ಪಾಕ್ ರಾಜಧಾನಿ ಇಸ್ಲಾಮಾಬಾದ್ ದುರ್ಘಟನೆ ಹಿನ್ನೆಲೆ, ಮೂವರು ಶಂಕಿತರು ಪೊಲೀಸರ ವಶಕ್ಕೆ | Islamabad Incident | Islamabad Incident And Authorities Said That Total 3 Suspects In Peshawar Taken To The Custody

International

oi-Malathesha M

ಪಾಕಿಸ್ತಾನ ಅನ್ನೋ ದೇಶ ಭೂಮಿ ಮೇಲೆ ಇರುವುದೇ ಮನುಷ್ಯರಿಗೆ ತೊಂದರೆ ಕೊಡಲು ಅಂತಾನೇ ಕಾಣುತ್ತದೆ. ಯಾಕಂದ್ರೆ ಜಗತ್ತಿನಲ್ಲಿ ಇರುವ ಸಮಸ್ಯೆಗಳೆಲ್ಲಾ ಇದೇ ಪಾಕಿಸ್ತಾನದಲ್ಲಿ ಬಂದು ಸೇರಿದಂತೆ ತೋರುತ್ತದೆ. ಅದರಲ್ಲೂ ಉಗ್ರರ ಕಾರ್ಖಾನೆ ಆಗಿರುವ ಪಾಕಿಸ್ತಾನ ತಾನು ಕೂಡ ಉದ್ದಾರ ಆಗಲ್ಲ & ತನ್ನ ಅಕ್ಕಪಕ್ಕದ ದೇಶಗಳು ಉದ್ಧಾರ ಆಗುತ್ತಿದ್ದರೆ ಅದನ್ನು ಸಹಿಸಿಕೊಳ್ಳದೆ ಕೆಡಿಸುವ ಕೆಲಸ ಮಾಡುತ್ತದೆ. ಆದರೆ ಹೀಗೆ ಪಾಕಿಸ್ತಾನ ತಾನು ತೋಡಿರುವ ಗುಂಡಿಗೆ ತಾನೇ ಬಿದ್ದಿದ್ದು, ಪಾಕ್ ರಾಜಧಾನಿಯಲ್ಲಿ ನಿನ್ನೆ ಉಗ್ರರಿಂದ ಭೀಕರ ದಾಳಿ ನಡೆದಿತ್ತು. ಈ ದಾಳಿಯ ಹಿನ್ನೆಲೆ ಇದೀಗ ಮೂವರು ಶಂಕಿತರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಪದೇ ಪದೇ ಘರ್ಷಣೆಗಳು ನಡೆದಿವೆ, ಇದಕ್ಕೆ ಕಾರಣ ಉಗ್ರವಾದ. ಅತ್ತ ತನ್ನ ನೆಲದಲ್ಲೇ ಉಗ್ರರನ್ನು ಸಾಕಿಕೊಂಡು, ಜಗತ್ತಿಗೆಲ್ಲಾ ತೊಂದರೆ ಕೊಡುವ ಪಾಕಿಸ್ತಾನಕ್ಕೆ ಈಗ ಅದೇ ಉಗ್ರರು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪಾಕಿಸ್ತಾನ ಮಾತ್ರ ಇದೇ ಉಗ್ರರ ಬೆನ್ನಿಗೆ ನಿಂತು ಸಪೋರ್ಟ್ ಮಾಡುತ್ತಾ ಬಂದಿದೆ. ಇಂತಹ ಸ್ಥಿತಿಯಲ್ಲಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಮಸೀದಿ ಮೇಲೆ ದಿಢೀರ್ ಬಾಂಬ್ ದಾಳಿ ನಡೆಸಿದ್ದ ಪಾಪಿ ಉಗ್ರರ ಗುಂಪು ಬರೋಬ್ಬರಿ 36 ಪಾಕಿಸ್ತಾನದ ಅಮಾಯಕರ ಜೀವ ಬಲಿ ಪಡೆದು, 150 ಜನರನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ಘಟನೆ ಸಂಬಂಧ ಇದೀಗ ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Islamabad Incident

ಆತಂಕದಲ್ಲಿ ನಲುಗಿರುವ ಪಾಕಿಸ್ತಾನದ ಜನರು

ಇಸ್ಲಾಮಾಬಾದ್ ಘಟನೆ ಸಹಜವಾಗಿ ಇಡೀ ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಹೊರಗೆ ಬರಲು ನೂರು ಬಾರಿ ಯೋಚಿಸುವ ಪರಿಸ್ಥಿತಿ ಪಾಕ್ ಜನರಿಗೆ ಎದುರಾಗಿದೆ. ಯಾವ ಕ್ಷಣದಲ್ಲಿ ಮತ್ತೆ ಉಗ್ರರ ದಾಳಿ ನಡೆಯುತ್ತೋ? ಎಂಬ ಭಯದಲ್ಲಿ ಪಾಕ್ ಜನರು ಇದ್ದಾರೆ. ಅದರಲ್ಲೂ ಇತ್ತೀಚೆಗೆ ಭಾರಿ ದೊಡ್ಡ ಪ್ರಮಾಣದ ಆತ್ಮಾಹುತಿ ದಾಳಿಗಳು ನಡೆಯುತ್ತಿರುವ ಕಾರಣಕ್ಕೆ, ಪಾಕಿಸ್ತಾನದ ನಗರ ಪ್ರದೇಶದ ಜನ ಜೀವ ಕೈಲಿಡಿದುಕೊಂಡು ಓಡಾಡುವ ಸ್ಥಿತಿ ಇದೆ. ಕೋರ್ಟ್, ಪ್ರಾರ್ಥನಾ ಮಂದಿರ ಸೇರಿದಂತೆ ಜನರು ಹೆಚ್ಚಾಗಿ ಸೇರುವ ಜಾಗಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಉಗ್ರರು. ಇದೀಗ ಇಸ್ಲಾಮಾಬಾದ್ ದಾಳಿಯ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಒಟ್ನಲ್ಲಿ ಪಾಕಿಸ್ತಾನಕ್ಕೆ ಈ ಜನ್ಮದಲ್ಲಿ ಬುದ್ಧಿ ಬರಲ್ಲ, ಇದೇ ರೀತಿ ತನ್ನ ವರ್ತನೆ ಮುಂದುವರಿಸಿದರೆ ಕೆಲವೇ ವರ್ಷಗಳಲ್ಲಿ ಪಾಕಿಸ್ತಾನ ಉಗ್ರರ ವಶವಾದರೂ ಅಚ್ಚರಿ ಇಲ್ಲ ಎಂಬ ಚರ್ಚೆ ಶುರುವಾಗಿದೆ. ಮತ್ತೊಂದು ಕಡೆ ಗಡಿಯಲ್ಲಿ ಉಗ್ರರ ದೊಡ್ಡ ದೊಡ್ಡ ಬಿಡಾರಗಳೇ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಲೇ ಇದೆ. ಆದರೂ ಪಾಕಿಸ್ತಾನದ ಸರ್ಕಾರ & ಪಾಕ್ ನೆಲದ ರಾಜಕಾರಣಿಗಳು ಮಾತ್ರ ಇದೇ ರೀತಿ ವರ್ತಿಸುತ್ತಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/islamabad-incident-and-authorities-said-that-total-3-suspects-in-peshawar-taken-to-the-custody-442897.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo