
Karnataka
-Malathesha M
ಗ್ಯಾಸ್ ಸಿಗುತ್ತಿಲ್ಲ, ಹೋಟೆಲ್ ನಡೆಸಲು ಕೂಡ ಆಗುತ್ತಿಲ್ಲ ಎಂದು ಈಗಾಗಲೇ ಸಾವಿರಾರು ಹೋಟೆಲ್ ಮಾಲೀಕರು ಬಾಗಿಲು ಬಂದ್ ಮಾಡಿ ಬೀಗ ಹಾಕಿದ್ದಾರೆ. ಕರ್ನಾಟಕ ರಾಜ್ಯ ಒಂದರಲ್ಲೇ, ಸುಮಾರು 40,000 ಹೋಟೆಲ್ ಇದ್ದು ಲಕ್ಷಾಂತರ ಜನರು ಜೀವನ ಕಂಡುಕೊಂಡಿದ್ದಾರೆ ಈ ಹೋಟೆಲ್ ಉದ್ಯಮ ನಂಬಿ. ಆದರೆ ಇದೀಗ ಎಲ್ಪಿಜಿ ಸಿಗದೆ, ಗ್ಯಾಸ್ ಸಿಲಿಂಡರ್ ಇಲ್ಲದೆ ಹೋಟೆಲ್ ಒಲೆ ಉರಿಸುವುದೇ ಕಷ್ಟಕರವಾಗಿ ಎಲ್ಲಾ ನಾಶವಾಗುತ್ತಿದೆ ಎಂದು ಜನರು ಆಕ್ರೋಶ ಹೊರ ಹಾಕುತ್ತಿದ್ದರು. ಹೀಗಿದ್ದಾಗಲೇ ದಿಢೀರ್ ಸರ್ಕಾರ ಕೂಡ ಕಮರ್ಷಿಯಲ್ ಎಂದರೆ ಹೋಟೆಲ್ಗಳಿಗೆ ಸಪ್ಲೈ ಮಾಡುವ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಭಾರಿ ದೊಡ್ಡ ಬದಲಾವಣೆ ಮಾಡಿ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ಕಮರ್ಷಿಯಲ್ LPG ಗ್ಯಾಸ್ ಸಿಲಿಂಡರ್ ಸರಬರಾಜಿನ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನೇರವಾಗಿ ದೇಶದ ವ್ಯಾಪಾರ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಈ ಹೊಸ ನಿರ್ಧಾರ ಭರ್ಜರಿ ಖುಷಿ ಕೊಡುತ್ತಿದೆ ಹೋಟೆಲ್ ಮಾಲೀಕರಿಗೆ. ಅಂದಹಾಗೆ ಈಗ ರಾಜ್ಯಗಳಿಗೆ ನೀಡುತ್ತಿರುವ LPG ಕೋಟಾ ಶೇಕಡಾ 10 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರವು ತೀರ್ಮಾನ ಮಾಡಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ & ಸರಬರಾಜಿನ ನಡುವೆ ಇರುವ ಅಂತರ ಕಡಿಮೆ ಮಾಡುವುದು ಈ ನಿರ್ಧಾರದ ಉದ್ದೇಶವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಪಿಜಿ ಸಿಲಿಂಡರ್ ಸಿಗದೆ, ಗ್ಯಾಸ್ ಇಲ್ಲದೆ ಒದ್ದಾಡಿದ್ದ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಭರ್ಜರಿ ಖುಷಿ ಕೊಡುವ ಸುದ್ದಿ ಈಗ ಸಿಕ್ಕಂತಾಗಿದೆ.

ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಬಂಪರ್!
ಹೋಟೆಲ್, ರೆಸ್ಟೋರೆಂಟ್ & ಸಣ್ಣ ವ್ಯಾಪಾರಿಗಳು ಗ್ಯಾಸ್ ಲಭ್ಯತೆ ಅಸ್ಥಿರತೆ ಹಾಗೂ ಬೆಲೆ ಏರಿಳಿತಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ಈಗ ಹೆಚ್ಚುವರಿ ಕೋಟಾ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂಬ ಸುದ್ದಿಯು ಕೇಳಿಬರುತ್ತಲೇ ಗ್ಯಾಸ್ ಕೊರತೆ ಕಡಿಮೆಯಾಗುವ ಭರವಸೆ ಕೂಡ ಮೂಡಿದೆ. ಹಾಗೂ ಹಬ್ಬ & ವ್ಯಪಾರ ಹೆಚ್ಚಾಗಿರುವ ಸೀಸನ್ನಲ್ಲಿ ಬೆಲೆಗಳನ್ನ ಸ್ಥಿರವಾಗಿಡಲು ಸಹ ಇದು ಸಹಾಯವಾಗುತ್ತದೆ ಎಂದು ವ್ಯಾಪಾರಿಗಳು ಖುಷಿ ಪಟ್ಟಿದ್ದಾರೆ. ಸಣ್ಣ ಉದ್ಯಮಿಗಳಿಗೂ ಇದು ದೊಡ್ಡ ಮಟ್ಟದ ನೆರವಿನಂತೆ ಭಾಸವಾಗಿದ್ದು, ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಎದುರಾಗಿರುವ ಗ್ಯಾಸ್ ಸಿಲಿಂಡರ್ ಸಮಸ್ಯೆ ಮೊದಲ ಹಂತದಲ್ಲಿ ಮುಕ್ತಿ ಪಡೆದಂತೆ ಕಾಣುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕಮರ್ಷಿಯಲ್ LPG ಕೋಟಾದಲ್ಲಿ ಶೇಕಡಾ 10 ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/lpg-cylinder-supply-and-here-is-a-very-good-news-for-the-commercial-lpg-cylinder-buyers-now-011-447717.html. xn--babytilbehr-pgb.com does not claim ownership of this content. All rights remain with the original publisher.
