ.

ಪ್ರಥಮ ಸ್ಥಾನ: ದೀಪಾಶ್ರೀ ಎಸ್ (599/600)

ದ್ವಿತೀಯ ಸ್ಥಾನ: ತೇಜಸ್ವಿನಿ ಎಂ.ಎ (598/600)

ತೃತೀಯ ಸ್ಥಾನ: ಹೆಚ್. ಬಿ. ಭಾರ್ಗವಿ, ಪ್ರಣಯ್ ಬಾಳಾಸಾಹೇಬ್ ಅಳಗೌಡ, ಪ್ರತೀಕ್ಷಾ ಪಿ, ತನ್ವಿ ಹೇಮಂತ್ ಪಾಟೀಲ್ ಹಾಗೂ ವೈಷ್ಣವಿ ಪ್ರಸಾದ್ ಭಟ್ (597/600)

ಕಲಾ ವಿಭಾಗದ ಟಾಪರ್ಸ್

ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಎಲ್. ಆರ್. ಸಂಜನಾ ಬಾಯಿ ಅವರು 597 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರಥಮ ಸ್ಥಾನ: ಎಲ್. ಆರ್. ಸಂಜನಾ ಬಾಯಿ (597/600)

ದ್ವಿತೀಯ ಸ್ಥಾನ: ಕೆ. ನಿರ್ಮಲಾ (596/600)

ತೃತೀಯ ಸ್ಥಾನ: ಕೆ. ಆರ್. ಶ್ರೀ ಜಯ ದರ್ಶಿನಿ (595/600)

2025ರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಗಮನಿಸಿದರೆ, ಎಲ್ಲಾ ಮೂರು ವಿಭಾಗಗಳಲ್ಲಿಯೂ ಪ್ರಥಮ ಸ್ಥಾನವನ್ನು ವಿದ್ಯಾರ್ಥಿನಿಯರೇ ತಮ್ಮದಾಗಿಸಿಕೊಂಡಿರುವುದು ವಿಶೇಷ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಶೇ. 82.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇ. 76.07 ಮತ್ತು ಕಲಾ ವಿಭಾಗದಲ್ಲಿ ಶೇ. 53.29ರಷ್ಟು ತೇರ್ಗಡೆ ಪ್ರಮಾಣ ದಾಖಲಾಗಿದೆ. ಅಗ್ರ ಸ್ಥಾನ ಪಡೆದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ರಾಜ್ಯದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಠಿಣ ಪರಿಶ್ರಮ, ಸತತ ಅಧ್ಯಯನ ಮತ್ತು ಗುರಿಯೆಡೆಗಿನ ಅವರ ದೃಢ ನಿಶ್ಚಯ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. 2026ರಲ್ಲಿ ಯಾರೆಲ್ಲ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಮೊದಲು ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-2nd-puc-toppers-list-2025-science-commerce-and-arts-stream-top-rankers-full-list-449869.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo