30 ಬಿಲಿಯನ್ ಡಾಲರ್ ಒಪ್ಪಂದ, ಬ್ರೆಜಿಲ್ ಜೊತೆ ಸೇರಿ ಚೀನಾಗೆ ಶಾಕ್ ಕೊಟ್ಟ ಭಾರತ… India And Brazil | India And Brazil Targets To Reach The 30 Billion Dollar Trade By The 2030 With Mineral Pact

India

-Malathesha M

ಭಾರತ ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಬೆಳೆಯುತ್ತಾ ಇದ್ದು, ಭಾರತದ ಈ ಬೆಳವಣಿಗೆ ಈಗ ಶತ್ರು ದೇಶಗಳ ಕಣ್ಣು ಕುಕ್ಕುವಂತೆ ಮಾಡಿದೆ. ಇದೇ ಕಾರಣಕ್ಕೆ ಭಾರತದ ಆರ್ಥಿಕತೆ ಬೆಳವಣಿಗೆ ತಡೆಯಲು ತಮ್ಮ ಕೈಲಾದ ಎಲ್ಲಾ ಕುತಂತ್ರ ಮಾಡುತ್ತಿದ್ದಾರೆ. ಹೆಚ್ಚಿನ ತೆರಿಗೆ ಹೇರಿಕೆ & ದ್ವಿಪಕ್ಷೀಯ ಮಾತುಕತೆಗಳಲ್ಲಿ ಬದಲಾವಣೆ ಸೇರಿದಂತೆ, ಭಾರತಕ್ಕೆ ಅಗತ್ಯ ಇರುವ ಕಚ್ಚಾ ವಸ್ತುಗಳ ಪೂರೈಕೆಯ ವಿಚಾರದಲ್ಲೂ ಹಲವು ರೀತಿ ಅಡ್ಡಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲೇ ಭಾರತದ ಕಡೆಯಿಂದ ಕೂಡ ಗಟ್ಟಿ ನಿರ್ಧಾರ ಒಂದನ್ನ ಕೈಗೊಳ್ಳಲಾಗಿದ್ದು, ಚೀನಾ ಮೇಲಿನ ಅವಲಂಬನೆಗೆ ಬ್ರೇಕ್ ಬೀಳುವುದು ಗ್ಯಾರಂಟಿ ಆಗಿದೆ. ಈ ಕಾರಣಕ್ಕೆ ಬ್ರೆಜಿಲ್ ಜೊತೆಗೆ ಭಾರತ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಬ್ರೆಜಿಲ್ ಕೂಡ ಭಾರತದ ರೀತಿಯಲ್ಲೇ ಬೃಹತ್ ಆರ್ಥಿಕ ದೇಶವಾಗಲು ಮುಂದೆ ನುಗ್ಗುತ್ತಿದ್ದು, ಇಂತಹ ಸಮಯದಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳ ನಡುವೆ ಸಮನ್ವಯತೆ ಕೂಡ ಅತ್ಯಗತ್ಯ ಎನ್ನಬಹುದು. ಭಾರತ ಮತ್ತು ಬ್ರೆಜಿಲ್ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು 2030ರ ಒಳಗೆ 30 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮುಟ್ಟಿಸುವ ಗುರಿ ಹಾಕಿಕೊಂಡು ಇದೀಗ ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಚೀನಾಗೆ ಇದು ಡೊಡ್ಡ ಆಘಾತವನ್ನೇ ನೀಡಿದೆ ಎಂದು ಹೇಳಬಹುದು, ಯಾಕೆ ಅಂದ್ರೆ ಭಾರತ ಪ್ರಮುಖ ಖನಿಜ ಸಂಪನ್ಮೂಲಗಳು ಹಾಗೂ ಉಕ್ಕು ಸರಬರಾಜು ಸರಪಳಿಯಲ್ಲಿ ಚೀನಾದ ಮೇಲೆ ಸಾಕಷ್ಟು ಅವಲಂಬಿತವಾಗಿದೆ. ಆದರೆ ಇದೀಗ ಅದನ್ನು ಮೀರಿ ಹೊರಬರಲು ಬ್ರೆಜಿಲ್ ಜೊತೆ ಮಹತ್ವದ ಒಪ್ಪಂದಕ್ಕೆ ಮುಂದಾಗಿರುವುದು ಭಾರಿ ಕುತೂಹಲ ಕೆರಳಿಸಿದೆ.

India And Brazil

ಭಾರತಕ್ಕೆ ಭರ್ಜರಿ ಲಾಭ ಗ್ಯಾರಂಟಿ

ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಬ್ರೆಜಿಲ್ ಅಧ್ಯಕ್ಷ ಲುಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಈ ಮಹತ್ವದ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿದ್ದಾರೆ. ಜಾಗತಿಕವಾಗಿ ಯುದ್ಧ ಮತ್ತು ಅಶಾಂತಿಯ ನಡುವೆ ಭಾರತ ಹಾಗೂ ಬ್ರೆಜಿಲ್ ಈಗ ಭಾರಿ ಮಹತ್ವದ ಹೆಜ್ಜೆ ಇರಿಸಿವೆ. ಎರಡು ಅಭಿವೃದ್ಧಿಯ ಕಡೆ ಸಾಗುತ್ತಿರುವ ದೇಶಗಳು ಇದೀಗ ಕೈಜೋಡಿಸಿ ನಿಂತಿದ್ದು, ಭಾರತ ಮತ್ತು ಬ್ರೆಜಿಲ್ ಒಪ್ಪಂದ ದೊಡ್ಡ ಗೇಮ್ ಚೇಂಜರ್ ಆಗಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಪ್ರಮುಖವಾಗಿ ಭಾರತ ಈಗ ಬೃಹತ್ ಮಟ್ಟದಲ್ಲಿ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಿದೆ, ಅದರಲ್ಲೂ ಅದಿರು ಸೇರಿ ಅನೇಕ ಖನಿಜ ಸಂಪನ್ಮೂಲ ಭಾರತಕ್ಕೆ ಅತ್ಯಗತ್ಯ. ಹೀಗಿದ್ದಾಗ ಬ್ರೆಜಿಲ್ ಜೊತೆಗಿನ ಈ ಒಪ್ಫಂದದಿಂದ ದೊಡ್ಡ ಲಾಭ ನಿರೀಕ್ಷೆ ಮಾಡಲಾಗುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/india-and-brazil-targets-to-reach-the-30-billion-dollar-trade-by-the-2030-with-mineral-pact-011-444639.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo