
Karnataka
oi-Shankrappa Parangi
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯ 2025-2026 ಫಲಿತಾಂಶ ಬಿಡುಗಡೆ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು ಶೇ.86ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ 2024-25ರಲ್ಲಿ 73,45ರಷ್ಟು ಫಲಿತಾಂಶ ಬಂದಿತ್ತು. ಇದರ ಬೆನ್ನಲ್ಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿದ್ದು ಮಹತ್ವದ ಮಾಹಿತಿ ನೀಡಿದ್ದಾರೆ. ಅವರು ಆರಂಭದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿ ತೇಗಡೆಯಾದ ಎಲ್ಲ ಪಿಯುಸಿ ವಿದ್ಯಾರ್ಥಿಗಳಿಗೆ ಅವರು ಶುಭ ಕೋರಿದರು.
ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದರೆ 2026ರಲ್ಲಿ ಪಿಯುಸಿ ಫಲಿತಾಂಶದಲ್ಲಿ ಶೇ. 13.0ರಷ್ಟು ಪ್ರಗತಿ ಆಗಿದೆ. ಕಳೆದ ಬಾರಿ 1.69, 366 ವಿದ್ಯಾರ್ಥಿಗಳು ಅನುತ್ತೀರ್ಣವಾಗಿದ್ದರು, ಈ ಬಾರಿ
85,000 ಮಂದಿ ತೇರ್ಗಡೆ ಆಗಿಲ್ಲ. ಅನುತ್ತೀರ್ಣ ಪ್ರಮಾಣ 15ರಷ್ಟು ಇಳಿಕೆ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಶಿಕ್ಷಣ ಎಲ್ಲ ಹಂತಗಳಲ್ಲೂ ಪ್ರಗತಿ: ಪ್ರಮುಖ ಅಂಶಗಳು ಹೀಗಿವೆ
* ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 76% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ.
* ಗ್ರಾಮಾಂತರದಲ್ಲಿ 81,51ರಷ್ಟು ಮಂದಿ ಉತ್ತೀರ್ಣವಾಗಿದ್ದು, ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿ ಉತ್ತೀರ್ಣವಾಗಿದ್ದಾರೆ.
ದ್ವಿತೀಯ PUC ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
* ರಾಜ್ಯದಲ್ಲಿ ಶೇಕಡಾ 17.8ರಷ್ಟು ಗ್ರಾಮೀಣ ಭಾಗದಲ್ಲಿ ಹಾಗೂ 7 ರಷ್ಟು ನಗರದಲ್ಲಿ ಪ್ರದೇಶಗಳಲ್ಲಿ ಕಲಿಕೆಯಲ್ಲಿ
ಮುಂದಿದ್ದಾರೆ.
* ಈ ವರ್ಷ ವಿದ್ಯಾರ್ಥಿನಿಯರು ಪಿಯುಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ವಿಶೇಷವೆಂದರೆ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಏರಿಕೆ ಆಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
* 1,75,529 ಮಂದಿ ಡಿಸ್ಟಿಂಗ್‌ಷನ್ ತೆಗೆದುಕೊಂಡಿದ್ದಾರೆ.
* ಸರ್ಕಾರಿ ಶಾಲೆಗಳಲ್ಲಿ 7 ಸಾವಿರ ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಬಂದಿದ್ದು, ಈ ಬಾರಿ 17 ಸಾವಿರ ಮಂದಿ ಡಿಸ್ಟಿಂಗ್‌ಷನ್ ಬಂದಿದ್ದಾರೆ.
ಕಲ್ಯಾಣ ಕರ್ಣಾಟಕ 18ರಷ್ಟು ಬೆಳವಣಿಗೆ
ಕಳೆದ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 61% ವಿದ್ಯಾರ್ಥಿಗಳು ಪಿಯುಸಿಯಲ್ಲಿ ಉತ್ತೀರ್ಣವಾಗಿದ್ದರೆ, ಈ ಬಾರಿ (2026) 79ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಂದರೆ ಒಟ್ಟು ತೇರ್ಗಡೆಯಲ್ಲಿ 18ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಚಿವರು ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕ, ಸರ್ಕಾರಿ ಶಾಲೆ, ಎಸ್‌ಸಿ ಎಸ್‌ಟಿ, ಇತರೆ ವರ್ಗದ ಮಕ್ಕಳ ತೆರ್ಗಡೆ, ವರ್ಷದಿಂದ ವರ್ಷಕ್ಕೆ ಆದ ಪ್ರಗತಿ ಕುರಿತು ವಿವರಿಸಿದರು. ಇದಕ್ಕೆ ಕಾರಣಿಕರ್ತರಾದ ಕಾಲೇಜು ಶಿಕ್ಷಕರು ಆಡಳಿತ ಮಂಡಳಿ ಕರ್ತವ್ಯಕ್ಕೆ ಧನ್ಯವಾದ ತಿಳಿಸಿದರು. ಅನುತ್ತೀರ್ಣರಾದವರು ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಅವಕಾಶ ಇದೆ ಎಂದು ವಿವರಿಸಿದರು.
ಫಲಿತಾಂಶ ನೋಡಲು ಏನು ಮಾಡಬೇಕು?
* ಮೌಲ್ಯಮಾಪಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 68 ಮೌಲ್ಯಮಾಪನ ಕೇಂದ್ರಗಳಲ್ಲಿ ದಿನಾಂಕ 17-03-2026 ರಿಂದ 02-04-2026 ರವರೆಗೆ 27739 ಮೌಲ್ಯಮಾಪಕರಿಂದ ನಡೆಸಲಾಯಿತು.
* ವಿದ್ಯಾರ್ಥಿಗಳು 20260 ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ತಿಳಿಯಲು
https://karresults.nic.in KarnatakaOne ಮತ್ತು ಸಂಯೋಜನೆ ನಮೂದಿಸಿ ಪಡೆಯಬಹುದು. KSEABಯ ಪಿಯು ಪರೀಕ್ಷಾ ಪೋರ್ಟಲ್‌ನ ಪ್ರಾಂಶುಪಾಲರ ಲಾಗಿನ್ ನಲ್ಲಿ ಫಲಿತಾಂಶ ಪಟ್ಟಿಯನ್ನು 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ ಲಭ್ಯಗೊಳಿಸಲಾಗಿದೆ.
* ದ್ವಿತೀಯ ಪಿಯುಸಿ ಅಂಕಪಟ್ಟಿಯು ಎನ್‌ಎಡಿ ಡಿಜಿಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ
https://www.digilocker.gov.in/ ಎಂದು ಅವರು ಮಾಹಿತಿ ನೀಡಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-puc-results-2026-madhu-bangarappa-press-meet-highlights-key-announcements-updates-449919.html. xn--babytilbehr-pgb.com does not claim ownership of this content. All rights remain with the original publisher.
