70th Filmfare Awards: ಶ್ರೀಮುರಳಿ ಅತ್ಯುತ್ತಮ ನಟ, ಕನ್ನಡ ಚಿತ್ರರಂಗದ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ | 70th Filmfare Awards South Sri murali Wins Best Actor for Bagheera Full List of Kannada Winners

Entertainment

oi-Manohara M

ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಸಮಾರಂಭಗಳಲ್ಲಿ ಒಂದಾದ 70ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ (Filmfare Awards South) ಭರ್ಜರಿಯಾಗಿ ಕೇರಳದ ಕೊಚ್ಚಿಯಲ್ಲಿ ನಡೆಯಿತು. 2024ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಿಗೆ ಈ ಬಾರಿಯ ಪ್ರಶಸ್ತಿಗಳು ಪ್ರಕಟಗೊಂಡಿವೆ. ಕನ್ನಡ ಚಿತ್ರರಂಗದ ಹಲವರು ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ.

‘ಶಾಖಾಹಾರಿ’ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ

2024ನೇ ಸಾಲಿನ ಕನ್ನಡ ವಿಭಾಗದಲ್ಲಿ “ಶಾಖಾಹಾರಿ” ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಲಭಿಸಿದೆ. ವಿಭಿನ್ನ ಕಥಾಹಂದರ ಮತ್ತು ನಿರೂಪಣೆಯ ಮೂಲಕ ಈ ಚಿತ್ರ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದಿತ್ತು.

Filmfare Awards

“ಬಘೀರ” ಸಿನಿಮಾದಲ್ಲಿನ ನಟನೆಗಾಗಿ ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. “ಕೋಳಿ ಎಸ್ರು” ಚಿತ್ರದ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಇತರ ಪ್ರಮುಖ ಪ್ರಶಸ್ತಿಗಳು

* ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೊಣನೂರು

* ಅತ್ಯುತ್ತಮ ಚಿತ್ರ (ವಿಮರ್ಶಕರು): ಬ್ಲಿಂಕ್

* ಅತ್ಯುತ್ತಮ ನಟ (ಕ್ರಿಟಿಕ್ಸ್): ಗೌರಿಶಂಕರ್-ಕೆರೆಬೇಟೆ

* ಅತ್ಯುತ್ತಮ ನಟಿ (ಕ್ರಿಟಿಕ್ಸ್): ಅಂಕಿತಾ ಅಮರ್-ಇಬ್ಬನಿ ತಬ್ಬಿದ ಇಳೆಯಲಿ

* ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ (ಬ್ಲಿಂಕ್)

* ಅತ್ಯುತ್ತಮ ಪೋಷಕ ನಟಿ: ಪ್ರಿಯಾ ಶತಮರ್ಷನ್‌ (ಭೀಮಾ)

* ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ)

Filmfare Awards

* ಅತ್ಯುತ್ತಮ ಗಾಯಕ: ಜಸ್ಕರನ್ ಸಿಂಗ್-‘ದ್ವಾಪರ’ ಹಾಡು

* ಅತ್ಯುತ್ತಮ ಗಾಯಕಿ: ಶ್ರುತಿ ಪ್ರಹ್ಲಾದ್-‘ಹಿತ್ತಲಕ ಕರಿಬೇಡ ​​ಮಾವ’ (ಕರಟಕ ದಮನಕ)

* ಅತ್ಯುತ್ತಮ ಗೀತರಚನೆ: ವಿ.ನಾಗೇಂದ್ರ ಪ್ರಸಾದ್ (ದ್ವಾಪರ ಹಾಡು)

* ಅತ್ಯುತ್ತಮ ಡೆಬ್ಯು ನಟ: ಸಮರ್ಜಿತ್ ಲಂಕೇಶ್ (ಗೌರಿ)

ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಸಮಾರಂಭಗಳಲ್ಲಿ ಒಂದಾದ 70ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಅದ್ಧೂರಿಯಾಗಿ ಶನಿವಾರ ಫೆಬ್ರವರಿ 21ರಂದು ಕೇರಳದ ಕೊಚ್ಚಿಯಲ್ಲಿರುವ ಅಡ್ಲಕ್ಸ್ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಸಂಜೆ ವೇಳೆ ತಾರೆಯರ ಕಂಗೊಳಿಸುವ ರೆಡ್ ಕಾರ್ಪೆಟ್ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭವಾಯಿತು. ಬಳಿಕ ಮುಖ್ಯ ವೇದಿಕೆಯಲ್ಲಿ ಮನಮೋಹಕ ನೃತ್ಯ ಪ್ರದರ್ಶನಗಳು, ವಿಶೇಷ ಸಂಗೀತ ಕಾರ್ಯಕ್ರಮಗಳು ಮತ್ತು ಹೃದಯಸ್ಪರ್ಶಿ ಕ್ಷಣಗಳ ನಡುವೆ ಪ್ರಶಸ್ತಿಗಳ ವಿತರಣೆ ನಡೆಯಿತು.

ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗಗಳ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ದಕ್ಷಿಣ ಭಾರತ ಚಿತ್ರರಂಗದ ತಾರೆಗಳು, ನಿರ್ದೇಶಕರು, ಸಂಗೀತ ನಿರ್ದೇಶಕರು ಹಾಗೂ ತಾಂತ್ರಿಕ ತಂಡಗಳ ಉಪಸ್ಥಿತಿಯಿಂದ ಈ ಸಮಾರಂಭ ಮತ್ತಷ್ಟು ಕಂಗೊಳಿಸಿ ಸಿನಿಪ್ರಿಯರಿಗೆ ಇದು ಮರೆಯಲಾಗದ ಸಂಭ್ರಮದ ರಾತ್ರಿಯಾಯಿತು.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/70th-filmfare-awards-south-sri-murali-wins-best-actor-for-bagheera-full-list-of-kannada-winners-444671.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo