
Karnataka
-Shankrappa Parangi
ಬೆಂಗಳೂರು: ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ. ಇದರ ಬೆನ್ನಲ್ಲೆ ಸದ್ಯ ನಾಗರಿಕರಿಗೆ ಸಿಗಬೇಕಿದ್ದ ಎರಡು ಡಜನ್ ಸಿಎ ನಿವೇಶನಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಈ ವಿಷಯ ವ್ಯಾಪಕವಾಗಿ ಚರ್ಚೆ ಆಗುತ್ತಿದ್ದು, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸರ್ಕಾರ ಸಾರ್ವಜನಿಕ ಆಸ್ತಿ ಲೂಟಿ ಹೊಡೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಸಚಿವರು ಎಕ್ಸ್ ಪೋಸ್ಟ್ ಮಾಡಿ ರಾಜ್ಯ ಕಾಂಗ್ರೆಸ್ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದ ಜನರ ಸಾಮಾಜಿಕ ಸೌಲಭ್ಯಗಳಿಗೆ ಸಿಗಬೇಕಿದ್ದ ಆಸ್ತಿಗಳನ್ನು ಕಾಂಗ್ರೆಸ್ ಪಕ್ಷ ತನ್ನ ಪಿತ್ರಾರ್ಜಿತ ಆಸ್ತಿ ಎಂಬಂತೆ ಬಳಸಿಕೊಳ್ಳುತ್ತಿದೆ. ಬಡವರ ಹಿತ ಕಾಯುವ ಬದಲು ಕಾಂಗ್ರೆಸ್ ತನ್ನ ‘ಪಕ್ಷದ ಹಿತ’ಕ್ಕೆ ಸಾರ್ವಜನಿಕ ಆಸ್ತಿ ಲೂಟಿ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ನಾಗರಿಕರಿಗೆ ಮೂಲಸೌಕರ್ಯ ಒದಗಿಸಬೇಕಾದ ಸುಮಾರು 24ಕ್ಕೂ ಹೆಚ್ಚು ನಾಗರಿಕ ಸೌಲಭ್ಯ (CA) ನಿವೇಶನಗಳನ್ನು ಕಡಿಮೆ ಬೆಲೆಗೆ ತನ್ನ ಪಕ್ಷದ ಕಚೇರಿ ನಿರ್ಮಾಣಕ್ಕೆ ಹಂಚಿಕೆ ಮಾಡಿಕೊಂಡಿರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಪರಮಾವಧಿ. ಈ ನಿವೇಷನಗಳು ಸಾರ್ವಜನಿಕ ಉದ್ಯಾನವನ, ಗ್ರಂಥಾಲಯ ಅಥವಾ ಆಸ್ಪತ್ರೆಗಳಿಗೆ ಬಳಕೆಯಾಗಬೇಕಿತ್ತು. ಈ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಗಳು ನಾಗರಿಕೆ ಸೌಲಭ್ಯಕ್ಕೆ ಮಾತ್ರವೇ ಬಳಕೆ ಆಗಬೇಕಿತ್ತ. ಅವೀಗ ಕಾಂಗ್ರೆಸ್ ಭವನಗಳಿಗೆ ಮೀಸಲಿಟ್ಟಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹವಲ್ಲವೇ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಬಲವರ್ಧನೆಗೆ ಸಾರ್ವಜನಿಕ ಆಸ್ತಿ ಬೇಕೆ?
ಒಂದೆಡೆ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ ಎನ್ನುವ ಈ ಸರ್ಕಾರ, ಇನ್ನೊಂದೆಡೆ ತನ್ನ ಪಕ್ಷದ ಬಲವರ್ಧನೆಗೆ ಸಾರ್ವಜನಿಕ ಆಸ್ತಿಯನ್ನು ಕಬಳಿಸುತ್ತಿದೆ. ಲೂಟಿ ಹೊಡೆಯುವುದೇ ಕಾಂಗ್ರೆಸ್‌ನ ಮೂಲ ಸಿದ್ಧಾಂತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಅಕ್ರಮ ಹಂಚಿಕೆಯನ್ನು ಕೂಡಲೇ ಹಿಂಪಡೆಯಬೇಕು, ಇಲ್ಲದಿದ್ದರೆ ಬಿಜೆಪಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕಾಂಗ್ರೆಸ್‌ಗೆ 24 ನಿವೇಶನ ಹಂಚಿಕೆ, ಆಗಿದ್ದೇನು?
ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸೇರಿದ್ದ ನಾಗರಿಕರ ಸೌಲಭ್ಯಗಳಿಗೆ ಬಳಕೆ ಆಗಬೇಕಿದ್ದ ಎರಡು ಡಜನ್ ಸಿಎ ನಿವೇಶನಗಳನ್ನು ಕಾಂಗ್ರೆಸ್‌ನ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಚೇರಿಗಳ ಸ್ಥಾಪನೆಗೆ ಬಳಕೆ ಆಗುತ್ತಿದೆ. ಈ ಸಂಬಂಧ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಆಸ್ತಿಗಳನ್ನು ನೀಡಲಾಗಿದೆ ಎಂದು ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯಾದ್ಯಂತ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆ ನಿವೇಶನಗಳಲ್ಲಿ ಪಕ್ಷ ಕಚೇರಿ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಕಾಂಗ್ರೆಸ್ ನಡೆ ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
24 ನಿವೇಶನಗಳಲ್ಲಿ ಪುರಸಭೆ ಆಡಳಿತ ಇಲಾಖೆಯು 5 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 12 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಅದಾದ ಬಳಿಕ ಡಿಸಿಎಂ ಅವರ ಅಧೀನದಲ್ಲಿರುವ ನಗರಾಭಿವೃದ್ಧಿ ಇಲಾಖೆ ವತಿಯಿಂದ 12 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಇನ್ನೂ 12 ನಿವೇಶನಗಳನ್ನು ಹಂಚಿಕೆ ಮಾಡಿದೆ. ಈ ಮೂಲಕ ಒಟ್ಟು 24 ಸೈಟುಗಳು ಕಾಂಗ್ರೆಸ್ ತನ್ನ ಸ್ವಂತಕ್ಕೆ ಬಳಸಲು ಮುಂದಾಗಿದ್ದು ಸಾರ್ವಜನಿಕವಾಗಿ ಪ್ರಶ್ನೆ ಹುಟ್ಟುಹಾಕಿದೆ. ರಾಜ್ಯಾದ್ಯಂತ ಒಟ್ಟು 40 ಕೋಟಿ ರೂ. ಅಧಿಕ ಮೌಲ್ಯದ ಅಧಿಕ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಬಿಜೆಪಿಯಿಂದ ಬಂದ ಟೀಕೆಗಳಿಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
-

ಶಿವರಾತ್ರಿಯಂದೇ ಶಿವಲಿಂಗ, ನಂದಿಗೆ ಅವಮಾನ: ನಿಧಿ ಕಳ್ಳರ ವಿರುದ್ಧ ಸಿಡಿದೆದ್ದ ಸಿಂಗಟಾಲೂರು ಗ್ರಾಮಸ್ಥರು, ಬಿಜೆಪಿ ಟೀಕೆ
-

Congress vs Bjp: ಬಿಜೆಪಿಯ 3 ಸುಳ್ಳುಗಳಿವು: ಸುಳ್ಳು ಸುದ್ದಿಗಳ ಫ್ಯಾಕ್ಟರಿಯಾಗಿರುವ ಬಿಜೆಪಿಯವರೇ: ಕಾಂಗ್ರೆಸ್ ಟೀಕೆ
-

ಕಾಂಗ್ರೆಸ್ ಸರ್ಕಾರದ್ದು 1000 ದಿನಗಳ ದುರಾಡಳಿತ: ಕನ್ನಡಿಗರಿಗೆ ಸಿಕ್ಕಿದ್ದು ‘ಚಿಪ್ಪು’, 16 ಅಂಶಗಳ ಪಟ್ಟಿ ಕೊಟ್ಟ ವಿ.ಸೋಮಣ್ಣ
-

‘ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ: ಸಚಿವರ ಹೇಳಿಕೆಗೆ ಡಿಕೆ ಸುರೇಶ್ ಟಾಂಗ್
-

Priyank Kharge biography: ಚಿತ್ತಾಪುರದಿಂದ ಸಚಿವ ಸಂಪುಟದವರೆಗೆ: ಪ್ರಿಯಾಂಕ್ ಖರ್ಗೆ ರಾಜಕೀಯ ಪಯಣ, ಕುಟುಂಬ, ಒಟ್ಟು ಆಸ್ತಿ ವಿವರ
-

Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ – ಬೆಳ್ಳಿ ಬೆಲೆ
-

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ
-

T20 2026: ಭಾರತದ ವಿಜಯಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಾಚರಣೆ, ವಿಡಿಯೋ ವೈರಲ್ Viral Video
-

Horoscope February 16: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ದಿನ ಭವಿಷ್ಯ ಇಲ್ಲಿದೆ
-

ಫೆಬ್ರವರಿ 17 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
-

Karnataka Weather: ಕರ್ನಾಟಕದಲ್ಲಿ ಮುಂದಿನ 3 ದಿನ ಹೇಗಿರಲಿದೆ ಹವಾಮಾನ, ಇಲ್ಲಿದೆ ಮಾಹಿತಿ
-

ಕರ್ನಾಟಕದ ಕರಾವಳಿಗೆ ಬರಲು ಐಟಿ – ಬಿಟಿ ಕಂಪನಿಗಳ ಹಿಂದೇಟು ಚರ್ಚೆ, ಸೋಷಿಯಲ್ ಮೀಡಿಯಾದಲ್ಲಿ ವಾಕ್ಸಮರ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/congress-24-ca-sites-pralhad-joshi-slams-dk-shivakumar-over-allotting-public-land-for-congress-bhav-011-444269.html. xn--babytilbehr-pgb.com does not claim ownership of this content. All rights remain with the original publisher.
