6 ಉಕ್ರೇನ್ ಪ್ರಜೆಗಳ ಬಂಧನ, ಭಾರತದ ನೆಲದಲ್ಲಿ ಉಕ್ರೇನಿಯನ್ನರ ಕೃತ್ಯ ತಿಳಿಯಿರಿ | NIA Probe | NIA Probe into Drone Supplies to Insurgents Tied to Mizoram Entry by Ukrainians and American

India

-Malathesha M

ರಷ್ಯಾ ವಿರುದ್ಧ ಯುದ್ಧ ಶುರು ಮಾಡಿರುವ ಉಕ್ರೇನ್ ಈಗ ಹಣಕ್ಕಾಗಿ ಮಾಡಬಾರದ ಕೆಲಸ ಮಾಡ್ತಾ ಇದೆ. ಅತ್ತ ಸುಮ್ಮನೆ ಇರದೆ ಇರಾನ್ ಹಾಗೂ ಅಮೆರಿಕ ನಡುವಿನ ಯುದ್ಧದಲ್ಲಿ ಮೂಗು ತೂರಿಸಿರುವ ಇದೇ ಉಕ್ರೇನ್, ಭಾರತದ ಆಂತರಿಕ ವಿಚಾರದಲ್ಲಿ ಕೂಡ ಕೈಹಾಕಿರುವ ಸ್ಫೋಟಕ ಸಂಗತಿ ಬಯಲಾಗಿ ಸಂಚಲನ ಸೃಷ್ಟಿ ಆಗಿದೆ. ಅಂದಹಾಗೆ ಮಿಜೋರಾಂ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶಿಸಿ, ಕಾನೂನು ಬಾಹೀರ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ಒಟ್ಟು ಆರು ಉಕ್ರೇನ್ ನಾಗರಿಕರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಇನ್ನೂ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿರುವ ಉಕ್ರೇನ್‌ಗೆ ಜಾಗತಿಕ ಮಟ್ಟದಲ್ಲಿ ಮಾನ ಹರಾಜಾಗಿದೆ.

ಮಿಜೋರಾಂ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ, ಅನುಮತಿ ಇಲ್ಲದೇ ಮ್ಯಾನ್ಮಾರ್‌ಗೆ ದಾಟುವುದು, ಜಾತಿ ಆಧಾರಿತ ಸಶಸ್ತ್ರ ಗುಂಪುಗಳಿಗೆ ತರಬೇತಿ ನೀಡುವುದು ಮತ್ತು ಯೂರೋಪ್‌ನಿಂದ ಡ್ರೋನ್‌ಗಳನ್ನು ಬಂಡುಕೋರರ ಜಾಲಕ್ಕೆ ತಲುಪಿಸಿದ್ದು ಸೇರಿದಂತೆ ಒಟ್ಟು 7 ವಿದೇಶಿಗರ ವಿರುದ್ಧ ಗಂಭೀರ ಆರೋಪ ಮಾಡಿ ಇದೀಗ ವಶಕ್ಕೆ ಪಡೆಯಲಾಗಿದೆ. ಇದೇ ಆರೋಪ ಹಿನ್ನೆಲೆ 6 ಉಕ್ರೇನ್ ನಾಗರಿಕರು ಹಾಗೂ ಒಬ್ಬ ಅಮೆರಿಕನ್ ಪ್ರಜೆಯನ್ನ ವಿಮಾನ ನಿಲ್ದಾಣದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

NIA Probe

ಉಕ್ರೇನ್ ಅಧ್ಯಕ್ಷ ಎಲ್ಲಿ ಹೋದ?

ಬಂಧಿತ ಆರೋಪಿಗಳ ಮೇಲೆ ಈಗ, ಭಾರತದ ವಿರುದ್ಧ ಉಗ್ರ ಚಟುವಟಿಕೆ ರೂಪಿಸುವ ಸಂಚು ಆರೋಪ ಹೊರಿಸಲಾಗಿದೆ. ಭಾರತದ ಬಗ್ಗೆ ಪದೇ ಪದೇ ತಲೆ ಬುಡ ಇಲ್ಲದ ಆರೋಪವನ್ನ ಮಾಡುತ್ತಿದ್ದ ಉಕ್ರೇನ್‌ಗೆ ಈಗ ಜಾಗತಿಕ ಮಟ್ಟದಲ್ಲಿ ಮಾನ ಹೋದಂತೆ ಆಗಿದೆ. ಅದರಲ್ಲೂ ಉಕ್ರೇನ್ ಅಧ್ಯಕ್ಷನಾದ ಝೆಲೆನ್ಸ್ಕಿಗೆ ಈ ಬೆಳವಣಿಗೆ ದೊಡ್ಡ ಆಘಾತ ನೀಡಿ, ರಷ್ಯಾ ವಿರುದ್ಧದ ಯುದ್ಧದಲ್ಲಿ ಭಾರತದ ಬಗ್ಗೆ ಮಾತನಾಡುತ್ತಿದ್ದ ಇದೇ ಉಕ್ರೇನ್ ಅಧ್ಯಕ್ಷ ತನ್ನ ದೇಶವು ಭಾರತದ ವಿಚಾರದಲ್ಲಿ ಮೂಗು ತೂರಿಸಿರುವ ಬಗ್ಗೆ ಉತ್ತರ ನೀಡಲು ಆಗದೆ ಸೈಲೆಂಟ್ ಆಗಿದ್ದಾನೆ.

ಆರೋಪಿಗಳು ಲಾಕ್ ಆಗಿದ್ದು ಹೇಗೆ?

ಅಂದಹಾಗೆ ಇದೀಗ ಅಮೆರಿಕ ಮೂಲದ ವ್ಯಕ್ತಿಯನ್ನ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಮೂವರು ಉಕ್ರೇನ್ ಮೂಲದವರನ್ನ ಲಖನೌ & ಇನ್ನುಳಿದ ಮೂವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಎಲ್ಲರನ್ನೂ ದೆಹಲಿಗೆ ಕರೆತಂದು ಕೋರ್ಟ್‌ನ ಎದುರು ಹಾಜರುಪಡಿಸಿ, 3 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಎನ್‌ಐಎ ತಂಡವು ಈ ಬಗ್ಗೆ ಪಕ್ಕಾ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ವಿದೇಶ ಆರೋಪಿಗಳ ಹೆಡೆಮುರಿ ಕಟ್ಟಿದೆ ಇದೀಗ. ಅಮೆರಿಕ ಮೂಲದ ವ್ಯಕ್ತಿಯನ್ನು ಮ್ಯಾಥ್ಯೂ ಅರನ್ ವ್ಯಾನ್ ಡೈಕ್ ಎಂದು ಗುರುತಿಸಲಾಗಿದೆ. ಹಾಗೇ ಉಕ್ರೇನ್ ಆರೋಪಿಗಳನ್ನು ಹರ್ಬಾ ಪೆಟ್ರೋ, ಸ್ಲಿವಿಯಾಕ್ ತರಾಸ್, ಇವಾನ್ ಸುಕ್ಮಾನೋವ್ಸ್ಕಿ & ಸ್ಟೆಫಾಂಕಿವ್ ಮರಿಯನ್, ಹೊಂಚಾರುಕ್ ಮಕ್ಸಿಮ್ & ಕಾಮಿನ್ಸ್ಕಿ ವಿಕ್ಟರ್ ಎಂದು ಗುರುತಿಸಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/nia-probe-into-drone-supplies-to-insurgents-tied-to-mizoram-entry-by-ukrainians-and-american-011-447517.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo