209 ಸ್ಥಾನ ಗೆದ್ದು ಬೀಗಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ, ಪ್ರಧಾನಿ ಮೋದಿ ಅವರ ಮಹತ್ವದ ಸಂದೇಶ… Bangladesh Election | Bangladesh Election Result 2026 And This Is What PM Narendra Modi Said To The New PM Of Bangladesh

India

oi-Malathesha M

ಭಾರತ ಮತ್ತು ಬಾಂಗ್ಲಾದೇಶ ಮತ್ತೊಮ್ಮೆ ಒಟ್ಟಿಗೆ ಸಾಗುವ ಸಮಯ ಬಂದಂತೆ ಭಾಸವಾಗುತ್ತಿದೆ, ಈ ಮಾತು ಯಾಕಂದ್ರೆ ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬಾಂಧವ್ಯ ಹಾಳಾಗಿ ಹೋಗಿತ್ತು. ಅದರಲ್ಲೂ ಶೇಖ್ ಹಸೀನಾ ಅಧಿಕಾರ ಬಿಟ್ಟು ಕೆಳಗೆ ಇಳಿದು, ಭಾರತಕ್ಕೆ ಬಂದು ಆಶ್ರಯ ಪಡೆದ ನಂತರ ಎರಡೂ ದೇಶಗಳ ಸಂಬಂಧ ಹಾಳು ಮಾಡಲು ಅನೇಕರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಬಾಂಗ್ಲಾದೇಶ 2 ವರ್ಷದ ಹಿಂದೆ ಹೊತ್ತಿ ಉರಿದಿತ್ತು, 2024 ಆಗಸ್ಟ್ ತಿಂಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗಿ ಶೇಖ್ ಹಸೀನಾ ಅಧಿಕಾರ ತ್ಯಾಗ ಆಗಿತ್ತು. ಅಂದಿನಿಂದ ಕೂಡ ಭಾರತ ಮತ್ತು ಬಾಂಗ್ಲಾ ಸ್ನೇಹ ಹಾಳಾಗುತ್ತ ಬಂದಿತ್ತು. ಆದರೆ ಇದೀಗ ಬದಲಾವಣೆ ಶುರುವಾದಂತೆ ಕಾಣುತ್ತಿದ್ದು, ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಈ ಬಗ್ಗೆ ಸಂದೇಶ ರವಾನಿಸಿದ್ದಾರೆ.

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಎಂದರೆ ಬಿಎನ್‌ಪಿ ಪಕ್ಷದ ತಾರಿಕ್ ರಹ್ಮಾನ್‌ಗೆ ಬಾಂಗ್ಲಾ ಪ್ರಧಾನಿ ಪಟ್ಟ ಸಿಗುವ ನಿರೀಕ್ಷೆ ಇದ್ದು, ಭಾರತದ ಜೊತೆಗೆ ತಾರಿಕ್ ರಹ್ಮಾನ್ ಸಂಬಂಧ ಕೂಡ ಉತ್ತಮವಾಗಿದೆ. 291 ಅಭ್ಯರ್ಥಿಗಳನ್ನು ಬಿಎನ್‌ಪಿ ಪಕ್ಷ ಈ ಚುನಾವಣೆಯಲ್ಲಿ ಕಣಕ್ಕೆ ಇಳಿಸಿತ್ತು, ಈ ಪೈಕಿ ಈಗಾಗಲೇ 209 ಸ್ಥಾನಗಳಲ್ಲಿ ಬಿಎನ್‌ಪಿ ಪಕ್ಷ ಗೆದ್ದು ಬೀಗಿದೆ. ಹೀಗೆ 2 ವರ್ಷಗಳ ತಿಕ್ಕಾಟದ ನಂತರ ಬಾಂಗ್ಲಾದ ನೆಲದಲ್ಲಿ ಚುನಾವಣೆ ನಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಸಮಯದಲ್ಲೇ ಭಾರತದ ಪ್ರಧಾನಿ ಮೋದಿ ಅವರು ನೇರವಾಗಿ ನೆರೆ ದೇಶದ ರಾಜಕೀಯ ನಾಯಕನಿಗೆ ಕರೆ ಮಾಡಿ ಶುಭ ಕೋರಿದ್ದಾರೆ.

Bangladesh Election

ಭಾರತ ಮತ್ತು ಬಾಂಗ್ಲಾ ಮತ್ತೆ ದೋಸ್ತಿ?

ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಒಂದಾಗಿರುವ ಭಾರತಕ್ಕೆ ಈಗ ಬಾಂಗ್ಲಾದೇಶದ ಸ್ನೇಹ ಅನಿವಾರ್ಯ ಅಲ್ಲ, ಆದರೆ ಭವಿಷ್ಯದ ದೃಷ್ಟಿಯಿಂದ ಎರಡೂ ದೇಶಗಳು ಒಟ್ಟಿಗೆ ಸಾಗಬೇಕಿದೆ. ಇಂತಹ ಸಮಯ ಹಾಗೂ ಸಂದರ್ಭವನ್ನು ಕೇಂದ್ರದ ಎನ್‌ಡಿಎ ಸರ್ಕಾರ ಅಳೆದು & ತೂಗಿ ಲೆಕ್ಕಾಚಾರ ಹಾಕುತ್ತಾ ಇದೆ. ಹೀಗಿದ್ದಾಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪೂರ್ಣ ಬಹುಮತ ಪಡೆದು, ಬಾಂಗ್ಲಾದಲ್ಲಿ ಸರ್ಕಾರ ರಚಿಸುವ ಸುದ್ದಿ ಸಿಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ಬಿಎನ್‌ಪಿ ಪಕ್ಷದ ನಾಯಕನಿಗೆ ಕರೆ ಮಾಡಿ ಶುಭ ಕೋರಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/bangladesh-election-result-2026-and-this-is-what-pm-narendra-modi-said-to-the-new-pm-of-bangladesh-443621.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo