
Entertainment
oi-Manohara M
Kiccha Sudeep press meet: ನಟ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಇತ್ತೀಚೆಗಷ್ಟೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮಹತ್ವದ ಗೆಲುವಿನ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಈ ಹಿಂದೆ ಸುದೀಪ್ ಸೇರಿದಂತೆ ಸ್ಯಾಂಡಲ್‌ವುಡ್‌ನ ನಟರು ಹಾಗೂ ನಿರ್ದೇಶಕರ ಬಗ್ಗೆ ವೇದಿಕೆಯಲ್ಲೇ ಅವಾಚ್ಯ ಪದಗಳನ್ನು ಬಳಸಿರುವ ವಿಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದವು. ಇದಕ್ಕೆ ಇಂತಹ ಸಮಯದಲ್ಲಿ ಮೆಣಸಿನಕಾಯಿ ಯಾಕೆ? ಎಂದರು.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ವಿಷಯವನ್ನು ಬೇರೆಯದೇ ಶೈಲಿಯಲ್ಲಿ ತಿರುಗಿಸಿ ಉತ್ತರಿಸಿದರು. “ಇಂತಹ ಸಿಹಿಯಾದ ಸಮಯದಲ್ಲಿ ಮೆಣಸಿನಕಾಯಿ ಯಾಕೆ ಈಗ? ಅದಕ್ಕೆ ಇನ್ನೊಂದು ವೇದಿಕೆ ಹತ್ತುತ್ತೀನಿ, ಆಗ ಮಾತನಾಡ್ತೀನಿ. ಲಾಡು ತಿನ್ನುವ ಸಮಯದಲ್ಲಿ ಮೆಣಸಿನಕಾಯಿ ಬೇಡ” ಎಂದು ಹೇಳಿದರು.

30 ವರ್ಷದ ಅನುಭವದ ಮಾತು
ತಮ್ಮ ಉತ್ತರವನ್ನು ಇನ್ನಷ್ಟು ಸ್ಪಷ್ಟಪಡಿಸಿದ ಸುದೀಪ್, “ಇದು ನನ್ನ 30 ವರ್ಷದ ಅನುಭವದ ಮಾತು. ನಾವು ಈ ಕಪ್ ಗೆಲ್ಲೋಕೆ 12 ವರ್ಷ ಕಾದಿದ್ದೀವಿ. ಆ ವಿಷಯಕ್ಕೂ ಸ್ವಲ್ಪ ಕಾಯಿರಿ” ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿಸಿಎಲ್ ಗೆಲುವಿನ ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಿರುವ ಸುದೀಪ್, ವಿವಾದಾತ್ಮಕ ವಿಚಾರಗಳ ಬಗ್ಗೆ ಮಾತನಾಡಲು ಸೂಕ್ತ ಸಮಯ ಮತ್ತು ವೇದಿಕೆ ಬೇರೆ ಇದೆ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ.
ಸುದೀಪ್ ಅವರ ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು “ಸಮಯಕ್ಕೆ ತಕ್ಕ ಉತ್ತರ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿಸಿಎಲ್ ಕಪ್ ಗೆಲುವಿನ ಖುಷಿಯಲ್ಲಿ ಸ್ಯಾಂಡಲ್‌ವುಡ್ ಸಂಭ್ರಮದಲ್ಲಿರುವಾಗ, ಮುಂದಿನ ದಿನಗಳಲ್ಲಿ ಈ ವಿವಾದದ ಬಗ್ಗೆ ಸುದೀಪ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಫಿಲ್ಮ್ ಚೇಂಬರ್‌ಗೆ ದೂರು
ಈ ಹಿಂದೆಯೂ ಸಿನಿಮಾ ಸಿನಿಮಾ ವೇದಿಕೆಯಲ್ಲಿ ಕನಕಪುರ ಶ್ರೀನಿವಾಸ್ ಅವರು ನಟ ಕಿಚ್ಚ ಸುದೀಪ್ ಬಗ್ಗೆ ಆರೋಪಗಳನ್ನು ಮಾಡಿದ್ದರು. ಏಕವಚನದಲ್ಲಿ ನಿಂದಿಸಿದ್ದರು. ಆಗಲೂ ಶ್ರೀನಿವಾಸ್ ಅವರು ಮಾತನಾಡಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದರ ಬಗ್ಗೆಯೂ ಸುದೀಪ್ ಮಾತನಾಡಲಿಲ್ಲ. ಇತ್ತೀಚೆಗೆ ಕಾಟನ್‌ಪೇಟೆ ಸಿನಿಮಾದ ವೇದಿಕೆಯಲ್ಲೂ ಶ್ರೀನಿವಾಸ್ ಅವರು ನಟರಾದ ದರ್ಶನ್, ಧ್ರುವ ಸರ್ಜಾ, ಪುನೀತ್ ರಾಜ್‌ಕುಮಾರ್, ನಿರ್ದೇಶಕರಾದ ಪ್ರೇಮ್, ಎ.ಪಿ.ಅರ್ಜುನ್ ಸೇರಿದಂತೆ ಹಲವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರು.
ದರ್ಶನ್‌ಗೆ ನಾನು ದುಡ್ಡು ಕೊಟ್ಟಿದ್ದೆ. ಪುನೀತ್ ರಾಜ್‌ಕುಮಾರ್‌ನ ಹೀರೋ ಆಗಿದ್ದು ನನ್ನಿಂದ, ರಾಜ್‌ಕುಮಾರ್ ಇಂದ ಅಲ್ಲ. ನನಗೆ ಮೋಸ ಮಾಡಿದ್ದಕ್ಕೆ ದೇವರು ಮೇಲೆ ಕರ್ಕೊಂಡ ಎಂದು ನಾಲಿಗೆ ಹರಿಬಿಟ್ಟಿದ್ದರು. ಪ್ರೇಮ್ ಬಗ್ಗೆಯೂ ಏಕವಚನ ಬಳಸಿದ್ದ ಶ್ರೀನಿವಾಸ್, ಗಂಡಸಾಗಿದ್ರೆ, ಧಮ್ ಇದ್ರೆ ನನ್ ಮುಂದೆ ಬಂದು ನಿಲ್ಲೋಕೆ ಹೇಳಿ ಎಂದು ಸವಾಲ್ ಕೂಡ ಹಾಕಿದ್ದರು. ಈ ಸಂಬಂಧ ಶ್ರೀನಿವಾಸ್ ಅವರ ವಿರುದ್ಧ ಪ್ರೇಮ್ ಫಿಲ್ಮ್ ಚೇಂಬರ್‌ಗೆ ದೂರು ಸಹ ನೀಡಿದ್ದಾರೆ.
-

ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
-

ದರ್ಶನ್ ಪಾಪ ಜೈಲಲ್ಲಿದ್ದಾರೆ, ಪುನೀತ್ ಬದುಕಿದ್ದಾಗಲೇ ಕನಕಪುರ ಶ್ರೀನಿವಾಸ್ ಮಾತಾಡಬೇಕಿತ್ತು: ಪ್ರೇಮ್ ಕಿಡಿ
-

Gilli: ಗಿಲ್ಲಿ ನಟನ ವಿರುದ್ಧ ದೂರು, ಬಿಗ್ಬಾಸ್ ಗೆದ್ದ ಬೆನ್ನಲ್ಲೇ ದೊಡ್ಡ ಸಂಕಷ್ಟ
-

ಅವಾಚ್ಯ ಪದಗಳಿಂದ ನಿಂದನೆ; ಕನಕಪುರ ಶ್ರೀನಿವಾಸ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ನಿರ್ದೇಶಕ ಪ್ರೇಮ್ ದೂರು
-

Krishi Thapanda: ನಿರ್ಮಾಪಕನಿಗೆ ಬ್ಲಾಕ್ಮೇಲ್ ಪ್ರಕರಣ: ನಟಿ ಕೃಷಿ ತಾಪಂಡಗೆ ಪೊಲೀಸರಿಂದ ನೋಟಿಸ್
-

ಗಿಲ್ಲಿ ಮೇಲೆ ಸಿನಿಮಾ ಪ್ರಚಾರಕ್ಕೆ ಬಾರದ ಆರೋಪ; ವೈರಲ್ ಆಯ್ತು ಪ್ರಮೋಷನ್ ಮಾಡಿರುವ ಹಳೆಯ ವಿಡಿಯೋ
-

ಗಂಡಸಾದ್ರೆ, ಅವರಪ್ಪನಿಗೇ ಹುಟ್ಟಿದ್ರೆ ನನ್ನ ಮುಂದೆ ನಿಲ್ಲಲಿ: ಪ್ರೇಮ್, ಧ್ರುವ ಮೇಲೆ ರೊಚ್ಚಿಗೆದ್ದ ಕನಕಪುರ ಶ್ರೀನಿವಾಸ್
-

Gold Investment: ಚಿನ್ನ ಖರೀದಿಸಿ ನಷ್ಟಕ್ಕೆ ತುತ್ತಾಗದಿರಿ: ಭಾರತೀಯರಿಗೆ ಮುಕೇಶ್ ಅಂಬಾನಿ ಕಿವಿಮಾತು
-

ಅಪ್ಪು ಹೀರೋ ಆಗಿದ್ದು ನನ್ನಿಂದ, ನನಗೆ ಮೋಸ ಮಾಡಿದವರನ್ನ ದೇವರೇ ಕರ್ಕೊಂಡ: ಕನಕಪುರ ಶ್ರೀನಿವಾಸ್
-

ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಹುಣಸೆ: ತುಮಕೂರಿನ ತೋವಿನಕೆರೆಯಲ್ಲಿ ಫೆಬ್ರವರಿ 23ಕ್ಕೆ ಹುಣಸೆ ಕಾರ್ಯಾಗಾರ
-

ಹಾಸನಕ್ಕೆ ಡಬಲ್ ಧಮಾಕ: ಮೆಗಾ ಡೇರಿಗೆ 150 ಕೋಟಿ ರೂ. ಬಂಪರ್ ಕೊಡುಗೆ, ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ
-

Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಹಾವು-ಏಣಿ ಆಟ: ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರ
-

ಪಾಕಿಸ್ತಾನ ಮಾನ ಮತ್ತೊಮ್ಮೆ ಹರಾಜು, ಬಲೂಚಿಸ್ತಾನ ಘಟನೆಯಿಂದ ಬಯಲಾಯ್ತು ಕರಾಳ ಮುಖ | Balochistan Crisis
-

Gilli: ಗಿಲ್ಲಿ ನಟನ ವಿರುದ್ಧ ದೂರು, ಬಿಗ್ಬಾಸ್ ಗೆದ್ದ ಬೆನ್ನಲ್ಲೇ ದೊಡ್ಡ ಸಂಕಷ್ಟ
-

ಫೆಬ್ರವರಿ 7 ದಿನ ಭವಿಷ್ಯ: ಎಲ್ಲಾ ರಾಶಿಯವರ ಉದ್ಯೋಗ, ಹಣಕಾಸು, ಆರೋಗ್ಯ ಹಾಗೂ ಸಂಬಂಧಗಳ ಕುರಿತ ಸಂಪೂರ್ಣ ಭವಿಷ್ಯ ತಿಳಿಯಿರಿ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kiccha-sudeep-on-kanakapura-srinivas-controversy-why-talk-about-chilli-during-sweet-moment-442947.html. xn--babytilbehr-pgb.com does not claim ownership of this content. All rights remain with the original publisher.
